ಬೆಂಗಳೂರು: ಸರ್ವಿಸ್ ಬಿಲ್ನಲ್ಲಿ ವ್ಯತ್ಯಾಸವಾಗಿದೆ ಎಂದು ಕಾರ್ ಮಾಲೀಕನೋರ್ವ ಶೋರೂಮ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಹೆಚ್‌ಎಎಲ್ ನ ಕುಂದಲಹಳ್ಳಿಯ ನಂದಿ ಟಯೋಟೋದಲ್ಲಿ ನಡೆದಿದೆ.
ನಂದಿ ಟೊಯೋಟಾ ಶೋರೂಮ್‌ನಲ್ಲಿ ಶಿವಕುಮಾರ್ ಎಂಬುವರು ಕಳೆದ ವರ್ಷ ಕಾರು ಖರೀದಿಸಿದ್ದರು. ಇತ್ತೀಚೆಗೆ ಕಾರಿನ ಶೋ ರೂಮ್ಗೆ ತನ್ನ ಸ್ನೇಹಿತ ಪುನೀತ್ ಜೊತೆಯಲ್ಲಿ ತೆರಳಿ ಕಾರ್ ಸರ್ವಿಸ್ಗೆ ಬಿಟ್ಟಿದ್ದರು. ಒಂದು ದಿನದ ಬಳಿಕ ಕಾರ್ ವಾಪಸ್ ಪಡೆಯಲು ಶೋರೂಮ್ಗೆ ಹೋದಾಗ ಕಾರ್ ಸರ್ವಿಸ್ ಮಾಡಿದ ಬಿಲ್ನಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಪ್ರಶ್ನಿಸಿದ್ದರಂತೆ. ನಂತರ ಮಾತಿಗೆ ಮಾತು ಬೆಳೆದು ಮ್ಯಾನೇಜರ್ ಗುರುನಾಥ್ ಆವಾಜ್ ಹಾಕಿದ್ದರು ಎನ್ನಲಾಗ್ತಿದೆ. ಇದರಿಂದ ರೊಚ್ಚಿಗೆದ್ದ ಶಿವಕುಮಾರ್ ಮತ್ತು ಪುನೀತ್ ಮ್ಯಾನೇಜರ್ ಗೆ ಚೆನ್ನಾಗಿ ಥಳಿಸಿದ್ದರು ಎಂದು ತಿಳಿದುಬಂದಿದೆ.
ಸದ್ಯ ಗಲಾಟೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತಂತೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.