ETV Bharat / jagte-raho

'ಅತ್ಯಾಚಾರ'​ ಆರೋಪದಡಿ​ ದೂರು ದಾಖಲಿಸಿಕೊಳ್ಳಲು ಪೊಲೀಸರ ನಕಾರ ಆರೋಪ - ರಾಜಸ್ಥಾನ ಅತ್ಯಾಚಾರ ಪ್ರಕರಣ

ತನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಲು ಪೊಲೀಸ್​ ಠಾಣೆಗೆ ಹೋದರೆ, 'ಸಾಮಾನ್ಯ ಪ್ರಕರಣ' ಎಂದು ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಆದರೆ 'ಅತ್ಯಾಚಾರ' ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ನಕಾರ ಮಾಡಿದ್ದಾರೆ ಎಂದು ಅಪ್ರಾಪ್ತೆಯರ ತಂದೆ ಆರೋಪಿಸಿದ್ದಾರೆ.

Rajasthan police deny it failed to act on 'rape' complaint
ಅತ್ಯಾಚಾರ
author img

By

Published : Oct 1, 2020, 5:46 PM IST

ಬರಾನ್​: ತನ್ನಿಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ ಎಂದು ತಂದೆ ದೂರು ನೀಡಲು ಠಾಣೆಗೆ ಹೋದರೆ​ 'ಅತ್ಯಾಚಾರ'​ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿರುವ ಆರೋಪ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಕೇಳಿಬಂದಿದೆ.

ಬರಾನ್ ಜಿಲ್ಲೆಯ ಕೊಟ್ವಾಲಿ ಪ್ರದೇಶದಲ್ಲಿ ವಾಸವಾಗಿರುವ 13 ಮತ್ತು 15 ವರ್ಷದ ಸಹೋದರಿಯರನ್ನು ಕರೆದೊಯ್ದಿದ್ದ ವ್ಯಕ್ತಿಯೊಬ್ಬ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ದೂರು ನೀಡಲು ಪೊಲೀಸ್​ ಠಾಣೆಗೆ ಹೋದರೆ, 'ಸಾಮಾನ್ಯ ಪ್ರಕರಣ' ಎಂದು ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಆದರೆ 'ಅತ್ಯಾಚಾರ' ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ನಕಾರ ಮಾಡಿದ್ದಾರೆ ಎಂದು ಅಪ್ರಾಪ್ತೆಯರ ತಂದೆ ಆರೋಪಿಸಿದ್ದಾರೆ.

ಬಾಲಕಿಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ವೇಳೆ ತಾವೇ ಸ್ವಯಂಪ್ರೇರಿತರಾಗಿ ವ್ಯಕ್ತಿಯ ಜೊತೆ ಹೋಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಬಾಲಕಿಯರು ಯಾರ ಮೇಲೂ ಅತ್ಯಾಚಾರ ಆರೋಪ ಹೊರಿಸಿಲ್ಲ, ಅಲ್ಲದೇ ನಮ್ಮ ತಂದೆ ನಮ್ಮಿಷ್ಟಕ್ಕನುಗುಣವಾಗಿ ನಮಗೆ ಬದುಕಲು ಬಿಟ್ಟಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ನಾವು ರೇಪ್ ಕೇಸ್​ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.