ETV Bharat / international

ಭಾರತದ ಶಕ್ತಿ ಹೊಗಳಿದ ಅಮೆರಿಕ: ಇಂಡಿಯಾ ಜೊತೆ ಕೆಲಸ ಮಾಡಲು ಬದ್ಧ ಎಂದ ದೊಡ್ಡಣ್ಣ - ಭಾರತದ ಜೊತೆ ಕೆಲಸ ಮಾಡಲು ಸಿದ್ಧ

ಭಾರತದ ಶಕ್ತಿಯನ್ನು ಹೊಗಳಿದ ಅಮೆರಿಕ, ಉಭಯ ದೇಶಗಳ ಅಭಿವೃದ್ಧಿಗೆ ಕ್ವಾಡ್‌ನಂತಹ ಗುಂಪುಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ತಾನು ಸಿದ್ಧ ಎಂದು ಹೇಳಿದೆ.

ಭಾರತದ ಶಕ್ತಿ ಹೊಗಳಿದ ಅಮೆರಿಕ
ಭಾರತದ ಶಕ್ತಿ ಹೊಗಳಿದ ಅಮೆರಿಕ
author img

By

Published : Apr 20, 2023, 11:56 AM IST

ವಾಷಿಂಗ್ಟನ್: ಕೆಲ ದಿನಗಳ ಹಿಂದಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಅಮೆರಿಕ, ಈಗ ದೇಶದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದೆ. ಉಭಯ ದೇಶಗಳ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಮತ್ತು ಆದ್ಯತೆಗಳ ಸಹಕಾರ ವಿಸ್ತರಿಸಲು ಕ್ವಾಡ್‌ನಂತಹ ಗುಂಪುಗಳಲ್ಲಿ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡಲು ತಾನು ಸಿದ್ಧ ಎಂದು ಅಮೆರಿಕ ಹೇಳಿದೆ.

ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ವಾಡ್ ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ವೇದಿಕೆಯಾಗಿದೆ. ಇಂಡೋ- ಪೆಸಿಫಿಕ್‌ನ ಸಮುದ್ರ ಮಾರ್ಗಗಳನ್ನು ಯಾರ ಪ್ರಭಾವಕ್ಕೂ ಒಳಪಡಿಸದೇ ಮುಕ್ತವಾಗಿಡುವುದು ವೇದಿಕೆಯ ತಂತ್ರವಾಗಿದೆ. ಅಮೆರಿಕ ಮತ್ತು ಭಾರತ ದೊಡ್ಡ ಮಟ್ಟದಲ್ಲಿ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಅದು ವ್ಯಾಪಾರವನ್ನೂ ಒಳಗೊಂಡಿದೆ ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದು, ಭಾರತ ಮತ್ತು ಅಮೆರಿಕದ ಶಾಂತಿಯುತ ಮತ್ತು ಸಾಮರಸ್ಯವು ಜಾಗತಿಕ ಸಮುದಾಯಕ್ಕೆ ಅಡಿಪಾಯ ನಿರ್ಮಿಸುತ್ತಿದೆ. ಉಭಯ ದೇಶಗಳ ನಡುವಿನ ಸಂಬಂಧವು "ಶಕ್ತಿಗೆ ಶಕ್ತಿಯಾಗಿ" ಬೆಳೆಯಲಿ ಎಂದು ಅವರು ಹೇಳಿದ್ದರು.

ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಇಂಡಿಯಾ ಹೌಸ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸೀತಾರಾಮನ್, "ನಾವು ಒಟ್ಟಿಗೆ ಇದ್ದೇವೆ. ಶಕ್ತಿಯುತ, ಶಾಂತಿಯುತ ಮತ್ತು ಸಾಮರಸ್ಯದ ಬಲವಾದ ಜಾಗತಿಕ ಗುಂಪಿಗೆ ಅಡಿಪಾಯ ನಿರ್ಮಿಸುತ್ತಿದ್ದೇವೆ" ಎಂದು ಹೇಳಿದ್ದರು.

ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು, ಅಮೆರಿಕದಾದ್ಯಂತ ಭಾರತೀಯ ಸಮುದಾಯದ ಜನರು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವಾಣಿಜ್ಯ, ಆರ್ಥಿಕ ಮತ್ತು ಜನಗಳ ನಡುವಿನ ಸಂಬಂಧವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಓದಿ: ಬಿಜೆಪಿ ಭದ್ರಕೋಟೆ ಕಿತ್ತೂರು ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಕಾಂಗ್ರೆಸ್.. ಈ ಬಾರಿಯ ರಾಜಕೀಯ ಲೆಕ್ಕಾಚಾರವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.