ETV Bharat / international

ವಿಶ್ವ ಜಲದಿನ 2023 : 40 ವರ್ಷಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿವರ್ಷ 1 ಪ್ರತಿಶತದಷ್ಟು ಹೆಚ್ಚಳ - ಈಟಿವಿ ಭಾರತ ಕನ್ನಡ

ಕಳೆದ 40 ವರ್ಷಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿ ವರ್ಷಕ್ಕೆ ಸರಿಸುಮಾರು 1 ಪ್ರತಿಶತದಷ್ಟು ಹೆಚ್ಚುತ್ತಿದ್ದು, 2050 ರ ವೇಳೆಗೆ ಇದೇ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಯುಎನ್​ ವರ್ಲ್ಡ್​ ವಾಟರ್ ಡೆವಲಪ್​ಮೆಂಟ್​ ವರದಿ ತಿಳಿಸಿದೆ.

ನೈರ್ಮಲ್ಯ ಮತ್ತು ಕುಡಿಯುವ ನೀರಿನ ವರದಿ
ನೈರ್ಮಲ್ಯ ಮತ್ತು ಕುಡಿಯುವ ನೀರಿನ ವರದಿ
author img

By

Published : Mar 22, 2023, 3:42 PM IST

ನ್ಯೂಯಾರ್ಕ್​: ನೈರ್ಮಲ್ಯ ಮತ್ತು ಕುಡಿಯುವ ನೀರಿನ ಕುರಿತಂತೆ ವಿಶ್ವಸಂಸ್ಥೆಯು ಕಳವಳಕಾರಿ ಮಾಹಿತಿ ಹೊರಹಾಕಿದೆ. ವಿಶ್ವದ ಜನಸಂಖ್ಯೆ ಶೇ. 26 ಪ್ರತಿಶತದಷ್ಟು ಜನರಿಗೆ ಶುದ್ಧ ಕುಡಿಯುವ ನೀರಿನ ಲಭ್ಯವಿಲ್ಲ. ಅಲ್ಲದೇ ವಿಶ್ವದಲ್ಲಿ 46 ಪ್ರತಿಶತದಷ್ಟು ಜನರು ನೈರ್ಮಲ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಯುಎನ್​ ವರ್ಲ್ಡ್​ ವಾಟರ್ ಡೆವಲಪ್​ಮೆಂಟ್​ ವರದಿ ತಿಳಿಸಿದೆ. 45 ವರ್ಷಗಳ ಬಳಿಕ ಮೊದಲ ಬಾರಿಗೆ ನಡೆದ ನೀರಿನ ಸಮ್ಮೇಳನದಲ್ಲಿ ಈ ವರದಿ ಬಿಡುಗಡೆ ಮಾಡಲಾಗಿದೆ.

ವರದಿಯ ಮುಖ್ಯ ಸಂಪಾದಕ ರಿಚರ್ಡ್​ ಕಾನರ್ ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ​ ಮಾತನಾಡಿ, 2023 ರಿಂದ 2030ರ ವೇಳೆಗೆ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆ ಸರಿದೂಗಿಸಲು ವರ್ಷಕ್ಕೆ ಅಂದಾಜು ವೆಚ್ಚ 600 ಶತಕೋಟಿ ಡಾಲರ್​ನಿಂದ 1ಟ್ರಿಲಿಯನ್​ ಡಾಲರ್​ವರೆಗೆ ತಗುಲಲಿದೆ ಎಂದು ಹೇಳಿದರು.

ಇದಕ್ಕಾಗಿ ಹೂಡಿಕೆದಾರರು, ಹಣಕಾಸುದಾರರು, ಸರ್ಕಾರಗಳು ಮತ್ತು ಹವಾಮಾನ ಬದಲಾವಣೆಯ ಸಮುದಾಯಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುವುದು ಪರಿಸರವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾಗಿದೆ. ಇದರಿಂದ 2 ಬಿಲಿಯನ್ ಜನರಿಗೆ ಕುಡಿಯುವ ನೀರು ಮತ್ತು 3.6 ಮಿಲಿಯನ್​ ಜನರ ನೈರ್ಮಲ್ಯ ಸಮಸ್ಯೆಯನ್ನು ಸರಿದೂಗಿಸಬಹುದಾಗಿದೆ ಎಂದರು.

ವರದಿಯ ಪ್ರಕಾರ, ಕಳೆದ 40 ವರ್ಷಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿ ವರ್ಷಕ್ಕೆ ಸರಿಸುಮಾರು 1 ಪ್ರತಿಶತದಷ್ಟು ಹೆಚ್ಚುತ್ತಿದ್ದು, 2050 ರ ಹೊತ್ತಿಗೆ ಇದೇ ದರದಲ್ಲಿ ಹೆಚ್ಚುವ ನಿರೀಕ್ಷೆಯಿದೆ, ಇದು ಜನಸಂಖ್ಯೆಯ ಬೆಳವಣಿಗೆ, ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಬದಲಾವಣೆಗಳ ಸಂಯೋಜನೆಯಿಂದ ನಡೆಸಲ್ಪಡುತ್ತದೆ ಎಂದರು. ಇನ್ನು ಜಾಗತಿಕವಾಗಿ ಕೃಷಿ ಪದ್ಧತಿಗೆ ಶೇಕಡಾ 70 ರಷ್ಟು ನೀರನ್ನು ಬಳಸಲಾಗುತ್ತಿದೆ. ಕೃಷಿಗೆ ಹನಿ ನೀರಾವರಿ ಪದ್ದತಿ ಪರಿಣಾಮಕಾರಿಯಾಗಿದ್ದು, ಅಲ್ಲದೇ ಈ ಪದ್ಧತಿಯಿಂದ ನೀರನ್ನು ಸಹ ಉಳಿಸಬಹುದಾಗಿದೆ. ಕೆಲ ದೇಶಗಳಲ್ಲಿ ಕೃಷಿಗೆ ಹನಿ ನಿರಾವರಿ ಪದ್ಧತಿಯನ್ನು ಅನುಸರಿಸುತಿದ್ದಾರೆ. ಈ ಪದ್ಧತಿ ಹೆಚ್ಚಾಗಿ ಅನುಸರಿಸಿದ್ದೇ ಆದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ನೀರು ಲಭ್ಯವಾಗಲಿದೆ. ನೀರು ಹೇರಳವಾಗಿರುವ ಮಧ್ಯ ಆಫ್ರಿಕಾ, ಪೂರ್ವ ಏಷ್ಯಾ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವಾಗಿ, ಪ್ರಸ್ತುತ ನೀರಿನ ಕೊರತೆ ಹೆಚ್ಚಾಗುತ್ತಿದೆ ಎಂದು ವರದಿ ಹೇಳಿದೆ.

ಜಾಗತಿಕ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ನೀರಿನ ಕೊರತೆ ಇರುವಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ 3.5 ಶತಕೋಟಿ ಜನರು ವರ್ಷಕ್ಕೆ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಯುಎನ್‌ಎಸ್‌ಕೊ, UN ಶೈಕ್ಷಣಿಕ, ವೈಜ್ಞಾನಿಕ ವರದಿ ಹೇಳಿದೆ. 2000 ರಿಂದ, ಉಷ್ಣವಲಯದಲ್ಲಿನ ಪ್ರವಾಹಗಳು ನಾಲ್ಕು ಪಟ್ಟು ಹೆಚ್ಚಾಗಿದ್ದು, ಉತ್ತರ ಮಧ್ಯ ಅಕ್ಷಾಂಶಗಳಲ್ಲಿ ಪ್ರವಾಹವು 2.5 ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಹವಾಮಾನ ಬದಲಾವಣೆಯ ನೇರ ಪರಿಣಾಮವಾಗಿ ಹೆಚ್ಚಿನ ಪ್ರದೇಶಗಳಲ್ಲಿ ನೀರಿನಬರ ಉಂಟಾಗಿ ಶಾಖದ ವಿಪರೀತ ಹೆಚ್ಚಳವನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಜಲಮಾಲಿನ್ಯಕ್ಕೆ ಸಂಬಂಧಿಸಿದಂತೆ, ಮಾಲಿನ್ಯದ ದೊಡ್ಡ ಮೂಲವೆಂದರೆ ಸಂಸ್ಕರಿಸದ ತ್ಯಾಜ್ಯನೀರು ಎಂದು ಕಾನರ್ ಹೇಳಿದರು. ಜಾಗತಿಕವಾಗಿ, 80 ಪ್ರತಿಶತ ತ್ಯಾಜ್ಯ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ನೇರವಾಗಿ ಪರಿಸರಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಬಹುಮಟ್ಟಿಗೆ 99 ಪ್ರತಿಶತದಷ್ಟಿದೆ ಎಂದು ಅವರು ಹೇಳಿದರು. ವಿಲ್ಲೆಮ್-ಅಲೆಕ್ಸಾಂಡರ್ ಅವರ ಸಹ-ಅಧ್ಯಕ್ಷತೆಯಲ್ಲಿ ಮೂರು ದಿನಗಳ ಯುಎನ್ ಜಲ ಸಮ್ಮೇಳನದಲ್ಲಿ ಜಲಚರ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದು, ಜಲಸಂಪನ್ಮೂಲಗಳ ನಿರ್ವಹಣೆಯನ್ನು ಸುಧಾರಿಸುವುದು, ನೀರಿನ ಮರುಬಳಕೆಯನ್ನು ಹೆಚ್ಚಿಸುವುದು ಮತ್ತು ನೀರಿನ ಬಳಕೆಯಲ್ಲಿ ಗಡಿಯುದ್ದಕ್ಕೂ ಸಹಕಾರವನ್ನು ಉತ್ತೇಜಿಸುವುದು ಸೇರಿದಂತೆ ಇತರ ಸಮಸ್ಯೆಗಳನ್ನು ಚರ್ಚಿಸಲಾಗುವುದು.

ಇದನ್ನೂ ಓದಿ: ವಿಶ್ವ ಸಂತೋಷ ಸೂಚ್ಯಂಕ 2023: ಅಗ್ರಸ್ಥಾನದಲ್ಲಿ ಫಿನ್ಲೆಂಡ್: ಭಾರತ, ನೆರೆರಾಷ್ಟ್ರಗಳ ಸ್ಥಾನವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.