ಲಿಂಗಸುಗೂರು: ಐದು ಜನರ ತಂಡ ರಚಿಸಿಕೊಂಡು ದರೋಡೆ ನಡೆಸಲು ಸಂಚು ರೂಪಿಸಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಾಪುರಹಟ್ಟಿ ಕ್ರಾಸ್ ನಲ್ಲಿ ಸಂಶಯಾಸ್ಪದವಾಗಿ ಗುಂಪೊಂದು ನಡೆದಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಡಿವೈಎಸ್ ಪಿ ಎಸ್.ಎಸ್. ಹುಲ್ಲೂರು, ಸಿಪಿಐ ದೀಪಕ ಭೂಸರೆಡ್ಡಿ ಮಾರ್ಗದರ್ಶನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಶಿವಕುಮಾರ ಕುಂಬಾರ ಮುದಗಲ್ಲ, ರಾಮಲಿಂಗಪ್ಪ ಹೂಗಾರ ಕನಸಾವಿ, ದೇವೇಂದ್ರಪ್ಪ ತುರಡಗಿ ಚಿಕ್ಕಲೆಕ್ಕಿಹಾಳ, ಸಾಜೀದೋಷ ಮುದಗಲ್ಲ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುತ್ತಿಗೆ, ಖಾರದಪುಡಿ, ಕಬ್ಬಿಣದ ರಾಡನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೊತೆಗೆ ಬಂಧಿತರು ದರೋಡೆ ನಡೆಸಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.