ETV Bharat / jagte-raho

ಖರೀದಿ ನಂತ್ರ ನೀವೂ ಹೀಗೆ ಮಾಡಬೇಡಿ... ಆನ್​​ಲೈನ್ ಶಾಪಿಂಗ್​​ ಹೆಸರಿನಲ್ಲಿ ನಡೀತಿದೆ ಮೋಸ!

author img

By

Published : Dec 13, 2019, 11:24 AM IST

ಆನ್​​ಲೈನ್ ಶಾಪಿಂಗ್ ಹೆಸರಿನಲ್ಲಿ ನಕಲಿ ತಂಡವೊಂದು ಯುವಕನೋರ್ವನ ಬ್ಯಾಂಕ್ ಖಾತೆಯಿಂದ ಹಣ ಪೀಕಿರುವ ಘಟನೆ ನಗರದಲ್ಲಿ ನಡೆದಿದೆ.

KN_RCR_2_12_Online_shopping_froud_case_10017
ಆನ್ ಲೈನ್ ಶಾಪಿಂಗ್ ಹೆಸರಿನಲ್ಲಿ ಮೋಸ: ಬ್ಯಾಂಕ್ ಖಾತೆಯಲ್ಲಿದ್ದ ಹಣ ಕ್ಷಣಮಾತ್ರದಲ್ಲಿ ಮಾಯ....

ರಾಯಚೂರು: ಆನ್​​ಲೈನ್ ಶಾಪಿಂಗ್ ಹೆಸರಿನಲ್ಲಿ ನಕಲಿ ತಂಡವೊಂದು ಯುವಕನೋರ್ವನ ಬ್ಯಾಂಕ್ ಖಾತೆಯಿಂದ ಹಣ ಪೀಕಿರುವ ಘಟನೆ ನಗರದಲ್ಲಿ ನಡೆದಿದೆ.

ಆನ್​ಲೈನ್ ಶಾಪಿಂಗ್ ಹೆಸರಿನಲ್ಲಿ ಮೋಸ: ಬ್ಯಾಂಕ್ ಖಾತೆಯಲ್ಲಿದ್ದ ಹಣ ಕ್ಷಣಮಾತ್ರದಲ್ಲಿ ಮಾಯ!

ರಾಯಚೂರಿನ ಆಶ್ರಯ ಕಾಲೋನಿಯ ನಿವಾಸಿ ತಾಹೇರ್, ಪಾಷ ಟ್ರೆಂಡ್ ಶಾರ್ಟ್ ಎಂಬ ಆ್ಯಪ್ ಮೂಲಕ ಮೂರು ಶರ್ಟ್ ಖರೀದಿ ಮಾಡಿದ್ದಾನೆ. ಆ ಶರ್ಟ್​ನಲ್ಲಿ ಡ್ಯಾಮೇಜ್ ಬಂದ ಕಾರಣ ಸಮಸ್ಯೆ ಹೇಳಲು ಕಸ್ಟಮರ್ ನಂಬರ್​​​ಗೆ ಕರೆ ಮಾಡಿದಾಗ ತಮ್ಮ ಖರೀದಿಯ ಮೊತ್ತ ರಿಫಂಡ್ ಮಾಡುತ್ತೇವೆಂದು ಅಕೌಂಟ್​​ನಲ್ಲಿರುವ 9,500 ರೂ. ಎಗರಿಸಿದ್ದಾರೆ. ಮೊದಲು‌ ಬ್ಯಾಂಕ್ ಖಾತೆಯ ಸಂಖ್ಯೆ ಕೇಳಿ ಆತನ ಮೊಬೈಲ್ ನಂಬರ್, ಖರೀದಿ ಮಾಡಿದ ಅಮೌಂಟ್ ಹೇಳಿ ಅಂತಾ 15 ನಿಮಿಷ ಮಾತನಾಡಿದ್ದಾನೆ. ನಂತರ ಒಟಿಪಿ ಕಳುಹಿಸಿ ಫಾರ್ವರ್ಡ್ ಮಾಡಲು ಹೇಳಿದ್ದಾನೆ. ಒಟಿಪಿ ಫಾರ್ವರ್ಡ್ ಮಾಡಿದ ನಂತರ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 9,500 ರೂ. ಎಗರಿಸಿದ್ದಾರೆ.

ಸದ್ಯ ತಾಹೇರ್ ಸ್ಥಳೀಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸುಲಭವಾಗಿ ಹಾಗೂ ರಿಯಾಯತಿ ದರದಲ್ಲಿ‌ ವಸ್ತುಗಳು ಸಿಗುತ್ತವೆ ಎಂದು ಕಂಡ ಕಂಡ ಆ್ಯಪ್ ಮೂಲಕ ಶಾಪಿಂಗ್ ಮಾಡಿದರೆ ಮೋಸ ಹೋಗೋದು ಗ್ಯಾಂರಂಟಿ ಎನ್ನುತ್ತಿದ್ದಾರೆ ಪೊಲೀಸರು.

Intro:ಗ್ರಾಹಕರೇ ಕಡಿಮೆ ದರದಲ್ಲಿ ವಸ್ತುಗಳು ಸಿಗುತ್ತವೆ ಎಂದು ಆನ್ ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರ ವಹಿಸಿ ಏಕೆಂದರೆ ಶಾಪಿಂಗ್ ಹೆಸರಿನಲ್ಲಿ ನಿಮ್ಮ ಅಕೌಂಟ್ ನಿಂದ ಹಣ ಪೀಕುವವರು ಇದ್ದಾರೆ.
ಅರೆ ಯಾಕೆ ಈ ಮಾತು ಅಂತ ಹೇಳುವ ಮುನ್ನ ಈ ಫೋಟೋ ನೋಡಿ‌ ಫೋಟೋದಲ್ಲಿರುವ ಯುವಕನಿಗೆ ಒಮ್ಮೆ ನೋಡಿ ಈತನ ಹೆಸರು ತಾಹೇರ್ ಪಾಶ,
ಈತ ರಾಯಚೂರಿನ ಆಶ್ರಯ ಕಾಲೋನಿಯ ನಿವಾಸಿ, ಹೀಗೆ ಶರ್ಟ್ಗಳನ್ನು ಕೈಯಲ್ಲಿಟ್ಟುಕೊಂಡು ಯಾಕೆ ತೋರಿಸುತಿದ್ದಾನೆ ಎಂದು ನಿಮ್ಮಲ್ಲಿ‌ ಪ್ರಶ್ನೆ ಮೂಡಬಹುದು

Body:ತಾಹೇರ್ ಪಾಶ ಟ್ರಂಡ್ ಶಾರ್ಟ್ ಎಂಬ ಆ್ಯಪ್ ಮೂಲಕ ಮೂರು ಶರ್ಟ್ ಖರೀದಿ ಮಾಡಿದ್ದಾನೆ.
ಆ ಶರ್ಟ್ನಲ್ಲಿ ಡ್ಯಾಮೇಜ್ ಬಂದ ಕಾರಣ ಸಮಸ್ಯೆ ಹೇಳಲು ಆ್ಯಪ್ ಕೆಳಿಗಿರುವ ಕಸ್ಟಮರ್ ನಂಬರ್ ಕರೆ ಮಾಡಿದಾಗ ತಮ್ಮ ಖರೀದಿಯ ಮೊತ್ತ ರಿಫಂಡ್ ಮಾಡುತ್ತೇವೆಂದು ಅಕೌಂಟ್ ನಲ್ಲಿರುವ ರೂ.9,500 ಎತ್ತುವಳಿ ಮಾಡಿದ್ದಾರೆ.
ಮೊದಲು‌ ಬ್ಯಾಂಕ್ ಖಾತೆಯ ಸಂಖ್ಯೆ,ಕೇಳಿದಾನ ನಂತರ ಕ್ಯಾಲ್ಕುಲೆಟರ್ ಓಪನ್ ಮಾಡಲಿ ಹೇಳಿ ಆತನ ಮೊಬೈಲ್ ನಂಬರ್,ಖರಿದಿ ಮಾಡಿದ ಅಮೌಂಟ್, ಕೌಂಟ್ ಮಾಡಲು ಹೇಳಿ 15 ನಿಮಿಷ ಮಾತನಾಡಿದ್ದಾನೆ.
ನಂತರ ಓಟಿಪಿ ಕಳುಹಿಸಿ ಫಾರ್ವರ್ಡ್ ಮಾಡಲು ಹೇಳಿದ್ದಾನೆ ಒಟಿಪಿ ಫಾರ್ವರ್ಡ್ ಮಾಡಿದ ನಂತರ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ರೂ.9,500 ಪಂಗನಾಮ ಹಾಕಿದ್ದಾನೆ.
ನಂತರ ಆ ಸಂಖ್ಯೆಗೆ ಪುನಃ ಕರೆ ಮಾಡಿದಾಗ ನಿಮ್ಮ ಅಕೌಂಟ್ ನಲ್ಲಿ ಹಣ ಇಲ್ಲ ಮತ್ತೊಂದು ಖಾತೆ ಸಂಖ್ಯೆ ಕೊಡಿ ಎಂದು ಪುನಃ ಹಣ ದೋಚಲು ಸಂಚು ರೂಪಿಸಿದ್ದಾನೆ ಆದ್ರೆ ತಾಹೇರ್ ನನ್ನ ಖಾತೆಯಲ್ಲಿನ ಹಣ ಈಗಾಗಲೇ ಹಣ ಕಡಿತವಾಗಿದೆ ಅದು ವಾಪಸ್ ಹಾಕಿ ಎಂದು ಕೇಳಿದರೆ ಫೋನ್ ಕಟ್ ಮಾಡಿದ್ದಾನೆ ನಂತರ ಪುನಃ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ ಆಗಲೇ ಪಂಗನಾಮ ಹಾಕಿದ ಸೂಚನೆ ದೊರೆತಿದೆ.
ನಂತರ ತಾಹೇರ್ ಸ್ಥಳೀಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಆದ್ರೆ ಇಲ್ಲಿ ಮೋಸ ತಾಹೇರ್ ಮೋಸ ಹೋಗಿದ್ದು ಕೇವಲ ರೂ.9,500ಗೆ ಇದೇನೆ ದೊಡ್ಡ ಮೊತ್ತವಲ್ಲ ಎಂದು ಅನಿಸಿರಬಹುದು ಆದ್ರೆ ಈ ಮೊತ್ತದ ಹಣ ಸಂಪಾದಿಸಬೇಕಾದ್ರೆ ಎರಡು ತಿಂಗಳು ಬೆವರು ಹರಿಸಬೇಕಿದೆ.
ಏಕಂದರೆ ಫ್ಲಂಬರ್ ಕೆಲಸಮಾಡುವ ಸಂಪಾದನೆ ಮಾಡುವ ಈತನಿಗೆ ಒಂದು ರೂ.ನೂ‌ ಖರ್ಚು ಮಾಡಲು ಕೆಲವೊಮ್ಮೆ ಹೊಂದೆ ಮುಂದೆ ಯೋಚಿಸಬೇಕಾಗುತ್ತದೆ.
ಅದಕ್ಕೆ ಹೇಳುವುದು ಆನ್ಲೈನ್ ಶಾಪಿಂಗ್ ಮಾಡುವಾಗ ಜಾಗೃತರಾಗಬೇಕಿದೆ, ಸುಲಭವಾಗಿ ಹಾಗೂ ರಿಯಾಯತಿ ದರದಲ್ಲಿ‌ವಸ್ತುಗಳು ಸಿಗುತ್ತವೆ ಎಂದು ಕಂಡ ಕಂಡ ಆ್ಯಪ್ ಮೂಲಕ ಶಾಪಿಂಗ್ ಮಾಡಿದರೆ ಪಂಗನಾಮ ಗ್ಯಾಂರಂಟಿ.

Conclusion:ಈಗ ಅಂಗೈಯಲ್ಲಿ ಪ್ರಪಂಚ, ಮೊಬೈಲ್ ವೇ ದೊಡ್ಡ ಮಾರುಕಟ್ಟೆಯಾಗಿದ್ದು ನಿಜ ಆದ್ರೆ ಗ್ರಾಹಕರನ್ನು ಪಂಗನಾಮ ಹಾಕಲೆಂದೇ ಕಾದು ಕುಳಿತ ಹಲವಾರು ಸೈಬರ್ ಕ್ರಿಮಿಗಳು ಸುಲಭವಾಗಿ ಫುಸಲಾಯಿಸಿ‌ ಯಾಮಾರಿಸಿ ನಾಮ ಹಾಕುತ್ತಾರೆ ಎಂದು ಆಲೋಚಿಸಬೇಕಿದೆ.
ಇದೇನು ಹೊಸ ಪ್ರಕರಣವಲ್ಲ ಇಂತಹ ಸಾಕಷ್ಟು ಸೈಬರ್ ಕ್ರೈಮ್ ದಿನನಿತ್ಯ ನಡೆಯುತ್ತಿದ್ದು ಸಾಕಷ್ಟು ಬೆಳಕಿಗೆ ಬರುವುದಿಲ್ಲ ಅದ್ದರಿಂದ ಆನ್ ಲೈನ್ ಶಾಪಿಂಗ್ ಮಾಡುವಾಗ ನಾವೇ ಎಚ್ಚರವಹಿಸಬೇಕಿದೆ.

ಬೈಟ್: 1)ತಾಹೆರ್ ಪಾಶ- ಹಣ ಕಳೆದುಕೊಂಡ‌ ಯುವಕ.

2) ಡಾ.ಸಿ.ಬಿ.ವೇದಮೂರ್ತಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.