ವಿಶಾಖಪಟ್ಟಣಂ: ಆಟೋರಿಕ್ಷಾದಲ್ಲಿ ಸಾಗಿಸಲಾಗುತ್ತಿದ್ದ 40ಕೆ.ಜಿ ಗಾಂಜಾ ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಅನಕಪಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಶಾಖಪಟ್ಟಣಂನ ಗ್ರಾಮೀಣ ಪ್ರದೇಶದ ತುಮ್ಮಲಾಪಲ್ಲಿ ಎಂಬಲ್ಲಿ ಗಾಂಜಾ ಸಮೇತ ಎರಡು ಮೋಟಾರು ಸೈಕಲ್, ಆಟೋರಿಕ್ಷಾ ಹಾಗು 33,000 ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ನಾಲ್ವರಲ್ಲಿ ಉತ್ತರ ಪ್ರದೇಶದ ಮೂಲದವರೂ ಕೂಡಾ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.