ETV Bharat / jagte-raho

9 ತಿಂಗಳ ಹಿಂದೆ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ - ರಾಜಸ್ಥಾನದ ಜೋಧ್​ಪುರ ಜಿಲ್ಲೆ

ಅತ್ಯಾಚಾರಕ್ಕೊಳಗಾಗಿದ್ದ 12 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿರುವ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

12 year old girl gave birth
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ
author img

By

Published : Dec 29, 2020, 2:13 PM IST

ಜೋಧ್​ಪುರ (ರಾಜಸ್ಥಾನ): 9 ತಿಂಗಳ ಹಿಂದೆ ರಾಜಸ್ಥಾನದ ಜೋಧ್​ಪುರ ಜಿಲ್ಲೆಯ 12 ವರ್ಷದ ಬಾಲಕಿ ಮೇಲೆ ನೆರೆಹೊರೆಯ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದನು. ಇದೀಗ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಅತ್ಯಾಚಾರ ನಡೆದ ವೇಳೆ ಅಪ್ರಾಪ್ತೆ ಭಯಗೊಂಡು ಪೋಷಕರಲ್ಲಿ ವಿಷಯ ತಿಳಿಸಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗರ್ಭವತಿ ಎಂಬುದು ತಿಳಿದು ಬಂದಿದೆ. ಬಳಿಕ ಬಾಲಕಿ ಪೋಷಕರ ಹತ್ತಿರ ನಡೆದ ಘಟನೆಯನ್ನು ಹೇಳಿಕೊಂಡಿದ್ದಾಳೆ.

ಓದಿ: ಗಂಡು ಮಗುವಿಲ್ಲದ ಕೊರಗು: ನಾಲ್ಕು ಹೆಣ್ಣುಮಕ್ಕಳ ತಂದೆ ಪತ್ನಿಯ ವೇಲ್​ನಿಂದ ಆತ್ಮಹತ್ಯೆ..!

ಇದೀಗ ಸಂತ್ರಸ್ತೆ ಜೋಧಪುರದ ಉಮೇದ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ಬಂದ ಪೊಲೀಸರು ಪೋಷಕರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನೂ ತ್ವರಿತವಾಗಿ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.