ETV Bharat / jagte-raho

ಹಣ ದೋಚಲು ಸೈಬರ್ ಖದೀಮರ ಹೊಸ ತಂತ್ರ: ಈ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರ..

author img

By

Published : Aug 28, 2020, 10:01 AM IST

ಮಹಿಳೆಗೆ ಸೈಬರ್ ಖದೀಮನೊಬ್ಬ ನಾನು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ನಿಮ್ಮ ಅಕೌಂಟ್ ಸೇಫ್ ಆಗಿದೆ ಆದರೆ ಕೆಲವೊಂದು ಬದಲಾವಣೆ ಮಾಡಬೇಕು. ನಿಮ್ಮ ಮಾಹಿತಿ ಕೊಡಬೇಕಾಗುತ್ತೆ ಅಂತ ನಯವಾಗಿ ಹೇಳಿ ವಂಚಿಸಿದ್ದಾನೆ.

download-cyber-crooks-new-strategy-app-cheat
ಸೈಬರ್ ಖದೀಮರ ಹೊಸ ತಂತ್ರ, ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರ..

ಬೆಂಗಳೂರು: ಜಗತ್ತಿನಲ್ಲಿ ಟೆಕ್ನಾಲಜಿ ಮುಂಚೂಣಿಯಲ್ಲಿದ್ದಷ್ಟು, ಅದೇ ಟೆಕ್ನಾಲಜಿ ಮೂಲಕ ಸೈಬರ್ ದಂಧೆ ಕೂಡ ನಡೀತಿದೆ. ಗಿಫ್ಟ್ ವೋಚರ್, ಒನ್ ಡೆಸ್ಕ್, ಡಾರ್ಕ್ ವೆಬ್, ಗೂಗಲ್ ಪೇ ಇದೆಲ್ಲಾ ಆಯ್ತು ಈಗ ಕ್ವಿಕ್ ಸಪೋರ್ಟ್ ಆ್ಯಪ್ ಮೇಲೆ ಹ್ಯಾಕರ್ಸ್ ಗಳ ಕಣ್ಣು ಬಿದ್ದಿದೆ.

ನಿಮಗೆ ಗಿಫ್ಟ್ ವೋಚರ್ ಬಂದಿದೆ ಅದನ್ನ ರಿಡೀಮ್ ಮಾಡಿಕೊಳ್ಳೋಕೆ ನೀವು ಈ ಕ್ಯೂಆರ್ ಕೋಡ್ ಬಳಸಿ ಸ್ಕ್ಯಾನ್ ಮಾಡಿ ಅಂತ ನಕಲಿ ಕೋಡ್ ಕೊಟ್ಟು ಹಣ ದೋಚುತ್ತಿರುವ ಖದೀಮರು, ಸದ್ಯ ಹೈಫೈ ಆಗಿ ಮೋಸ ಮಾಡಲು ನಿಂತಿದ್ದಾರೆ. ಅವರು ಹಾಕಿದ್ದ ಗಾಳಕ್ಕೂ ನಮ್ಮ ಜನ ಬೀಳ್ತಿದ್ದಾರೆ. ಕ್ವಿಕ್ ಸಪೋರ್ಟ್ ಆ್ಯಪ್ ಮೂಲಕ ದೋಖಾ ಮಾಡೋಕೆ ಈಗ ಮುಂದಾಗಿದ್ದಾರೆ‌.

ಪ್ರೀತಿ ಎಂಬ ಮಹಿಳೆಗೆ ಸೈಬರ್ ಖದೀಮನೊಬ್ಬ ನಾನು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ನಿಮ್ಮ ಅಕೌಂಟ್ ಸೇಫ್ ಆಗಿದೆ. ಆದರೆ, ಕೆಲವೊಂದು ಬದಲಾವಣೆ ಮಾಡಬೇಕು. ನಿಮ್ಮ ಮಾಹಿತಿ ಕೊಡಬೇಕಾಗುತ್ತೆ ಅಂತ ನಯವಾಗಿ ವಂಚಿಸಿದ್ದಾನೆ. ಇದನ್ನ ನಂಬಿದ್ದ ಪ್ರೀತಿ ಓಕೆ ಎಂದು ಒಪ್ಪಿಕೊಂಡಿದ್ದಾರೆ. ಕೂಡಲೇ ಕ್ವಿಕ್ ಸಪೋರ್ಟ್ ಆ್ಯಪ್ ನ ಡೌನ್ಲೋಡ್ ಮಾಡಿಕೊಳ್ಳಿ ಎಂದಿದ್ದಾನೆ.

ಕೂಡಲೇ ಡೌನ್ಲೋಡ್ ಮಾಡಿದ ಪ್ರೀತಿ, ಆತ ಕೇಳಿದ್ದ ಎಲ್ಲಾ ಮಾಹಿತಿಯನ್ನು ಹಾಕಿದ್ದಾರೆ. ನಿಮಗೆ ಒಂದು ಓಟಿಪಿ ಬಂದಿದೆ ಎಂದು ಹೇಳಿದ್ದ ವ್ಯಕ್ತಿ ಅದನ್ನ ಹೇಳಿ ಅಂದಿದ್ದಾನೆ. ಅರಿವಿಲ್ಲದೆ ಆಕೆ ಓಟಿಪಿ ಹೇಳಿದ ಅರ್ಧ ಗಂಟೆಗೇ ಹಂತ ಹಂತವಾಗಿ 30 ಸಾವಿರ ಹಣ ಖಾತೆಯಿಂದ ರವಾನೆ ಆಗಿದೆ. ಸದ್ಯ ಈ ಕುರಿತು ಮತ್ತೆ ಅದೇ ನಂಬರ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ.

ಈ ಕ್ವಿಕ್ ಸಪೋರ್ಟ್ ಆ್ಯಪ್ ಅಂದ್ರೆ ಟೆಕ್ಕಿಗಳು ಯ್ಯೂಸ್ ಮಾಡೋದು. ಇದೊಂದು ರಿಮೋಟ್ ಕಂಟ್ರೋಲ್ ಆ್ಯಪ್. ಸದ್ಯ ಸೈಬರ್ ಖದೀಮನ ವಿರುದ್ಧ ವೈಟ್ ಫೀಲ್ಡ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.