ETV Bharat / jagte-raho

ಆರೋಪಿ ಜೈಲಿಂದ ಬಿಡುಗಡೆ: 10 ವರ್ಷದ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಆತ್ಮಹತ್ಯೆ - 10 ವರ್ಷದ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಆತ್ಮಹತ್ಯೆ

ಅತ್ಯಾಚಾರ ಎಸಗಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಆರೋಪಿ ಮತ್ತೆ ಸಂತ್ರಸ್ತೆಗೆ ಹಿಂಸೆ ಕೊಡಲಾರಂಭಿಸಿದ್ದು, ನೊಂದ ಬಾಲಕಿ ನೇಣಿಗೆ ಶರಣಾಗಿದ್ದಾಳೆ.

17-year-old rape victim commits suicide in UP
ಸಂತ್ರಸ್ತೆ ಆತ್ಮಹತ್ಯೆ
author img

By

Published : Jan 14, 2021, 2:06 PM IST

ಬಂದಾ (ಉತ್ತರ ಪ್ರದೇಶ): ಹತ್ತು ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ 17 ವರ್ಷದ ಸಂತ್ರಸ್ತೆ ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಗ್ರಾಮವೊಂದರಲ್ಲಿ 10 ವರ್ಷದ ಹಿಂದೆ ಏಳು ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದನು. ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಆದರೆ ಈಗ ಆತ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದಾನೆ.

ಇತ್ತ ಸಂತ್ರಸ್ತೆಯ ತಂದೆ ಆಕೆಯ ಮದುವೆ ತಯಾರಿ ನಡೆಸುತ್ತಿದ್ದರೆ, ಅತ್ತ ಆರೋಪಿ ಮತ್ತೆ ತೊಂದರೆ ಕೊಡಲು ಪ್ರಾರಂಭಿಸಿದ್ದಾನೆ. ಇದರಿಂದ ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ- ಒಡಿಶಾ: ಪ್ರಿಯಕರನ ಕೊಲೆ ಮಾಡಿದ ಆರೋಪದಲ್ಲಿ ಯುವತಿ ಅರೆಸ್ಟ್​

ಸಂತ್ರಸ್ತೆ ಕುಟುಂಬದ ಆರ್ಥಿಕ ಸ್ಥಿತಿ ಬೇರೆ ಉತ್ತಮವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.