ವಾಷಿಂಗ್ಟನ್(ಅಮೆರಿಕ): ಪೋಷಕಾಂಶಗಳಿಂದ ವಂಚಿತವಾದ ಪುಟ್ಟ ಮಕ್ಕಳಿಗೆ, ಎದೆ ಹಾಲು ಸಮಸ್ಯೆಯಿಂದ ಬಳಲುತ್ತಿರುವ ತಾಯಂದಿರಿಗೆ ಸಹಾಯವಾಗಿ ಅಮೆರಿಕದ ಮಹಿಳೆಯೊಬ್ಬರು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. ಯುರೋಪ್ ರಾಷ್ಟ್ರಗಳಲ್ಲಿ ತಾಯಂದಿರಲ್ಲಿ ಎದೆಹಾಲಿನ ಕೊರತೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ವೇಳೆ ಇಂತಹ ಕೊರತೆಯಿಂದ ಬಳಲುತ್ತಿರುವ ತಾಯಿ ಮತ್ತು ಮಕ್ಕಳಿಗೆ ಅಮೆರಿಕದ ಉತಾಹ್ ಪ್ರದೇಶದ ಮಹಿಳೆ ಅಲಿಸ್ಸಾ ಚಿಟ್ಟಿ ಎಂಬುವರು ತಮ್ಮ ಎದೆಹಾಲನ್ನ ಸಂಗ್ರಹಿಸಿ ಮಾರಾಟ ಮಾಡಿದ್ದಾರೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಅಲಿಸ್ಸಾ ಚಿಟ್ಟಿ, ತಾನು ಎದೆಹಾಲನ್ನು ಸಂಗ್ರಹಿಸಿ ಮೂರು ಫ್ರಿಡ್ಜ್ಗಳಲ್ಲಿ ಶೇಖರಿಸಿಟ್ಟಿದ್ದೆ. ಇದನ್ನು ಬಳಿಕ ಮಾರಾಟ ಮಾಡಿದೆ. ಒಂದು ಲೀಟರ್ ಎದೆಹಾಲಿಗೆ 1 ಔನ್ಸ್(77.48 ಡಾಲರ್) ನಿಗದಿ ಮಾಡಿದೆ. ಒಟ್ಟಾರೆ ನಾನು 118 ಲೀಟರ್ ಎದೆಹಾಲು ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ನಾನು 3 ಸಾವಿರ ಔನ್ಸ್ ಸಂಗ್ರಹಿಸಿದ್ದೇನೆ. ನಾನು ಮನೆಯಲ್ಲಿ ಇರುವುದಕ್ಕಿಂತ ಹೊರಗಡೆಯೇ ಹೆಚ್ಚು ಸುತ್ತಾಡುವೆ. ಸಂಗ್ರಹವಾದ ಹಣದಲ್ಲಿ ಒಂದಷ್ಟು ಭಾಗವನ್ನು ಹಾಲಿನ ಬ್ಯಾಂಕ್ಗೆ ದೇಣಿಗೆ ನೀಡಲು ಬಯಸಿದ್ದೇನೆ. ದೇಶದಲ್ಲಿ ಬೇಬಿ ಫಾರ್ಮುಲಾ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಸಹ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.
ಅಮೆರಿಕದಲ್ಲಿ ಎದೆಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಅಲ್ಲಿನ ಜನರು ಎದೆಹಾಲು ಸಂಗ್ರಹಿಸಿ ಅಗತ್ಯವಿರುವ ತಾಯಂದಿರಿಗೆ, ಮಕ್ಕಳಿಗೆ ಅನುಕೂಲವಾಗಲು ಮಾರಾಟ ಮಾಡುತ್ತಾರೆ. ಇದಕ್ಕೆ ಆ ದೇಶದಲ್ಲಿ ಕಾನೂನಾತ್ಮಕ ಬೆಂಬಲವಿದೆ. ಆದರೂ ಈ ವ್ಯವಹಾರಕ್ಕೆ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ.
ಓದಿ: ಮದುವೆ ನಡೆಯುತ್ತಿದ್ದಾಗಲೇ ವರ ಮದ್ಯಪಾನ.. ಅದೇ ಮಂಟಪದಲ್ಲಿ ಬೇರೆಯವನೊಂದಿಗೆ ಸಪ್ತಪದಿ ತುಳಿದ ವಧು!