ETV Bharat / jagte-raho

ಮಗನಿಗೇ ಬೆಂಕಿ ಹಚ್ಚಿದ್ದ ಕಟುಕ ತಂದೆ.. ಚಿಕಿತ್ಸೆ ಫಲಿಸದೆ ಬಾಲಕ ಸಾವು - Hyderabad crime news

ತಂದೆಯ ನೀಚ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೇ ಉಸಿರು ನಿಲ್ಲಿಸಿದ್ದಾನೆ. ಹೆತ್ತ ತಂದೆಯೇ ಬೆಂಕಿ ಹಚ್ಚಿ ಮಗನನ್ನು ಕೊಲೆ ಮಾಡಿರುವ ಈ ಘಟನೆ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದೆ.

Father killed his son by pouring turpentine oil and set him on fire
ಮಗನಿಗೇ ಬೆಂಕಿ ಹಚ್ಚಿದ್ದ ಕಟುಕ ತಂದೆ
author img

By

Published : Jan 21, 2021, 10:09 AM IST

ಹೈದರಾಬಾದ್: ಜನವರಿ 17 ರಂದು ತೆಲಂಗಾಣದ ಹೈದರಾಬಾದ್​​ನಲ್ಲಿ ಹೆತ್ತ ತಂದೆಯೇ ಮಗನ ಮೇಲೆ ಟರ್ಪೆಂಟ್ ಆಯಿಲ್​ ಸುರಿದು ಬೆಂಕಿ ಹಚ್ಚಿದ್ದನು. ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕಿ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ತಮ್ಮ ಮಗ ಚರಣ್​​ನೊಂದಿಗೆ ಹೈದರಾಬಾದ್​​ನ ಕೆಪಿಹೆಚ್‌ಬಿ ಕಾಲೋನಿಯಲ್ಲಿ ಬಾಲು ದಂಪತಿ ವಾಸವಾಗಿದ್ದರು. ಶಾಲೆಗಳಿನ್ನೂ ಆರಂಭವಾಗದ ಕಾರಣ ಚರಣ್ ಮನೆಯಲ್ಲಿಯೇ ಆನ್​ಲೈನ್​ ಕ್ಲಾಸ್​ಗೆ ಹಾಜರಾಗುತ್ತ​, ಟ್ಯೂಷನ್​ಗೆ ಹೋಗುತ್ತಿದ್ದ. ಆದರೆ ಜ.17ರ ರಾತ್ರಿ ಬಾಲಕನ ತಂದೆ ಬಾಲು, ನೀನು ಟ್ಯೂಷನ್​ಗೆ ಪ್ರತಿದಿನ ಹೋಗುತ್ತಿಲ್ಲ, ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲವೆಂದು ಬೈದು, ಚರಣ್​ಗೆ ಹೊಡೆದಿದ್ದ. ಇದನ್ನು ತಡೆಯಲು ಬಂದ ಪತ್ನಿಯನ್ನು ದೂಡಿ, ಮಗನ ಮೇಲೆ ಟರ್ಪೆಂಟ್ ಆಯಿಲ್​ ಸುರಿದು ಬೆಂಕಿ ಹಚ್ಚಿದ್ದ.

ಇದನ್ನೂ ಓದಿ: ಸರಿ ಓದುತ್ತಿಲ್ಲ ಎಂದು ಮಗನಿಗೆ ಬೆಂಕಿ ಹಚ್ಚಿದ ಪಾಪಿ ತಂದೆ.. ಸಾವು-ಬದುಕಿನ ನಡುವೆ ಬಾಲಕ..

ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕನನ್ನು ಹೈದರಾಬಾದ್​​ನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಪಿಹೆಚ್‌ಬಿ ಠಾಣಾ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.