ETV Bharat / international

ರಷ್ಯಾ ದಾಳಿ ಎದುರಿಸಲು ಉಕ್ರೇನ್​ಗೆ ಅಮೆರಿಕ ಕ್ಷಿಪಣಿ ನೆರವು..1.8 ಬಿಲಿಯನ್​ ಪ್ಯಾಕೇಜ್​ ಘೋಷಣೆ - Ukraine President Volodymyr Zelensky

ರಷ್ಯಾ ದಾಳಿಯ ವಿರುದ್ಧ ಉಕ್ರೇನ್​ಗೆ ಅಮೆರಿಕ ಕ್ಷಿಪಣಿಗಳ ನೆರವು ನೀಡಿದೆ. ಅಲ್ಲದೇ, 1.8 ಬಿಲಿಯನ್​ ಪ್ಯಾಕೇಜ್​ ಸಹ ಘೋಷಿಸಿದೆ.

zelenskyy-thanks-biden
ರಷ್ಯಾ ದಾಳಿ ಎದುರಿಸಲು ಉಕ್ರೇನ್​ಗೆ ಅಮೆರಿಕ ಕ್ಷಿಪಣಿ ನೆರವು
author img

By

Published : Dec 22, 2022, 7:26 AM IST

ವಾಷಿಂಗ್ಟನ್: ರಷ್ಯಾದ ದಾಳಿಗೆ ಒಳಗಾಗಿರುವ ಉಕ್ರೇನ್​ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆರವು ಮುಂದುವರೆದಿದೆ. ಕ್ಷಿಪಣಿಗಳು ಸೇರಿದಂತೆ 1.8 ಬಿಲಿಯನ್​ ಡಾಲರ್​ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದ್ದು, ಇದಕ್ಕೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್​​ರಿಗೆ ಧನ್ಯವಾದ ಹೇಳಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ, ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ನೆರವು ಸಮಯೋಚಿತವಾಗಿದೆ. ಪೇಟ್ರಿಯಾಟ್​ ಕ್ಷಿಪಣಿಗಳ ಪೂರೈಕೆಗೆ ಜೋ ಬೈಡನ್​ ಅವರಿಗೆ ಉಕ್ರೇನ್​ ಧನ್ಯವಾದ ಸಲ್ಲಿಸುತ್ತದೆ ಎಂದು ಹೇಳಿದರು.

ದಾಳಿಗೀಡಾಗಿರುವ ಉಕ್ರೇನ್​ಗೆ ಕ್ಷಿಪಣಿಗಳ ನೆರವು ಬಲ ತುಂಬಲಿದೆ. ನಮ್ಮ ವಾಯುಪ್ರದೇಶವನ್ನು ರಕ್ಷಿಸಿಕೊಳ್ಳಲು ಇವು ನೆರವಾಗಲಿವೆ. ಇದೊಂದು ಮಹತ್ತರ ಹೆಜ್ಜೆಯಾಗಿದ್ದು, ದಾಳಿಕೋರ ರಾಷ್ಟ್ರವನ್ನು ಮಣಿಸಲು ಸಾಧ್ಯವಾಗಲಿದೆ ಎಂದು ಝೆಲೆನ್​​ಸ್ಕಿ ಅಭಿಪ್ರಾಯಪಟ್ಟರು.

ಅಮೆರಿಕದ ನೆರವನ್ನು ಹಾಡಿ ಹೊಗಳಿದ ಉಕ್ರೇನ್​ ಅಧ್ಯಕ್ಷ, ತಾನು ಮರಳಿ ದೇಶಕ್ಕೆ ಸಂತಸದ ಸುದ್ದಿಯೊಂದಿಗೆ ತೆರಳುತ್ತಿದ್ದೇನೆ. ಪ್ಯಾಕೇಜ್​ನಿಂದಾಗಿ ಉಭಯ ರಾಷ್ಟ್ರಗಳ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ. ಇದು ದೇಶ ಪ್ರೇಮದ ಪ್ರತೀಕವಾಗಿದೆ ಎಂದು ಹೇಳಿದರು.

ಶಾಂತಿ ಸಾಧ್ಯವಿಲ್ಲ: ಇನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ರನ್ನು ಟೀಕಿಸಿದ ಝೆಲೆನ್​ಸ್ಕಿ, ದಾಳಿಕೋರರು ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಅಸಾಧ್ಯ. ಯುದ್ಧದ ಬದಲಾಗಿ ಶಾಂತಿ ಸಾಧ್ಯವಿಲ್ಲ ಎಂದರು.

ಓದಿ: ಚೀನಾದಲ್ಲಿ 3 ಕೋವಿಡ್ ಅಲೆ ಸಾಧ್ಯತೆ; ನಿಯಂತ್ರಿಸುವ ಹಿಡಿತ ಕಳೆದುಕೊಂಡ ಸರ್ಕಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.