ಮೊರೆನಾ (ಮಧ್ಯಪ್ರದೇಶ): ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಕಾಮುಕ ಆಕೆಯನ್ನು ಕೊಂದು ಬಿಸಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಸಂಜೆ ಮನೆಯಲ್ಲಿ ಮಗಳು ಕಾಣುತ್ತಿಲ್ಲವೆಂದು ಹುಡುಕುತ್ತಾ ಹೊರಟ ಪೋಷಕರಿಗೆ ಮನೆಯ ಸಮೀಪದಲ್ಲಿದ್ದ ಸಾಸಿವೆ ಹೊಲದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಕುಟುಂಬ ಸದಸ್ಯರ ದೂರಿನ ಮೇರೆಗೆ ಅದೇ ಗ್ರಾಮದ ಬಂಟಿ ರಾಜಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಜೈಲಿನಿಂದ ಬರುತ್ತಿದ್ದಂತೆಯೇ ಕೃತ್ಯ
ಬಂಟಿ ರಾಜಕ್, ಈ ಹಿಂದೆ ಮೃತ ಬಾಲಕಿಯ ಚಿಕ್ಕಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸೆರೆವಾಸ ಅನುಭವಿಸಿದ್ದನು. ಜೈಲಿನಿಂದ ಹೊರಬರುತ್ತಿದ್ದಂತೆಯೇ ಮತ್ತೊಂದು ದುಷ್ಕೃತ್ಯ ಎಸಗಿದ್ದಾನೆ.