ಹೈದರಾಬಾದ್: ವಿಶ್ವದ ಜನಸಂಖ್ಯೆಯು ನ.15, 2022 ರಂದು 8 ಶತಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2023 ರಲ್ಲಿ ಭಾರತವು ಚೀನಾ ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು 2022ರ ವಿಶ್ವ ಜನಸಂಖ್ಯಾ ದಿನದಂದು ಬಿಡುಗಡೆಯಾದ ವರದಿಯ ಪ್ರಕಾರ ನಿರ್ಧರಿಸಲಾಗಿದೆ.
ವಿಶ್ವಸಂಸ್ಥೆಯ ಪ್ರಕಾರ, ವಿಶ್ವದ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050 ರಲ್ಲಿ 9.7 ಶತಕೋಟಿ ಹೆಚ್ಚಾಗಬಹುದು. 2080 ರ ದಶಕದಲ್ಲಿ ಸುಮಾರು 10.4 ಶತಕೋಟಿ ಗರಿಷ್ಠ ಮಟ್ಟ ತಲುಪಬಹುದು. 2100 ರವರೆಗೆ ಅದೇ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಯೋಜಿಸಲಾಗಿದೆ.
ಇದನ್ನೂ ಓದಿ: ವೇಗವಾಗಿ ಬೆಳೆದ ಜಗತ್ತಿನ ಜನಸಂಖ್ಯೆ: ಎಂಟು ನೂರು ಕೋಟಿಯತ್ತ ಮಾನವರ ಸಂಖ್ಯೆ!