ಮೊರೆನಾ (ಮಧ್ಯಪ್ರದೇಶ): ವಿಷಕಾರಿ ಮದ್ಯ ಸೇವಿಸಿ 11 ಜನರು ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನೆಡದಿದೆ.
ಮೊರೆನಾ ಜಿಲ್ಲೆಯ ಚೈರಾ ಮಾನ್ಪುರ್ ಗ್ರಾಮ ಹಾಗೂ ಪಹವಾಲಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅದನ್ನು ಕುಡಿದ ಜನರು ಸಾವನ್ನಪ್ಪಿದ್ದಾರೆ. ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಗ್ವಾಲಿಯರ್ಗೆ ಶಿಫ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಕಾದ ಎಣ್ಣೆಗೆ ವ್ಯಕ್ತಿಯನ್ನು ಎಸೆದ ಕಿಡಿಗೇಡಿಗಳು
ಘಟನೆ ಸಂಬಂಧ ಅನೇಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೊರೆನಾ ಎಸ್ಪಿ ಅನುರಾಗ್ ಸುಜಾನಿಯಾ ತಿಳಿಸಿದ್ದಾರೆ.