ನ್ಯೂಯಾರ್ಕ್ : ಬಿಲ್ ಗೇಟ್ಸ್ ಅವರ ಖಾಸಗಿ ಕಚೇರಿಯಲ್ಲಿ ಉದ್ಯೋಗ ಅರಸಿ ಬಂದ ಕೆಲವು ಮಹಿಳಾ ಉದ್ಯೋಗ ಅಭ್ಯರ್ಥಿಗಳಿಗೆ ಅವರ ಲೈಂಗಿಕ ಇತಿಹಾಸದ ಬಗ್ಗೆ ಪ್ರಶ್ನಿಸಲಾಗಿದೆ. ಅಲ್ಲದೇ, ಅವರು ಯಾವ ರೀತಿಯ ಅಶ್ಲೀಲತೆಯನ್ನು ಇಷ್ಟಪಟ್ಟಿದ್ದಾರೆ. ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಯೇ? ತಮ್ಮ ಫೋನ್‌ಗಳಲ್ಲಿ ತಮ್ಮ ನಗ್ನ ಚಿತ್ರಗಳನ್ನು ಹೊಂದಿದ್ದಾರೆಯೇ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
$132 ಶತಕೋಟಿ ನಿವ್ವಳ ಮೌಲ್ಯದ ಆಸ್ತಿ ಹೊಂದಿರುವ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯೇ ಬಿಲ್ ಗೇಟ್ಸ್. ವರದಿಗಳ ಪ್ರಕಾರ, ಸಂಸ್ಥೆಯ ವ್ಯಾಪಕ ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ಮಹಿಳಾ ಸಂದರ್ಶಕರು ಭದ್ರತಾ ಸಂಸ್ಥೆಯಿಂದ "ಡಾಲರ್‌ಗಳಿಗಾಗಿ ನೃತ್ಯ ಮಾಡಿದ್ದೀರಾ" ಎಂಬ ಅಹಿತಕರ ಪ್ರಶ್ನೆಗಳನ್ನೂ ಎದುರಿಸಿದ್ದಾರೆ.
ಇದನ್ನೂ ಓದಿ: ಕೋವಿಡ್‌ನಿಂದ ಸಣ್ಣ ಉದ್ಯಮಗಳ ರಕ್ಷಣೆಗೆ ಅಮೆರಿಕದ ಸಾಲ ಯೋಜನೆಯಲ್ಲಿ 200 ಬಿಲಿಯನ್ ಡಾಲರ್ ವಂಚನೆ!
ನಿಮಗೆ ಲೈಂಗಿಕವಾಗಿ ಹರಡುವ ಕಾಯಿಲೆ ಇದೆಯೇ? ಎಂದು ಕೇಳಲಾಯಿತು ಎಂದು ಇನ್ನೊಬ್ಬ ಅಭ್ಯರ್ಥಿ ಬಹಿರಂಗಪಡಿಸಿದ್ದಾರೆ. ಗೇಟ್ಸ್ ವೆಂಚರ್ಸ್ ಎಂದು ಕರೆಯಲ್ಪಡುವ ಗೇಟ್ಸ್ ಅವರ ಖಾಸಗಿ ಕಛೇರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಇಂತಹ ಅನೇಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿರುವುದು ಆಕ್ರೋಶ ಹುಟ್ಟುಹಾಕಿದೆ.
ಇದನ್ನೂ ಓದಿ: ಭಾರತದ ಜೊತೆ ಇಂಗ್ಲೆಂಡ್ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುತ್ತೇವೆ: ರಿಷಿ ಸುನಕ್
ಜೀವನಚರಿತ್ರೆಯ ಪ್ರಕಾರ, ಬಿಲ್ ಗೇಟ್ಸ್ ತನ್ನ ಭಾವಿ ಪತ್ನಿ ಮೆಲಿಂಡಾ ಅವರನ್ನು ಭೇಟಿಯಾಗಿದ್ದರೂ ಸಹ ತನ್ನ ಆರಂಭಿಕ ದಿನಗಳಲ್ಲಿ ಸ್ಟ್ರಿಪ್ಪರ್‌ಗಳೊಂದಿಗೆ ಪೂಲ್ ಪಾರ್ಟಿಗಳನ್ನು ನಡೆಸುವ ಮೂಲಕ ಸುದ್ದಿ ಮಾಡಿದ್ದರು. ಅಷ್ಟೇ ಅಲ್ಲ, ಮೈಕ್ರೋಸಾಫ್ಟ್‌ನ ಅಧ್ಯಕ್ಷರು ತಮ್ಮ ಸಿಯಾಟಲ್‌ನಲ್ಲಿರುವ ಮನೆಯಲ್ಲಿ ನಡೆಸಿದ ವೈಲ್ಡ್ ಬ್ಯಾಚುಲರ್ ಪಾರ್ಟಿಗಳೂ ಸುದ್ದಿಯಾಗಿದ್ದವು.
ಇದನ್ನೂ ಓದಿ: ಬ್ಯಾಕ್ಟೀರಿಯಾ ಸೋಂಕಿನಿಂದ ಬಳಲುತ್ತಿರುವ ಅಮೆರಿಕದ ಖ್ಯಾತ ಗಾಯಕಿ ಮಡೋನಾ