ETV Bharat / jagte-raho

ಪತ್ನಿ‌ ಮೇಲೆ ಮಾರಣಾಂತಿಕ ಹಲ್ಲೆ: ಗಂಡನಿಗೆ 5 ವರ್ಷ ಜೈಲು, 1.35 ಲಕ್ಷ ದಂಡ - Assault on wife

ಪತ್ನಿ ಮಂಜುಳ ಗಂಡನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ 2017 ಆಗಸ್ಟ್ 31 ರಂದು ದೂರು ನೀಡಿದ್ದರು. ಈ ದೂರಿನನ್ವಯ ಆಗಿನ ಪಿಎಸ್​​ಐ ವನರಾಜು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

assault-on-wife-her-husband-is-jailed-punishment-kollegala
ಪತ್ನಿ‌ ಮೇಲೆ ಮಾರಣಾಂತಿಕ ಹಲ್ಲೆ, ಗಂಡನಿಗೆ 5 ವರ್ಷ ಜೈಲು 1.35 ಲಕ್ಷ ದಂಡ
author img

By

Published : Oct 23, 2020, 7:36 PM IST

ಕೊಳ್ಳೇಗಾಲ: ಪತ್ನಿಗೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 1.35 ಲಕ್ಷ ರೂ. ದಂಡವನ್ನು ವಿಧಿಸಿದೆ.

ತಾಲೂಕಿನ ಧನಗೆರೆ ಗ್ರಾಮದ ಮಹದೇವ ಶಿಕ್ಷೆಗೊಳಗಾದ ಆರೋಪಿ. ಈತ ಅದೇ ಗ್ರಾಮದ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಪತ್ನಿ ಮಂಜುಳ ಗಂಡ ಮಹದೇವನೊಂದಿಗೆ ಅಕ್ರಮ ಸಂಬಂಧದ ಬಗ್ಗೆ ದಿನ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಪತಿ ಮಹದೇವ ಪತ್ನಿ ಮಂಜುಳ ಬಲಗೈ ಬೆರಳನ್ನು ಕುಡುಗೋಲಿನಿಂದ ಕತ್ತರಿಸಿದ್ದಾನೆ.

ಈ ಮಧ್ಯೆ ಮಂಜುಳ ಅವರ ತಾಯಿ ಜಗಳವನ್ನು ಬಿಡಿಸಲು ಬಂದ ಸಂದರ್ಭದಲ್ಲಿ ಅವರ ಮೇಲೂ ಮಹದೇವ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಪತ್ನಿ ಮಂಜುಳ ಗಂಡನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ 2017 ಆಗಸ್ಟ್ 31 ರಂದು ದೂರು ನೀಡಿದ್ದರು. ಈ ದೂರಿನನ್ವಯ ಆಗಿನ ಪಿಎಸ್​​ಐ ವನರಾಜು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

ಇಂದು ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನಯ್ ಅವರು, 5 ವರ್ಷ ಜೈಲು ಶಿಕ್ಷೆ ಹಾಗೂ 1.35 ಲಕ್ಷ ದಂಡವನ್ನು ವಿಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.