ETV Bharat / international

ಕಾಡ್ಗಿಚ್ಚಿಗೆ ಧಗಧಗಿಸುತ್ತಿದೆ ಪೋರ್ಚುಗಲ್​​ ಅರಣ್ಯ; ವಿಮಾನ ಅಪಘಾತದಲ್ಲಿ ಪೈಲಟ್​ ಸಾವು - Wildfire rages in Portugal

ಪೋರ್ಚುಗಲ್​​ನಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು ಸುಮಾರು 24 ಸಾವಿರ ಎಕರೆ ಅರಣ್ಯ ಪ್ರದೇಶ ಅಗ್ನಿ ಜ್ವಾಲೆಗೆ ಸುಟ್ಟು ಹೋಗಿದೆ. ಕಾಡಂಚಿನ ಜನವಸತಿ ಪ್ರದೇಶಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.

portugal Wildfire
ಕಾಡ್ಗಿಚ್ಚಿಗೆ ಹೊತ್ತಿ ಉರಿಯುತ್ತಿರುವ ಪೋರ್ಚುಗಲ್​​ ಅರಣ್ಯ
author img

By

Published : Jul 17, 2022, 12:23 PM IST

ಪ್ಯಾರಿಸ್: ದಕ್ಷಿಣ ಪೋರ್ಚುಗಲ್​ನಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಬಲವಾದ ಗಾಳಿ ಮತ್ತು ಶುಷ್ಕ ಹವಾಮಾನದಿಂದಾಗಿ ಬೆಂಕಿ ಬಹುಬೇಗ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ಬೋರ್ಡೆಕ್ಸ್ ಪ್ರದೇಶದ ಪೈನ್ ಕಾಡು ಸತತ ಒಂದು ವಾರದಿಂದ ಅಗ್ನಿ ಜ್ವಾಲೆಯಲ್ಲಿ ಬೇಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತ

ವಿಮಾನಗಳ ಮೂಲಕವೂ ನೀರು ಸುರಿದು ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುವ ಮಧ್ಯೆ ವಿಮಾನ ಅಪಘಾತಕ್ಕೀಡಾಗಿ ಓರ್ವ ಪೈಲಟ್​ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇದು ಈ ವರ್ಷ ಪೋರ್ಚುಗಲ್‌ನಲ್ಲಿ ಸಂಭವಿಸಿದ ಮೊದಲ ಅಗ್ನಿ ಅವಘಡವಾಗಿದೆ. ಕಾಡ್ಗಿಚ್ಚಿಗೆ 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವಲ್ಲಿ ಯತ್ನ

ಸತತ ಒಂದು ವಾರದಿಂದ ಹೊತ್ತಿ ಉರಿಯುತ್ತಿರುವ ಕಾಡಿನ ಬೆಂಕಿ ಜನವಸತಿ ಪ್ರದೇಶಗಳನ್ನೂ ಆವರಿಸಿಕೊಳ್ಳುತ್ತಿದೆ. ಇದರಿಂದ ಹತ್ತಾರು ಹಳ್ಳಿಗಳ 11,000 ಜನರನ್ನು ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಪೈನ್ ಮರಗಳು ಜ್ವಾಲೆಯಲ್ಲಿ ಬೇಯುತ್ತಿರುವುದು ಮತ್ತು ದಟ್ಟ ಹೊಗೆ ಹಬ್ಬಿಕೊಂಡಿರುವ ಭೀಕರ ದೃಶ್ಯಗಳನ್ನು ಅಗ್ನಿಶಾಮಕ ದಳ ಹಂಚಿಕೊಂಡಿದೆ.

ಕಾಡ್ಗಿಚ್ಚಿನಿಂದ ಹಬ್ಬಿಕೊಂಡಿರುವ ದಟ್ಟ ಹೊಗೆ

ಅಗ್ನಿಶಾಮಕ ದಳ ಸಿಬ್ಬಂದಿ ಟ್ರಕ್‌ಗಳನ್ನು ಬಳಸಿಕೊಂಡು ಅಪಾಯದಲ್ಲಿರುವ ಹಳ್ಳಿಗಳನ್ನು ಉಳಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದು, ಸಾಧ್ಯವಾದಷ್ಟು ಮನೆಗಳನ್ನು ಉಳಿಸಿದ್ದಾರೆ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿಕೊಂಡಿರುವ ಚಾರ್ಲ್ಸ್ ಲಾಫೋರ್ಕೇಡ್ ತಿಳಿಸಿದರು.

ಅಗ್ನಿಶಾಮಕ ಸಿಬ್ಬಂದಿ

ವಿಮಾನದ ಮೂಲಕ ನೀರು ಡಂಪ್​: ಕಾಡ್ಗಿಚ್ಚನ್ನು ತಣಿಸಲು 3 ಸಾವಿರ ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. 18 ವಿಮಾನಗಳ ಮೂಲಕ ನೀರನ್ನು ಹೊತ್ತು ತಂದು ಬೆಂಕಿ ನಂದಿಸಲು ಯತ್ನಿಸಲಾಗುತ್ತಿದೆ. ನೆರೆಯ ದೇಶ ಗ್ರೀಸ್ ಕೂಡ ಸಹಾಯಕ್ಕೆ ಧಾವಿಸಿದ್ದು, ಅಗ್ನಿಶಾಮಕ ಸಾಧನಗಳನ್ನು ರವಾನಿಸಿದೆ.

ವಿಮಾನದ ಮೂಲಕ ಕಾಡ್ಗಿಚ್ಚು ನಂದಿಸುವ ಯತ್ನ

ಕೆಲ ದಿನಗಳಿಂದ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಿಂದ ಸುಮಾರು 23,800 (9,650 ಹೆಕ್ಟೇರ್​) ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಪೋರ್ಚುಗೀಸ್ ಸ್ಟೇಟ್ ಟೆಲಿವಿಷನ್ ಪ್ರಕಾರ, ಈ ವರ್ಷ 30,000 ಹೆಕ್ಟೇರ್‌ಗಳಿಗಿಂತ ಹೆಚ್ಚು (74,000 ಎಕರೆ) ಅರಣ್ಯ ಬೆಂಕಿಯಲ್ಲಿ ಬೆಂದು ಹೋಗಿದೆ. ಇದು ಕಳೆದ ವರ್ಷಕ್ಕಿಂತಲೂ ಅಧಿಕವಾಗಿದೆ. ಈ ಬಾರಿ ಅವಧಿಗಿಂತಲೂ ಬೇಗನೇ ಕಾಡ್ಗಿಚ್ಚಿನ ಸಮಸ್ಯೆ ಉಂಟಾಗಿದೆ. ಇದಕ್ಕೆ ಹವಾಮಾನ ಬದಲಾವಣೆಗೆಯೇ ಕಾರಣ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.