ETV Bharat / international

ಹಣವಿಲ್ಲ, ಇಂಧನವೂ ಇಲ್ಲ: ಶ್ರೀಲಂಕಾದಲ್ಲಿ ಮತ್ತೆ ಶಾಲೆಗಳು ಬಂದ್​, ಆನ್​ಲೈನ್​ ಕ್ಲಾಸ್​ಗೆ ಸೂಚನೆ

author img

By

Published : Jul 4, 2022, 9:21 AM IST

ಶ್ರೀಲಂಕಾ ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಜನಜೀವನ ದಿನದಿನವೂ ಕಷ್ಟಕರವಾಗುತ್ತಿದೆ.

No Fuel And No Cash in Sri Lanka, Sri Lanka Keeps Schools Closed, Online class in Sri Lanka, Sri Lanka Shuts Schools Amid Fuel Crisis, Sri Lanka Fuel Crisis news, ಶ್ರೀಲಂಕಾದಲ್ಲಿ ಹಣವಿಲ್ಲ ಇಂಧನವಿಲ್ಲ, ಶ್ರೀಲಂಕಾ ಶಾಲೆಗಳನ್ನು ಬಂದ್​, ಶ್ರೀಲಂಕಾದಲ್ಲಿ ಆನ್‌ಲೈನ್ ತರಗತಿ, ಶ್ರೀಲಂಕಾ ಇಂಧನ ಬಿಕ್ಕಟ್ಟಿನ ಮಧ್ಯೆ ಶಾಲೆಗಳು ಬಂದ್​, ಶ್ರೀಲಂಕಾ ಇಂಧನ ಬಿಕ್ಕಟ್ಟಿನ ಸುದ್ದಿ,
ಶ್ರೀಲಂಕಾದಲ್ಲಿ ಮತ್ತೆ ಶಾಲೆಗಳು ಬಂದ್

ಕೊಲಂಬೊ(ಶ್ರೀಲಂಕಾ): ಇಂಧನ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ನೆರೆಯ ದ್ವೀಪ ದೇಶ ಶ್ರೀಲಂಕಾ ಮತ್ತೊಮ್ಮೆ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಶಿಕ್ಷಣ ಸಚಿವಾಲಯವು ಇಂದಿನಿಂದ ಎಲ್ಲಾ ಸರ್ಕಾರಿ ಮತ್ತು ರಾಜ್ಯ-ಅನುಮೋದಿತ ಖಾಸಗಿ ಶಾಲೆಗಳಿಗೆ ವಾರದ ರಜೆ ಘೋಷಿಸಿದೆ.

ಕೊಲಂಬೊ ನಗರದೊಳಗಿನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ-ಅನುಮೋದಿತ ಖಾಸಗಿ ಶಾಲೆಗಳು ಹಾಗು ಇತರ ಪ್ರಾಂತ್ಯಗಳಲ್ಲಿನ ಪ್ರಮುಖ ನಗರಗಳ ಶಾಲೆಗಳು ಮುಂದಿನ ವಾರದವರೆಗೆ ಮುಚ್ಚಲ್ಪಡುತ್ತವೆ ಎಂದು ಶಿಕ್ಷಣ ಸಚಿವಾಲಯ ಆದೇಶಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ನಿಹಾಲ್ ರಣಸಿಂಗ್, ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳಿಗೆ ಸೂಚಿಸಲಾಗಿದೆ. ಸಾರಿಗೆ ಸಮಸ್ಯೆ ಇಲ್ಲದೆಡೆಗಳಲ್ಲಿ ತರಗತಿಗಳನ್ನು ನಡೆಸಲು ಅನುಮತಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಧ್ಯಕ್ಷರ ಬದಲು ಸಂಸತ್ತಿ​ನ ಅಧಿಕಾರ ಹೆಚ್ಚಿಸುವ ಹೊಸ ತಿದ್ದುಪಡಿ ಅಂಗೀಕರಿಸಿದ ಶ್ರೀಲಂಕಾ

ವಾರದ ದಿನಗಳಲ್ಲಿ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಸಾರ್ವಜನಿಕ ಉಪಯುಕ್ತತೆಗಳ ಆಯೋಗವು ಬೆಳಗ್ಗೆ 08.00 ರಿಂದ ಮಧ್ಯಾಹ್ನ 01.00 ರವರೆಗೆ ವಿದ್ಯುತ್ ಕಡಿತಗೊಳಿಸದಿರಲು ಒಪ್ಪಿಕೊಂಡಿದೆ.

ಈ ವರ್ಷದ ಮಾರ್ಚ್‌ನಿಂದ ದೇಶವು ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸ್ವರೂಪದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.