ETV Bharat / jagte-raho

ಅಪ್ರಾಪ್ತೆಯರ ಮೇಲೆ ಅತ್ಯಾಚಾರ: ಆರೋಪಿಗಳಿಗೆ 20 ವರ್ಷ ಕಠಿಣ ಜೀವಾವಧಿ ಸಜೆ

2017ರ ಅತ್ಯಾಚಾರ ಹಾಗೂ 2018ರ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಇದೀಗ ನಾಂಪಲ್ಲಿ ಪೊಕ್ಸೊ ನ್ಯಾಯಾಲಯವು ಆರೋಪಿಗಳಿಗೆ 20 ವರ್ಷಗಳ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

20 years imprisonment for the accused in sexual assault cases
ಅಪ್ರಾಪ್ತೆಯರ ಮೇಲೆ ಅತ್ಯಾಚಾರ
author img

By

Published : Dec 10, 2020, 12:48 PM IST

ಹೈದರಾಬಾದ್ (ತೆಲಂಗಾಣ)​​: ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ಎರಡು ವಿವಿಧ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳಿಗೆ 20 ವರ್ಷಗಳ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

2017ರಲ್ಲಿ ತೆಲಂಗಾಣದ ಲಾಲಗೂಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಟ್ಯೂಷನ್​ಗೆ ತೆರಳುತ್ತಿದ್ದ 5 ವರ್ಷದ ಬಾಲಕಿ ಮೇಲೆ ಪ್ರಭಾಕರ್​ ಎಂಬಾತ ಅತ್ಯಾಚಾರ ನಡೆಸಿದ್ದನು. 2018ರಲ್ಲಿ ಯೂಸೂಫ್​ಗೂಡದ ಜ್ಯುಬಿಲಿ ಹಿಲ್ಸ್​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದನು. ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು.

ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಪೊಕ್ಸೊ ಕಾಯ್ದೆಯಡಿ ಆರೋಪಿ ಬಂಧನ

ಎರಡೂ ಕೇಸ್​ಗಳ ವಿಚಾರಣೆ ನಡೆಸಿರುವ ನಾಂಪಲ್ಲಿ ಪೊಕ್ಸೊ ನ್ಯಾಯಾಲಯವು ಆರೋಪಿ ಪ್ರಭಾಕರ್​ಗೆ 20 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಇನ್ನೋರ್ವ ಆರೋಪಿಗೂ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 12,000 ದಂಡ ವಿಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.