ETV Bharat / jagte-raho

ರಸ್ತೆ ದಾಟುವ ವೇಳೆ ಲಾರಿ ಗುದ್ದಿ 40 ವರ್ಷದ ಗಜರಾಜ ಸಾವು - Hosur National Highway in Krishnagiri district

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆನೆಯೊಂದು ಅಸುನೀಗಿದೆ.

elephant died in a road accident
ರಸ್ತೆ ದಾಟುವ ವೇಳೆ ಲಾರಿ ಗುದ್ದಿ 40 ವರ್ಷದ ಗಜರಾಜ ಸಾವು
author img

By

Published : Jan 17, 2021, 1:05 PM IST

ಕೃಷ್ಣಗಿರಿ (ತಮಿಳುನಾಡು): ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು 40 ವರ್ಷದ ಗಂಡು ಆನೆ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಅಪಘಾತ ಸಂಭವಿಸಿದೆ. ಲಾರಿ ಗುದ್ದಿದ ರಭಸಕ್ಕೆ ಗಜರಾಜನ ಕಾಲುಗಳು ಮುರಿದಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದೆ. ಸ್ಥಳಕ್ಕೆ ಬಂದ ಹೊಸೂರು ಅರಣ್ಯ ಇಲಾಖೆ ಸಿಬ್ಬಂದಿ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದ ಆನೆ ಇಂದು ಬೆಳಗ್ಗೆ ಪ್ರಾಣಬಿಟ್ಟಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972 ಅಡಿಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಪಾಟ್ನಾದಲ್ಲಿ ಜೆಡಿಯು ವಿದ್ಯಾರ್ಥಿ ಮುಖಂಡನ ಗುಂಡಿಕ್ಕಿ ಹತ್ಯೆ

ಅಪಘಾತ ನಡೆದಿರುವ ಸ್ಥಳವು ಡೇಂಜರ್​ ಝೋನ್​ ಆಗಿದ್ದು, ಅರಣ್ಯ ಇಲಾಖೆಯು ಅಲ್ಲಲ್ಲಿ ಎಚ್ಚರಿಕೆಯ ಬೋರ್ಡ್​ಗಳನ್ನು ಅಳವಡಿಸಿದ್ದಾರೆ. ಆದರೆ ವಾಹನ ಚಾಲಕರು ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದು, ಅಪಘಾತಕ್ಕೆ ಎಡೆಮಾಡಿ ಕೊಡುತ್ತಾರೆ. ಪರಿಸರವಾದಿಗಳು ಈ ವಲಯದಲ್ಲಿ ಸೋಲಾರ್​ ಲೈಟ್​ಗಳನ್ನು ಅಳವಡಿಸುವಂತೆ ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.