ರಾಯಚೂರು: ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆಯುತ್ತಿದ್ದ ತಂದೆ-ಮಗನನ್ನು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ದೇವರಭೂಪುರದಲ್ಲಿ ಬಂಧಿಸಲಾಗಿದೆ.
ದೇವರಭೂಪುರ ಗ್ರಾಮದ ತಂದೆ ಗೋವಿಂದಪ್ಪ ಭಜಂತ್ರಿ, ಮಗ ಗುಂಡಪ್ಪ ಬಂಧಿತ ಆರೋಪಿಗಳು. ಮನೆಯ ಹಿತ್ತಲಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಲಿಂಗಸೂಗೂರು ಪೊಲೀಸರು ದಾಳಿ ನಡೆಸಿ 20 ಸಾವಿರ ರೂಪಾಯಿ ಮೌಲ್ಯದ 12 ಕೆಜಿಯಷ್ಟು ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.