ETV Bharat / jagte-raho

ಉತ್ತರ ಪ್ರದೇಶದಲ್ಲಿ ಮಾಜಿ ಬ್ಲಾಕ್ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ

author img

By

Published : Jan 7, 2021, 10:59 AM IST

ಉತ್ತರ ಪ್ರದೇಶದ ಮೌ ಜಿಲ್ಲೆಯ ಮಾಜಿ ಬ್ಲಾಕ್ ಅಧ್ಯಕ್ಷನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದು, ಹಳೆ ವೈಷಮ್ಯಕ್ಕೆ ಪ್ರತೀಕಾರ ತೀರಿಸಿಕೊಂಡಿರಬಹುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

Former Mau block president shot dead in Lucknow
ಉತ್ತರ ಪ್ರದೇಶದಲ್ಲಿ ಮಾಜಿ ಬ್ಲಾಕ್ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ

ಲಖನೌ: ಉತ್ತರ ಪ್ರದೇಶದ ಮೌ ಜಿಲ್ಲೆಯ ಮೊಹಮ್ಮದಾಬಾದ್ ಗೊಹ್ನಾ ಬ್ಲಾಕ್​ನ ಮಾಜಿ ಅಧ್ಯಕ್ಷ ಅಜೀತ್ ಸಿಂಗ್​ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಇವರ ಇಬ್ಬರು ಸಹಚರರು ಗಾಯಗೊಂಡಿದ್ದಾರೆ.

ವಿಭೂತಿ ಖಾಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 8.45ರ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರು ಬಂದೂಕುಧಾರಿಗಳು ಕೃತ್ಯ ಎಸಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆ ವೇಳೆ ಯುಎಸ್ ಕ್ಯಾಪಿಟಲ್ ಒಳಗೆ ಗುಂಡಿನ ಮೊರೆತ: ನಾಲ್ವರ ಸಾವು

ಮೃತ ಅಜೀತ್ ಸಿಂಗ್ ವಿರುದ್ಧ ಕೊಲೆ ಸೇರಿದಂತೆ 18 ಪ್ರಕರಣಗಳು ದಾಖಲಾಗಿದ್ದು, ಡಿಸೆಂಬರ್ 31 ರಂದು ಅವರಿಗೆ ಮೌ ಜಿಲ್ಲೆಯಿಂದ ಬಹಿಷ್ಕಾರ ಹಾಕಲಾಗಿತ್ತು. ಇವರ ಮೇಲೆ ಗುಂಡು ಹಾರಿಸಿರುವ ವ್ಯಕ್ತಿಗಳು ಪರಿಚಿತರಿದ್ದು, ಹಳೆ ವೈಷಮ್ಯಕ್ಕೆ ಪ್ರತೀಕಾರ ತೀರಿಸಿಕೊಂಡಿರಬಹುದು. ತನಿಖೆ ಮುಂದುವರೆದಿದೆ ಎಂದು ಲಖನೌ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.