ಚಂದ್ರಪುರ (ಮಹಾರಾಷ್ಟ್ರ): ವಿಕಾಸ್ ಆಮ್ಟೆ ಅವರ ಪುತ್ರಿ ಮತ್ತು ಖ್ಯಾತ ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳಾದ ಡಾ.ಶೀತಲ್ ಆಮ್ಟೆ ಚಂದ್ರಪುರದ ಆನಂದಭವನ ಆಶ್ರಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಇಂಜೆಕ್ಷನ್ ಚುಚ್ಚಿಕೊಂಡು ಇಂದು ಬೆಳಗ್ಗೆ ಶೀತಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರೋರಾ ಠಾಣೆಯ ಪೊಲೀಸ್ ಅಧಿಕಾರಿ ಪಿ. ಪೆಂಡಾರ್ಕರ್ ಹೇಳಿದ್ದಾರೆ.
ಡಾ.ಶೀತಲ್, ಮ್ಯಾಗ್ಸಸೇ ಪ್ರಶಸ್ತಿ ವಿಜೇತ ಮುರಳೀಧರ ಡಿ. ಆಮ್ಟೆ ಅಲಿಯಾಸ್ ಬಾಬಾ ಆಮ್ಟೆ ಅವರ ಮೊಮ್ಮಗಳಾಗಿದ್ದು, ಕುಷ್ಠರೋಗಿಗಳಿಗಾಗಿ ಸೇವೆ ಸಲ್ಲಿಸುವ ಮಹಾರೋಗಿ ಸೇವಾ ಸಮಿತಿಯ ಸಿಇಒ ಆಗಿದ್ದರು.