ETV Bharat / jagte-raho

ಗ್ರಾಮಕ್ಕೆ ನುಗ್ಗಿ ನಾಲ್ವರನ್ನು ಬಲಿ ಪಡೆದ ಕರಡಿ... ಮೂವರ ಸ್ಥಿತಿ ಗಂಭೀರ - bear attack latest news

4 people killed in a bear attack in Angwahi village of Koriya district
ಗ್ರಾಮಕ್ಕೆ ನುಗ್ಗಿ ನಾಲ್ವರನ್ನು ಬಲಿ ಪಡೆದ ಕರಡಿ
author img

By

Published : Dec 7, 2020, 10:18 AM IST

Updated : Dec 7, 2020, 10:46 AM IST

10:14 December 07

ಛತ್ತೀಸ್​ಗಢದ ಕೊರಿಯಾ ಜಿಲ್ಲೆಯ ಅಂಗ್ವಾಹಿ ಗ್ರಾಮದಲ್ಲಿ ಕರಡಿ ದಾಳಿಗೆ ನಾಲ್ವರು ಬಲಿಯಾಗಿದ್ದು, ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 6 ಲಕ್ಷ ರೂ. ನೀಡಲಿದೆ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

ಕೊರಿಯಾ (ಛತ್ತೀಸ್​ಗಢ): ಗ್ರಾಮಕ್ಕೆ ಕರಡಿ ನುಗ್ಗಿ ದಾಳಿ ನಡೆಸಿ ನಾಲ್ವರನ್ನು ಕೊಂದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್​ಗಢದ ಕೊರಿಯಾ ಜಿಲ್ಲೆಯ ಅಂಗ್ವಾಹಿ ಗ್ರಾಮದಲ್ಲಿ ನಡೆದಿದೆ.

ಕರಡಿ ಹಿಡಿಯಲು ಗ್ರಾಮದಲ್ಲಿ ಶೀಘ್ರದಲ್ಲೇ ಕಾರ್ಯಾಚರಣೆ ಕೈಗೊಳ್ಳುತ್ತೇವೆ. ಅಲ್ಲದೇ ಆ ಕರಡಿ ಇತ್ತೀಚೆಗೆ ಒಂದು ಮರಿಗೆ ಜನ್ಮ ನೀಡಿದ್ದು, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.  

ಇದನ್ನೂ ಓದಿ: ಬನ್ನೇರುಘಟ್ಟದ ಬಳಿ ಬೈಕ್​ ಸವಾರನ ಬೆನ್ನತ್ತಿ ದಾಳಿ ಮಾಡಿದ ಒಂಟಿ ಸಲಗ

ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 6 ಲಕ್ಷ ರೂ. ನೀಡಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೂ ಸಹ ಪರಿಹಾರ ನೀಡಲಾಗುವುದು ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.  

Last Updated : Dec 7, 2020, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.