ಹೈದರಾಬಾದ್: ಆಂಧ್ರ ಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿ.ಭಾಸ್ಕರ್ ರಮಣ ಮೂರ್ತಿ ಹೈದರಾಬಾದ್ನ ನಾಗೋಲ್ನಲ್ಲಿರುವ ಅಪಾರ್ಟ್ಮೆಂಟ್ನ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1987ರ ಬ್ಯಾಚ್ನ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿರುವ ರಮಣ ಮೂರ್ತಿ, ಇಂದು ಬೆಳಗ್ಗೆ ನಾಗೋಲ್ನ ಅಪಾರ್ಟ್ಮೆಂಟ್ವೊಂದರ ಐದನೇ ಮಹಡಿಯಿಂದ ಜಿಗಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ತಮ್ಮ ಪತಿ ಕೆಲಸದ ಒತ್ತಡದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಮಣ ಮೂರ್ತಿ ಅವರ ಪತ್ನಿ ಆರೋಪಿಸಿದ್ದಾರೆ.