ETV Bharat / jagte-raho

ಹತ್ತಿ ನಡುವೆ ಗಾಂಜಾ ಬೆಳೆ: ಆರೋಪಿ ಅರೆಸ್ಟ್ - ಗಾಂಜಾ ಗಿಡ ಸಮೇತ ಆರೋಪಿ ಬಂಧನ

ಜಮೀನಿನಲ್ಲಿ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಕುರಿತು ಖಚಿತ ಮಾಹಿತಿ ‌ಮೇರೆಗೆ ಮುಳಗುಂದ ಪೊಲೀಸರು ದಾಳಿ ನಡೆಸಿ‌ ಗಾಂಜಾ ಗಿಡ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

Arrest
Arrest
author img

By

Published : Oct 15, 2020, 9:20 AM IST

ಗದಗ: ಹತ್ತಿ ಬೆಳೆ ನಡುವೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಮುಳಗುಂದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಪ್ಪ ನಾಗಪ್ಪ ಆರೇರ್ ಬಂಧಿತ ಆರೋಪಿ. ಮುಳಗುಂದ ಸಮೀಪದ ಯಲಿಶಿರುಂದ ರಸ್ತೆಯಲ್ಲಿರುವ ತನ್ನ ಜಮೀನಿನಲ್ಲಿ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ. ಈ ಕುರಿತು ಖಚಿತ ಮಾಹಿತಿ ‌ಮೇರೆಗೆ ಮುಳಗುಂದ ಪೊಲೀಸರು ದಾಳಿ ನಡೆಸಿ‌, 17 ಸಾವಿರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇನ್ನು ಪೊಲೀಸರ ಕಾರ್ಯಾಚರಣೆಯಲ್ಲಿ ಪಿಎಸ್ಐ ಸಚಿನ್ ಆಲಮೇಲಕರ್, ಎಎಸ್​​​ಐ ಎ.ಕೆ.ಮಾಳವಾಡ, ಸಿಬ್ಬಂದಿ ಹೆಚ್.ಐ.ಕಲ್ಲಣ್ಣವರ್, ಫ್ರಭಯ್ಯ ಕೊಡಬಾಳಮಠ, ಬಿ.ಸಿ.ಕೋಳಿವಾಡ, ಎನ್.ಎನ್.ದಳವಾಯಿ, ತಹಶೀಲ್ದಾರ್ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.