ವಾಷಿಂಗ್ಟನ್: ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ತನ್ನ ಪರಮಾಣು ಸಾಮರ್ಥ್ಯಗಳ ವಾಡಿಕೆಯಂತೆ ಲೆಕ್ಕ ನೀಡುವುದಾಗಿ ರಷ್ಯಾ ಹೇಳಿದೆ. ಯುಎಸ್-ರಷ್ಯಾ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ನಿಯಮವನ್ನು ರಷ್ಯಾ ಪಾಲಿಸುತ್ತಿದೆ. ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಮೆರಿಕ ಮತ್ತು ರಷ್ಯಾ ನಡುವೆ ಇರುಸು ಮುರುಸು ಇದ್ದರು ಪಾರದರ್ಶಕತೆ ಕಾಪಾಡಿಕೊಳ್ಳುವ ಬಗ್ಗೆ ಮಾತನಾಡಿದೆ ಎಂದು ಬೈಡನ್ ಆಡಳಿತ ವಿಭಾಗ ತಿಳಿಸಿದೆ.
ಸ್ಟಾರ್ಟ್(START) ಒಪ್ಪಂದದ ನಿಯಮಗಳ ಪ್ರಕಾರ ಅಮೆರಿಕ ಮತ್ತು ರಷ್ಯಾಗಳು ಶಸ್ತ್ರಾಸ್ತ್ರ ನಿಯಂತ್ರಣಗಳ ಬಗ್ಗೆ ಮಾಹಿತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕಿದೆ. ಆ ಅಧಿಸೂಚನೆ ಮಾಡಲು ರಷ್ಯಾ ತನ್ನ ಶಸ್ತ್ರಾಸ್ತ್ರ ನಿಯಂತ್ರಣ ಕಟ್ಟುಪಾಡುಗಳು ಮತ್ತು ಪಾರದರ್ಶಕತೆ ಬದ್ಧತೆಗಳನ್ನು ಅನುಸರಿಸುತ್ತಿದೆ ಎಂದು ಮಾಹಿತಿ ನೀಡಲಾಗಿದೆ.
ಒಂದು ಮಾತು ಹೇಳಲು ಬಯಸುತ್ತೇನೆ. ಯುದ್ಧತಂತ್ರದ ಭಾಗವಾಗಿ ಒಂದು ವೇಳೆ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಿದರೆ ರಷ್ಯಾ ಊಹೆಗೂ ಮೀರಿದ ಗಂಭೀರ ತಪ್ಪನ್ನು ಎಸಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯ ಪಟ್ಟಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದು ದೊಡ್ಡ ತಪ್ಪಾಗಲಿದೆ. ಇದರಿಂದ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪರಮಾಣು ಬಾಂಬ್ ಬಳಕೆ ಸಾಧ್ಯತೆ ಬಗ್ಗೆ ಉಕ್ರೇನ್ ವಿರುದ್ಧ ರಷ್ಯಾ ತಪ್ಪು ಆರೋಪಗಳನ್ನು ಹೊರಿಸುತ್ತಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರಿನ್ ಜೆನ್ ಪಿಯೆರಾ ತಿಳಿಸಿದ್ದಾರೆ.
ಇದನ್ನೂ ಓದಿ : ತಕ್ಷಣವೇ ಉಕ್ರೇನ್ ತೊರೆಯಿರಿ: ಭಾರತೀಯ ರಾಯಭಾರ ಕಚೇರಿ