ಸೂರತ್: ತನ್ನ 7 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗಿ ಅರೆಸ್ಟ್ ಆಗಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ಬುಧವಾರ ರಾತ್ರಿ ಪತ್ನಿ ಮನೆಯಲ್ಲಿರದ ವೇಳೆಯಲ್ಲಿ ಮಗಳು ಒಬ್ಬಳೇ ಇದ್ದಾಗ ಕಾಮುಕ ತಂದೆ ಕೃತ್ಯ ಎಸಗಿದ್ದಾನೆ. ಬಾಲಕಿಯ ತಾಯಿ ಮನೆಗೆ ಬಂದಾಗ ಮಗಳು ಅಳುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಮಗಳು ನಡೆದ ವಿಚಾರವನ್ನು ಹೇಳಿದ್ದು, ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಡ ವರಾಚಾ ಠಾಣಾ ಪೊಲೀಸರು ಒಂದೇ ಗಂಟೆಯಲ್ಲಿ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.