ನ್ಯೂಯಾರ್ಕ್: 1962 ರ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ಪರಮಾಣು ಶಸ್ತ್ರಗಳ ಬಳಕೆಯ ಅಪಾಯವು ಅತ್ಯಧಿಕ ಮಟ್ಟದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ. ಉಕ್ರೇನ್‌ನ ಮೇಲೆ ನಡೆಯುತ್ತಿರುವ ಎಂಟು ತಿಂಗಳ ಆಕ್ರಮಣದಲ್ಲಿ ಭಾರಿ ಹಿನ್ನಡೆ ಅನುಭವಿಸಿದ ನಂತರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಯ ಬಗ್ಗೆ ರಷ್ಯಾ ಅಧಿಕಾರಿಗಳ ಮಾತಿನ ಹಿನ್ನೆಲೆಯಲ್ಲಿ ಬೈಡನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಡೆಮಾಕ್ರಟಿಕ್ ಸೆನೆಟೋರಿಯಲ್ ಕ್ಯಾಂಪೇನ್ ಕಮಿಟಿಗಾಗಿ ನಿಧಿಸಂಗ್ರಹಣೆ ಅಭಿಯಾನದಲ್ಲಿ ಮಾತನಾಡಿದ ಬೈಡನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಜೈವಿಕ ಅಥವಾ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಮಾತನಾಡುವಾಗ ಅವರು ತಮಾಷೆ ಮಾಡುತ್ತಿಲ್ಲ ಎಂದು ಹೇಳಿದರು.
ಕೆನಡಿ ಮತ್ತು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ನಾವು ಪರಮಾಣು ಶಸ್ತ್ರಾಸ್ತ್ರಗಳ ಆತಂಕ ಎದುರಿಸಿರಲಿಲ್ಲ. ಕಡಿಮೆ ಪರಿಣಾಮದ ಪರಮಾಣು ಅಸ್ತ್ರದ ಬಳಕೆಯು ಅಷ್ಟೇ ತ್ವರಿತವಾಗಿ ನಿಯಂತ್ರಣ ತಪ್ಪಿ ಜಾಗತಿಕ ವಿನಾಶಕ್ಕೆ ಕಾರಣವಾಗಬಹುದು ಎಂದು ಅಧ್ಯಕ್ಷ ಬೈಡನ್ ಎಚ್ಚರಿಸಿದರು.
ಯುಕ್ರೇನ್‌ನಲ್ಲಿ ರಷ್ಯಾವು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂಬ ನಿರೀಕ್ಷೆಯ ಬಗ್ಗೆ ಯುಎಸ್ ಅಧಿಕಾರಿಗಳು ಹಲವಾರು ತಿಂಗಳುಗಳಿಂದ ಎಚ್ಚರಿಸುತ್ತಿದ್ದಾರೆ. ಕಳೆದ ವಾರ ಸೇರಿದಂತೆ ಹಿಂದಿನ ಅನೇಕ ವಾರಗಳಲ್ಲಿ ಯುದ್ಧಭೂಮಿಯಲ್ಲಿ ರಷ್ಯಾ ಹಿನ್ನಡೆಗಳ ಸರಣಿಯನ್ನು ಎದುರಿಸುತ್ತಿದೆ. ಆದಾಗ್ಯೂ, ಅಮೆರಿಕದ ಪರಮಾಣು ಪಡೆಗಳ ಸನ್ನದ್ಧರಾಗಬೇಕಾದಂಥ ಯಾವುದೇ ಬದಲಾವಣೆಯನ್ನು ರಷ್ಯಾದ ಪಡೆಗಳ ವಿಷಯದಲ್ಲಿ ಕಂಡುಬಂದಿಲ್ಲ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ಬೆಲಾರಸ್ ಗಡಿಗೆ ರಷ್ಯಾ ಪರಮಾಣು ಕ್ಷಿಪಣಿ ರವಾನೆ.. ಲಿಥುವೇನಿಯಾ, ಉಕ್ರೇನ್ಗೆ ಕಾದಿದೆಯಾ ಗಂಡಾಂತರ?