ಬೆಂಗಳೂರು: ಮುತ್ತೂಟ್ ಫೈನಾನ್ಸ್ನಲ್ಲಿ ನಡೆದ ಕಳ್ಳತನ ಪ್ರಕರಣದಿಂದ ಗ್ರಾಹಕರು ಗಾಬರಿಗೊಂಡು ಸದ್ಯ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜಪುರಂ ಶಾಖೆಗೆ ಬರುತ್ತಿದ್ದಾರೆ.
ಯಾಕಂದ್ರೆ ಕಷ್ಟ ಇರುವ ಕಾಲದಲ್ಲಿ ಕೆಲ ಗ್ರಾಹಕರು ಮುತ್ತೂಟ್ ಫೈನಾನ್ಸ್ನಲ್ಲಿ ತಮ್ಮ ಚಿನ್ನಾಭರಣ ಅಡ ಇಟ್ಟಿದ್ದರು. ಅಡವಿಟ್ಟ ಚಿನ್ನಾಭರಣ ಕಳುವಾಗಿರುವ ಹಿನ್ನೆಲೆ ಗ್ರಾಹಕರು ಹೆದರಿ ಸಾಲ ವಾಪಸ್ ಮಾಡುತ್ತೇವೆ. ಚಿನ್ನಾಭರಣ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ ಮುತ್ತೂಟ್ ಸಿಬ್ಬಂದಿ 20 ದಿನಗಳ ಕಾಲ ಕಾಲಾವಕಾಶ ಕೊಡಿ. ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗ ನಿಮ್ಮ ಚಿನ್ನಾಭರಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನು ಓದಿ: ಬೆಂಗಳೂರಲ್ಲಿ 77 ಕೆಜಿ ಚಿನ್ನಾಭರಣ ದರೋಡೆ ಪ್ರಕರಣ... ಖದೀಮರು ಮಾಡಿದ್ರಂತೆ ಭರ್ಜರಿ ಪ್ಲಾನ್!
ಡಿ. 23ರ ತಡರಾತ್ರಿ 10 ಜನರ ತಂಡ ಸುಮಾರು 77 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಮತ್ತೊಂದೆಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, 12 ಮಂದಿ ಸೆಕ್ಯುರಿಟಿ ಗಾರ್ಡ್ಗಳಿಂದ ಈ ಕೃತ್ಯ ನಡೆದಿರುವ ಗುಮಾನಿ ಇದೆ. ಆದ್ದರಿಂದ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದ ಮೂರು ತಂಡ ಆರೋಪಿಗಳ ಸುಳಿವು ಹುಡುಕಿ ನೇಪಾಳ ಗಡಿಯಲ್ಲಿ ಶೋಧ ಮುಂದುವರೆಸಿದೆ.