ಗುಂಟೂರು (ಆಂಧ್ರ ಪ್ರದೇಶ): ಕೇವಲ 50 ರೂಪಾಯಿಗಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಆಂಧ್ರ ಪದೇಶದ ಗುಂಟೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗುಂಟೂರಿನ ಸತ್ತಾನಪಲ್ಲಿ ಎಂಬಲ್ಲಿರುವ ಅಂಗಡಿಯೊಂದಕ್ಕೆ ಹಾಲು ಖರೀದಿಸಲು ಕೋಟೇಶ್ವರ್ ರಾವ್ ಎಂಬ ವ್ಯಕ್ತಿ ಬಂದಿದ್ದಾನೆ. ಈ ವೇಳೆ 50 ರೂ. ವಿಚಾರಕ್ಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಜಿ ಹಾಗೂ ಕೋಟೇಶ್ವರ್ ನಡುವೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದ್ದು, ಕೋಟೇಶ್ವರ್ ಜೊತೆ ಇನ್ನಿಬ್ಬರು ಸೇರಿಕೊಂಡು ಬಾಜಿಯನ್ನು ಥಳಿಸಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್: ಅಪರಾಧಿಗೆ ದೊರೆಯುವುದೇ ಕ್ಷಮಾದಾನ?
ಗಾಯಗೊಂಡು ಪ್ರಜ್ಞೆ ತಪ್ಪಿದ ಬಾಜಿಯನ್ನು ಸತ್ತಾನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಾಜಿ ಅವರ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೃತ ಬಾಜಿಗೆ ಇಬ್ಬರು ಮಕ್ಕಳಿದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.