ಬೆಂಗಳೂರು: ಇಸ್ರೇಲ್ ವಿರುದ್ಧ ಯುದ್ಧ ಆರಂಭಿಸಿದ ಹಮಾಸ್ ಉಗ್ರರು ಅನೇಕ ಇಸ್ರೇಲಿಗರನ್ನು ಅಪಹರಿಸಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಈ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಕುರಿತು ಇಸ್ರೇಲ್ ಸತತವಾಗಿ ಕಾರ್ಯನಿರತವಾಗಿದೆ. ಅಲ್ಲದೇ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಅಪಹರಣದ ಗುಂಪಿನಲ್ಲಿ ಅತ್ಯಂತ ಕಿರಿಯ ಒತ್ತೆಯಾಳುವಾಗಿರುವ ಮಗುವಿಗೆ ಇದೀಗ ಒಂದು ವರ್ಷ ತುಂಬಿದ್ದು, ಮೊದಲ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಸ್ರೇಲಿಗರು ಆಕೆಯ ಸುರಕ್ಷಿತ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಕ್ಟೋಬರ್ 7ರಂದು ಅಪ್ರಚೋದಿತ ದಾಳಿ ನಡೆಸಿದ್ದ ಹಮಾಸ್ ಉಗ್ರರು ಕಿಬ್ಬುತ್ಜ್ ನಿರ್ ಓಜ್ ಎಂಬಲ್ಲಿಂದ ಯಾರ್ಡನ್ ಮತ್ತು ಶಿರಿ ಪೋಷಕರೊಂದಿಗೆ ಅವರ ನಾಲ್ಕು ವರ್ಷದ ಏರಿಯಲ್ ಎಂಬ ಗಂಡು ಮಗು ಮತ್ತು ಕಿಫೀರ್ ಬಿಬಾಸ್ ಎಂಬ ಹಸುಳೆಯನ್ನು ಅಪಹರಿಸಿದ್ದರು. ಗುರುವಾರ ಟೆಲ್ ಅವಿವ್ನಲ್ಲಿನ ಹೋಸ್ಟೇಜ್ ಸ್ಕ್ವೇರ್‌ನಲ್ಲಿ (ಒತ್ತೆಯಾಳುಗಳ ಚೌಕ) ಅನೇಕರು ಕಿತ್ತಾಳೆ ಬಣ್ಣದ ಬಲೂನ್ ಹಿಡಿದು ಪ್ರಾರ್ಥಿಸಿದರು.
ನವೆಂಬರ್ 29ರ ಕದನ ವಿರಾಮ ಒಪ್ಪಂದದಲ್ಲಿ ಬಿಡುಗಡೆಯಾದ 13 ವರ್ಷದ ಗಾಲಿ ತಾರ್ಶನ್ಸ್ಕಿ ಎಂಬಾತನನ್ನು ಹಮಾಸ್ ಬಿಡುಗಡೆ ಮಾಡಿತ್ತು. ಈ ಬಾಲಕ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಿಫೀರ್ಗೆ ಶುಭ ಕೋರಿದ್ದು, ನೀನು ಸುರಕ್ಷಿತವಾಗಿ ಬೇಗ ಹಿಂದಿರುಗಲು ಕಾಯುತ್ತಿದ್ದೇವೆ. ನೀನು ಮರಳಿದಾಗ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸೋಣ ಎಂದು ಬರೆದಿದ್ದಾನೆ.
ಹಮಾಸ್ ಉಗ್ರರ ಸೆರೆಯಿಂದ ಬಿಡಿಸಿಕೊಂಡು ಬಂದ ಮಕ್ಕಳು, ಇನ್ನೂ ಒತ್ತೆಯಾಳುಗಳಾಗಿರುವ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಅವರ ಬಿಡುಗಡೆಗೆ ಹಾರೈಸುತ್ತಿದ್ದಾರೆ. ಪೋಷಕರೊಂದಿಗೆ ಉಗ್ರರ ಸೆರೆಯಾಗಿದ್ದ ನಾಲ್ಕು ವರ್ಷದ ಒರಿಯಾ ಬ್ರಾಡ್ಚ್ ಎಂಬ ಮಗು ಕೂಡ ಕಳೆದ ನವೆಂಬರ್ 26ರಂದು ಬಿಡುಗಡೆಯಾಗಿದ್ದು, ಕಿಫೀರ್ ಹುಟ್ಟುಹಬ್ಬಕ್ಕೆ ಶುಭಕೋರಿ, ಬೇಗ ಮನೆಗೆ ಹಿಂದಿರುಗುವಂತೆ ಪ್ರಾರ್ಥಿಸಿದೆ.
ನವೆಂಬರ್ 26ರಂದು 9 ವರ್ಷದ ಎಮಿಲಿ ಹ್ಯಾಂಡ್ ಕೂಡ ಉಗ್ರರ ಸೆರೆಯಿಂದ ಮುಕ್ತವಾಗಿದ್ದು, ಆಕೆ ಕೂಡ ಕಿಪೀರ್ ನೀನು ಆದಷ್ಟು ಬೇಗ ಇದರಿಂದ ಹೊರಬರುತ್ತಿಯಾ ಎಂದು ತಿಳಿಸಿದೆ. ನನಗೆ ನಿನ್ನ ಭಾವನೆ ಅರ್ಥವಾಗುತ್ತಿದೆ ಎಂದು ಭಾವುಕವಾಗಿ ತಿಳಿಸಿದ್ದಾಳೆ.
ಈ ನಡುವೆ ಕಿಫೀರ್ ಮತ್ತು ಆಕೆಯ ಕುಟುಂಬ ಸುರಕ್ಷಿತವಾಗಿ ಬದುಕಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಮಾಸ್ ಹೇಳುವಂತೆ, ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕಿಫೀರ್ ಮತ್ತು ಆಕೆಯ ಸಹೋದರ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. 50 ದಿನಗಳ ಕಾಲ ಹಮಾಸ್ ವಶದಲ್ಲಿದ್ದು, ಕದನ ವಿರಾಮ ಒಪ್ಪಂದದ ಸಮಯದಲ್ಲಿ ಬಿಡುಗಡೆಯಾದ ಒತ್ತೆಯಾಳು ನಿಲಿ ಮಾರ್ಗಲಿಟ್ ಹೇಳುವಂತೆ, ಯಾರ್ಡನ್ ಬಿಬಾಸ್ ಆಕೆಯ ಜೊತೆಯಲ್ಲಿದ್ದ. ಈ ವೇಳೆ ಹಮಾಸ್ ಉಗ್ರರು ಆಕೆಯ ಹೆಂಡತಿ ಮಕ್ಕಳನ್ನು ಕೊಂದು ಹಾಕಿದ್ದಾರೆ ಎಂದು ತಿಳಿಸಿದ್ದಾನೆ. ಅಲ್ಲದೇ, ಇಸ್ರೇಲ್ ಪ್ರಧಾನಿ ನೆತನ್ಯಾಹು ಇಸ್ರೇಲ್‌ಗೆ ಒತ್ತೆಯಾಳುಗಳ ಶವ ಮರಳಿ ತರಲು ನಿರಾಕರಿಸಿದ್ದಾರೆ ಎಂದು ದೂಷಿಸಿ ವಿಡಿಯೋ ಮಾಡುವಂತೆ ಯಾರ್ಡನ್ಗೆ ಹಮಾಸ್ ಉಗ್ರರು ತಿಳಿಸಿದ್ದರು ಎಂದು ಕೂಡ ಹೇಳಿದ್ದಾನೆ.
ಇಸ್ರೇಲ್ ಮಿಲಿಟರಿ ಹೇಳುವಂತೆ, ಬಿಬಾಸ್ ಕುಟುಂಬವನ್ನು ಅವರು ಪತ್ತೆ ಮಾಡಿಲ್ಲ. ಇದೊಂದು ಸೈಕಾಲಾಜಿಕಲ್ ಟೆರರ್ ಎಂದು ತಿಳಿಸಿದೆ.(ಐಎಎನ್ಎಸ್)
ಇದನ್ನೂ ಓದಿ: ಇಸ್ರೇಲ್ ಗುರಿಯಾಗಿಸಿ ಇರಾಕ್‌ನ ಯುಎಸ್ ಕಾನ್ಸುಲೇಟ್ ಸಮೀಪ ಇರಾನ್ ದಾಳಿ, 4 ಸಾವು