ETV Bharat / international

Iceland volcano: ಐಸ್​ಲ್ಯಾಂಡ್​ನಲ್ಲಿ ಜ್ವಾಲಮುಖಿ ಸ್ಫೋಟ.. ಪ್ರವಾಸಿಗರಿಗೆ ಹತ್ತಿರ ಸುಳಿಯದಂತೆ ಎಚ್ಚರಿಕೆ

author img

By

Published : Jul 12, 2023, 3:05 PM IST

ಉತ್ತರ ಅಟ್ಲಾಂಟಿಕದ ಐಸ್​ಲ್ಯಾಂಡ್​​ ಜ್ವಾಲಾಮುಖಿ ಹಾಟ್ ಸ್ಪಾಟ್‌ ಆಗಿದ್ದು ಪ್ರತಿ ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ಇಲ್ಲಿ ಜ್ವಾಲಮುಖಿ ಸ್ಫೋಟಗೊಳ್ಳುತ್ತದೆ.

Volcano eruption in Iceland; Tourists are warned not to get too close

ಐಸ್​ಲ್ಯಾಂಡ್​ನಲ್ಲಿ ನಿರಂತರ ಭೂಕಂಪದಿಂದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಹಿನ್ನೆಲೆ ಜ್ವಾಲಮುಖಿಯಿಂದ ಲಾವಾರಸ ಮತ್ತು ರಾಸಾಯನಿಕ ಅನಿಲಗಳು ಹೊರಹೊಮ್ಮುತ್ತಿವೆ. ಹೀಗಾಗಿ ಅದರ ಬಳಿ ಸುಳಿಯದಂತೆ ಪ್ರವಾಸಿಗರು ಮತ್ತು ಇತರೆ ವೀಕ್ಷಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಐಸ್​ಲ್ಯಾಂಡ್​ನ ನೈರುತ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಾವಿರಾರು ಭೂಕಂಪಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 11 ತಿಂಗಳ ಬಳಿಕ ಇದೀಗ ಮತ್ತೆ ಇಲ್ಲಿ ಜ್ವಾಲಮುಖಿ ಸ್ಫೋಟ ಸಂಭವಿಸಿದೆ. ಈ ಸ್ಫೋಟವೂ ನೈರುತ್ಯದ ರಾಜಧಾನಿ ರೆಕ್ಜವಿಕ್​ನಿಂದ 30 ಕಿ.ಮೀ ದೂರದ ಲಿಟ್ಲಿ ಹೃತರ್​​ ಶಿಖರದ ಕಣಿವೆಯಲ್ಲಿ ನಡೆದಿದೆ.

ಈ ಪ್ರದೇಶವೂ ಫಾಗ್ರಾಡಲ್ಸ್ಫ್​ಜಾಲ್​ ಜ್ವಾಲಮುಖಿಯಿಂದ ಎಂಬ ಹೆಸರಿನಿಂದ ಪರಿಚಿತಾಗಿದೆ. 2021 ಮತ್ತು 2022ರಲ್ಲಿ ಇಲ್ಲಿ ಜ್ವಾಲಮುಖಿ ಸ್ಫೋಟಗೊಂಡಿತು. ಇದು ಸಮೀಪದ ಕೆಫ್ಲಾವಿಕ್​ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಹಿನ್ನೆಲೆ ಇದು ವಿಮಾನಗಳಿಗೂ ಹಾನಿ ಮಾಡಿತು. ಈ ವಿಮಾನ ನಿಲ್ದಾಣವನ್ನು ಮಂಗಳವಾರ ತೆರೆಯಲಾಗಿದೆ. ಈ ಬಾರಿ ಸಂಭವಿಸಿದ ಈ ಜ್ವಾಲಮುಖಿ ಸ್ಫೋಟವೂ ಈ ಹಿಂದೆ ನಡೆದ ಎರಡು ಸ್ಫೋಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನಡೆದಿದೆ ಎಂದು ಐಸ್​ಲ್ಯಾಂಡಿನ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜ್ವಾಲಮುಖಿಯಿಂದ ಕಿತ್ತಳೆ ಬಣ್ಣದ ಲಾವ ಹೊರ ಬರುತ್ತಿದ್ದು, ಮೋಡಗಳನ್ನು ದಾಟಿ 900 ಮೀಟರ್​ ಎತ್ತರದವರೆಗೆ ದಟ್ಟ ಹೊಗೆ ಆಡುತ್ತಿರುವ ದೃಶ್ಯಗಳು ಏರಿಯಲ್​ ಫುಟೇಜ್​ನಲ್ಲಿ ಕಂಡು ಬಂದಿವೆ.

ಜ್ವಾಲಮುಖಿಯಿಂದ ಹೊರ ಬರುತ್ತಿರುವ ಹೊಗೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು, ಇದು ಅಪಾಯಕಾರಿಯಾಗಿದೆ. ಪ್ರವಾಸಿಗರು ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಅದರ ಪಕ್ಕ ಸುಳಿಯದೇ ಇರುವುದು ಉತ್ತಮ ಎಂಬ ಸಲಹೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಗಳವಾರ ಜ್ವಾಲಮುಖಿಯ ಬಿರುಕು ಮತ್ತು ಸ್ಫೋಟದ ಪರಿಮಾಣವು ಕಡಿಮೆಯಾಗಿದೆ.

ಇದು ಸಣ್ಣ ಸ್ಫೋಟವಾಗಿರುವುದು ಕೊಂಚ ನೆಮ್ಮದಿ ನೀಡುವ ಅಂಶವಾಗಿದೆ ಎಂದು ಐಸ್​ಲ್ಯಾಂಡ್​ ಭೌಗೋಳಿಕ ಪ್ರೊಫೆಸರ್​ ಮಾಗ್ನಸ್​ ತುಮಿ ತಿಳಿಸಿದ್ದಾರೆ. ಕೆಲವು ಜ್ವಾಲಮುಖಿಗಳು ದೀರ್ಘಕಾಲದ ನಿರಂತರ ಸ್ಫೋಟಗಳಾಗಿರುತ್ತವೆ. ಆದರೆ, ನಾವು ಅದೃಷ್ಟಶಾಲಿಗಳಾಗಿದ್ದೇವೆ. ಜ್ವಾಲಮುಖಿ ಆರಂಭದ ಅಬ್ಬರ ನಂತರದ ಕೆಲವು ಗಂಟೆಗಳ ಕಾಲ ಮುಂದುವರೆದಿಲ್ಲ. ಇದು ಕಡಿಮೆಯಾಗಿದೆ ಎಂದಿದ್ದಾರೆ.

2021ರಲ್ಲಿ ಇದೇ ಪ್ರದೇಶದಲ್ಲಿ ಸ್ಫೋಟಗೊಂಡ ಜ್ವಾಲಮುಖಿ ಅನೇಕ ತಿಂಗಳುಗಳ ಕಾಲ ಲಾವಾರಸವನ್ನು ಹೊರಹಾಕುತ್ತಿತ್ತು. ಈ ದೃಶ್ಯವನ್ನು ನೋಡಲು ಲಕ್ಷಾಂತರ ಜನರು ನೆರೆದಿದ್ದರು. ಉತ್ತರ ಅಟ್ಲಾಂಟಿಕದ ಐಸ್​ಲ್ಯಾಂಡ್​​ ಜ್ವಾಲಾಮುಖಿ ಹಾಟ್ ಸ್ಪಾಟ್‌ ಆಗಿದ್ದು, ಪ್ರತಿ ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ಇಲ್ಲಿ ಜ್ವಾಲಮುಖಿ ಸ್ಫೋಟಗೊಳ್ಳುತ್ತದೆ.

ಇತ್ತೀಚಿಗೆ ಕಂಡ ಅತಿ ದೊಡ್ಡ ಜ್ವಾಲಮುಖಿ ಸ್ಫೋಟವೂ 2010ರಲ್ಲಿ ನಡೆದಿತ್ತು. ಇಡೀ ಆಗಸದ ತುಂಬೆಲ್ಲಾ ಇದರ ದಟ್ಟ ಹೊಗೆ ಆವರಿಸಿತು. ಇದರಿಂದ ಯುರೋಪ್​ನ ಅನೇಕ ವಾಯು ಪ್ರದೇಶವೂ ಮುಚ್ಚಿತು. 1,00,00ಕ್ಕೂ ಅಧಿಕ ವಿಮಾನಗಳ ಹಾರಾಟ ಕೂಡ ಇದರಿಂದ ಸಾಧ್ಯವಾಗಲಿಲ್ಲ. ಅನೇಕ ಜನರು ಮಿಲಿಯನ್​ ಅಂತಾರಾಷ್ಟ್ರೀಯ ಪ್ರವಾಸಿಗರು ತಮ್ಮ ಪ್ರಯಾಣದಲ್ಲಿ ತೊಂದರೆ ಅನುಭವಿಸಿದರು.

ಇದನ್ನೂ ಓದಿ: Nepal Chopper Crash: ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ.. ಐವರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.