ETV Bharat / jagte-raho

ಕೊಪ್ಪಳ: ಇಬ್ಬರು ಮಟ್ಕಾ, ಜೂಜುಕೋರರ ಗಡಿಪಾರು

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಮಟ್ಕಾ, ಜೂಜಾಕೋರರನ್ನು 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಹೇಳಿದರು.

ಇಬ್ಬರು ಆರೋಪಿಗಳ ಗಡಿಪಾರು ಕುರಿತು  ನಾರಾಯಣರೆಡ್ಡಿ  ಪ್ರತಿಕ್ರಿಯೆ

author img

By

Published : Jan 16, 2021, 3:48 PM IST

ಕೊಪ್ಪಳ: ಜಿಲ್ಲೆಯಲ್ಲಿ ಇನ್ನೊಂದಿಷ್ಟು ಗಡಿಪಾರು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಸದ್ಯ ಇಬ್ಬರನ್ನು ಗಡಿಪಾರು ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಹೇಳಿದ್ದಾರೆ.

ಇಬ್ಬರು ಆರೋಪಿಗಳ ಗಡಿಪಾರು ಕುರಿತು ನಾರಾಯಣರೆಡ್ಡಿ ಪ್ರತಿಕ್ರಿಯೆ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದ ಯಮನೂರ ಮೇಘರಾಜ ಸಿಂಧನೂರು ಹಾಗೂ ನರಸಪ್ಪ ಶಿವಪ್ಪ ನೇಕಾರ ಎಂಬ ಇಬ್ಬರನ್ನು ಗಡಿಪಾರು ಮಾಡಲಾಗಿದೆ. ಯಮನೂರ ಸಿಂಧನೂರನನ್ನು ಚಾಮರಾಜನಗರ ಜಿಲ್ಲೆಗೆ ಹಾಗೂ ನರಸಪ್ಪ ನೇಕಾರನನ್ನು ಕೋಲಾರ ಜಿಲ್ಲೆಗೆ 6 ತಿಂಗಳ ಕಾಲ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಇಬ್ಬರ ಮೇಲೆ ಹಲವಾರು ಮಟ್ಕಾ, ಜೂಜಾಟ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಅಲ್ಲದೇ ಸಾಕಷ್ಟು ಬಾರಿ ತಿಳಿವಳಿಕೆ ನೀಡಲಾಗಿದ್ದರೂ ಕೂಡ ಇವರು ತಮ್ಮ ಕಸುಬನ್ನು ಮುಂದುವರೆಸಿದ್ದಾರೆ. ಜಿಲ್ಲೆಯಲ್ಲಿ ಇನ್ನು ಅನೇಕ ಗಡಿಪಾರು ಪ್ರಕರಣಗಳು ವಿಚಾರಣೆಯಲ್ಲಿವೆ. ಸದ್ಯಕ್ಕೆ ಈ ಇಬ್ಬರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.