ಚಾಮರಾಜನಗರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪತ್ನಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಘವಪುರ ಗ್ರಾಮದ ನಾಗರಾಜನಾಯ್ಕ (40) ಎಂಬಾತನನ್ನು, ಹೆಂಡತಿ ಪದ್ಮಾ(26) ಹಾಗೂ ಈಕೆಯ ಪ್ರಿಯಕರ ಮಣಿಕಂಠ (26) ಅನೈತಿಕ ಸಂಬಂಧಕ್ಕಾಗಿ ಕೊಂದು ಕಳಲೆ ನಾಲೆಗೆ ಕಲ್ಲು ಕಟ್ಟಿ ಎಸೆದು ನಾಪತ್ತೆ ನಾಟಕವಾಡಿ ಸಿಕ್ಕಿ ಬಿದ್ದಿದ್ದರು.
ಪ್ರಕರಣ ಬೇಧಿಸಿದ ಬೇಗೂರು ಠಾಣೆ ಪೊಲೀಸರು ಪ್ರಿಯಕರನನ್ನು ಚಾಮರಾಜನಗರ ಕಾರಾಗೃಹಕ್ಕೆ, ಪ್ರಿಯತಮೆಯನ್ನು ಮೈಸೂರು ಜೈಲಿಗೆ ಕಳುಹಿಸಿದ್ದರು. ಈ ವೇಳೆ, ಆಕೆಗೆ ಕೊರೊನಾ ದೃಢವಾಗಿರುವುದರಿಂದ ಮೈಸೂರು ಕೋವಿಡ್ ಆಸ್ಪತ್ರೆಗೆ ಜೈಲು ಸಿಬ್ಬಂದಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹನೂರು ತಹಶೀಲ್ದಾರ್ಗೂ ಕೊರೊನಾ:
ಹನೂರು ತಹಶೀಲ್ದಾರ್ಗೂ ಇಂದು ಕೊರೊನಾ ಸೋಂಕು ದೃಢಪಟ್ಟು, ಹೋಂ ಐಸೋಲೇಷನ್ಗೆ ಒಳಗಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.