ETV Bharat / jagte-raho

ಅಬ್ದುಲ್ ಸಲಾಂ ಕುಟುಂಬ ಆತ್ಮಹತ್ಯಾ ಪ್ರಕರಣ: ಸರ್ಕಲ್ ಇನ್ಸ್​ಪೆಕ್ಟರ್​ ಅಮಾನತು

ಆಟೋ ಚಾಲಕ ಅಬ್ದುಲ್ ಸಲಾಂ ಹಾಗೂ ಆತನ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಸರ್ಕಲ್ ಇನ್ಸ್​ಪೆಕ್ಟರ್​ನನ್ನು ಅಮಾನತು ಮಾಡಲಾಗಿದೆ.

abdul salam family
ಅಬ್ದುಲ್ ಸಲಾಂ ಕುಟುಂಬ
author img

By

Published : Nov 8, 2020, 5:33 PM IST

ಕರ್ನೂಲ್ (ಆಂಧ್ರ ಪ್ರದೇಶ): ಆಟೋ ಚಾಲಕ ಅಬ್ದುಲ್ ಸಲಾಂ ತನ್ನ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಲ್ ಇನ್ಸ್​ಪೆಕ್ಟರ್ ಓರ್ವವನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣವನ್ನು ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದ್ದು, ಆತ್ಮಹತ್ಯೆ ವಿಚಾರದ ಅಂಗವಾಗಿ ತನಿಖೆ ನಡೆಯುತ್ತಿರುವಾಗಲೇ ಸರ್ಕಲ್ ಇನ್ಸ್​ಪೆಕ್ಟರ್ ಅನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ನಾನ್ಯಾವುದೇ ತಪ್ಪು ಮಾಡಿಲ್ಲ...!! ಸೆಲ್ಫಿ ವಿಡಿಯೋ ಮಾಡಿ ಕುಟುಂಬದ ನಾಲ್ವರು ಆತ್ಮಹತ್ಯೆ

ಡಿಜಿಪಿ ಗೌತಮ್ ಸಾವಂಗ್ ಎಪಿಎಸ್​ಪಿ ಬೆಟಾಲಿಯನ್​ನ ಐಜಿ ಶಂಕಬ್ರತಾ ಬಾಗ್ಚಿ ಹಾಗೂ ಗುಂಟೂರು ಹೆಚ್ಚುವರಿ ಎಸ್ಪಿ ಆರಿಫ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ನಂದ್ಯಾಲ್ ಸರ್ಕಲ್ ಇನ್ಸ್​ಪೆಕ್ಟರ್ ಸೋಮಶೇಖರ್​ ರೆಡ್ಡಿ ಅವರನ್ನು ಅಮಾನತುಗೊಳಿಸಿ ಕರ್ನೂಲ್ ಶ್ರೇಣಿಯ ಡಿಐಜಿ ವೆಂಕಟ್ರಾಮಿ ರೆಡ್ಡಿ ಆದೇಶಿಸಿದ್ದಾರೆ.

ಏನು ಈ ಘಟನೆ..?

ಅಬ್ದುಲ್ ಸಲಾಮ್ ಆಟೋ ಚಾಲಕನಾಗಿದ್ದು, ಈತ ನಡೆಸುತ್ತಿದ್ದ ಆಟೋದಲ್ಲಿ ಪ್ರಯಾಣಿಕರೊಬ್ಬರು 70,000 ರೂ. ಹಣವನ್ನು ಬಿಟ್ಟು ಹೋಗಿ, ಆ ಹಣವನ್ನು ಸಲಾಂ ಕದ್ದಿದ್ದಾನೆಂದು ದೂರು ದಾಖಲಾಗಿತ್ತು. ಈ ಕುರಿತಾಗಿ ಪೊಲೀಸರು ಆತನಿಗೆ ಪದೇ ಪದೇ ಠಾಣೆಗೆ ಬರುವಂತೆ ಕಿರುಕುಳ ನೀಡಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ನೊಂದ ಸಲಾಂ ಕುಟುಂಬ ರೈಲ್ವೆ ಹಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಆತ್ಮಹತ್ಯೆಗೂ ಮುನ್ನ ಅಬ್ದುಲ್ ಸಲಾಂ ದಾಖಲಿಸಿದ ಸೆಲ್ಫಿ ವಿಡಿಯೋ ಪೊಲೀಸರಿಗೆ ಸಿಕ್ಕಿದೆ. ಅಬ್ದುಲ್ ಸಲಾಂ ಅವರು ಹಣವನ್ನು ಕದ್ದಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದು, ಪೊಲೀಸರ ವಿರುದ್ಧ ತನಿಖೆಗಾಗಿ ಹಾಗೂ ನ್ಯಾಯಕ್ಕಾಗಿ ಜನಪರ ಸಂಘಟನೆಗಳು ಒತ್ತಾಯಿಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.