ETV Bharat / international

ಚೀನಾ ಜತೆ ಸಂಬಂಧ ಸುಧಾರಣೆಗೆ ಅಮೆರಿಕ ಯತ್ನ.. ಬೈಡನ್​ ಜಿನ್​ಪಿಂಗ್​ ನಡುವೆ ಮಾತುಕತೆಗೆ ಸಿದ್ಧತೆ - ಅಮೆರಿಕ ಅಧ್ಯಕ್ಷ ಜೋ ಬೈಡನ್​

ಚೀನಾದೊಂದಿಗೆ ಹದಗೆಟ್ಟಿರುವ ಸಂಬಂಧಗಳನ್ನು ಸುಧಾರಣೆ ಮಾಡಲು ಅಮೆರಿಕ ಯೋಜನೆಯೊಂದನ್ನು ರೂಪಿಸಿದೆ. ನೆವೆಂಬರ್​ನಲ್ಲಿ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಚೀನಾ ಅಧ್ಯಕ್ಷರೊಂದಿಗೆ ಸಭೆ ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ.

ಚೀನಾ ಜತೆ ಸಂಬಂಧ ಸುಧಾರಣೆಗೆ ಅಮೆರಿಕ ಯತ್ನ.. ಬೈಡನ್​  ಜಿನ್​ಪಿಂಗ್​ ನಡುವೆ ಸಭೆಗೆ ಸಿದ್ಧತೆ

author img

By ETV Bharat Karnataka Team

Published : Oct 7, 2023, 7:30 AM IST

ವಾಷಿಂಗ್ಟನ್ ಡಿಸಿ( ಅಮೆರಿಕ); ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನವೆಂಬರ್​ನಲ್ಲಿ ಸಭೆಗೆ ಶ್ವೇತಭವನವು ಯೋಜಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಸಭೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಸ್ಥಿರಗೊಳಿಸುವುದು, ಸುಧಾರಿಸುವ ಪ್ರಯತ್ನವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಸುಧಾರಣೆಗೆ ಅಮೆರಿಕ ಮುಂದಾಗಿದೆ ಎಂದು ತಿಳಿದು ಬಂದಿದೆ.

ನವೆಂಬರ್​​ ಸಭೆ ಬಗ್ಗೆ ಇನ್ನೂ ಅಧಿಕೃತ ತೀರ್ಮಾನ ಆಗಿಲ್ಲ. ಔಪಚಾರಿಕವಾಗಿ ಸಭೆ ನಿಗದಿ ಆಗಿರುವ ಬಗ್ಗೆ ಘೋಷಣೆ ಆಗಿಲ್ಲ. ಆದರೆ ಈ ಬಗ್ಗೆ ಮಾತನಾಡುವ ಅಮೆರಿಕ ಆಡಳಿತದ ಅಧಿಕಾರಿಯೊಬ್ಬರು ಸಭೆ ನಡೆಯಲಿದೆ ಎಂದು ದೃಢಪಡಿಸಿದ್ದಾರೆ. ನಾವು ಈ ಬಗ್ಗೆ ಯೋಜನೆಯೊಂದನ್ನು ರೂಪಿಸಿದ್ದು, ಸಂಬಂಧ ಸುಧಾರಣಾ ಕ್ರಮ ಪ್ರಾರಂಭಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. ಈ ಸಂಬಂಧ ಹಿರಿಯ ಆಡಳಿತ ಅಧಿಕಾರಿಯೊಬ್ಬರು ಮಾತನಾಡಿ, ಅಮೆರಿಕ ಅಧ್ಯಕ್ಷ ಬೈಡನ್​ ಅವರು ಚೀನಾ ಅಧ್ಯಕ್ಷ ಜಿನ್​ಪಿಂಗ್​​ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ "ಇನ್ನೂ ಯಾವುದಕ್ಕೂ ದೃಢೀಕರಣ ಸಿಕ್ಕಿಲ್ಲ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮುಂಬರುವ ವಾರಗಳಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಆ ಬಳಿಕವೇ ಸಂಬಂದ ಸುಧಾರಣೆಯ ಯೋಜನೆಗಳು ಸ್ಪಷ್ಟವಾಗುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಚೀನಾ ಮತ್ತು ಯುಎಸ್ ದ್ವಿಪಕ್ಷೀಯ ಸಂಬಂಧ ಸುಧಾರಣೆ ಸಂಬಂಧದ ಮಾತುಕತೆಗೆ ದಿನಾಂಕ ನಿಗದಿ ಮತ್ತು ವಿನಿಮಯದ ಬಗ್ಗೆ ಸಂವಹನ ನಡೆಸಲಾಗುತ್ತಿದೆ‘‘ ಎಂದು ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. "ಎರಡೂ ಕಡೆಯವರು ಒಂದೇ ದಿಕ್ಕಿನಲ್ಲಿ ಕೆಲಸ ಮಾಡಬೇಕು, ಅಡೆತಡೆಗಳನ್ನು ತೆರವುಗೊಳಿಸಬೇಕು ಮತ್ತು ಮುಕ್ತ ಮಾತುಕತೆಗಳ ಮೂಲಕ ಉಭಯತ್ರರ ನಡುವಣ ಅಡೆತಡೆಗಳ ನಿವಾರಣೆ ಮಾಡಬೇಕಿದೆ. ಇದಕ್ಕಾಗಿ ಎರಡೂ ಕಡೆಗಳಿಂದ ಮಾತುಕತೆಗಳನ್ನ ಹೆಚ್ಚಿಸಬೇಕು ಮತ್ತು ಉತ್ತಮ ನಂಬಿಕೆಯಿಂದ ಸಹಕಾರವನ್ನು ವಿಸ್ತರಿಸಬೇಕಿದೆ ಎಂದು ಚೀನಾ ವಕ್ತಾರರು ಹೇಳಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಕಳೆದ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ- 20 ಶೃಂಗಸಭೆ ವೇಳೆ ಅಮೆರಿಕ ಹಾಗೂ ಚೀನಾ ನಿಯೋಗಗಳ ಭೇಟಿಯಾಗಿತ್ತು. ಆ ಬಳಿಕ ಎರಡೂ ರಾಷ್ಟ್ರಗಳ ಅಧಿಕಾರಿಗಳ ಭೇಟಿ ನಡೆದಿಲ್ಲ. ಆ ಬಳಿಕ ಎರಡು ದೊಡ್ಡ ಆರ್ಥಿಕತೆಗಳ ನಾಯಕರ ನಡುವಿನ ವೈಯಕ್ತಿಕ ಸಭೆ ಮೊದಲನೆಯದಾಗಲಿದೆ. (ANI)

ಇದನ್ನು ಓದಿ:ಭಾರತದ ನಾಯಕತ್ವ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ.. ಮತ್ತೆ ಮೋದಿ ಹೊಗಳಿದ ಪುಟಿನ್​!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.