ETV Bharat / international

ನಿಜ್ಜರ್​ ಹತ್ಯೆ: ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಹಲವು ಬಾರಿ ಮನವಿ: ಅಮೆರಿಕ - ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ಭಾರತಕ್ಕೆ ಹಲವು ಸಂದರ್ಭಗಳಲ್ಲಿ ಒತ್ತಾಯಿಸಿದ್ದೇವೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ
ಅಮೆರಿಕ
author img

By PTI

Published : Oct 3, 2023, 7:49 AM IST

ವಾಷಿಂಗ್ಟನ್: ಅಮೆರಿಕ ಆಡಳಿತವು ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ಭಾರತ ಸರ್ಕಾರದೊಂದಿಗೆ ಹಲವಾರು ಸಂದರ್ಭಗಳಲ್ಲಿ ಒತ್ತಾಯಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ.

ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕಳೆದ ವಾರ ಇಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಆಂಟೋನಿ ಬ್ಲಿಂಕೆನ್​ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ಅವರು ಸ್ಪಷ್ಟಪಡಿಸಿದಂತೆ, ನಾನು ಮತ್ತೆ ಆ ವಿಚಾರವನ್ನು ಪುನರುಚ್ಚರಿಸುತ್ತಿದ್ದೇನೆ. ನಾವು ನಮ್ಮ ಕೆನಡಾದ ಸಹೋದ್ಯೋಗಿಗಳೊಂದಿಗೆ ನಿಕಟ ಸಮನ್ವಯದಲ್ಲಿದ್ದೇವೆ. ಕೆನಡಾದದೊಂದಿಗೆ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ತನಿಖೆಯಲ್ಲಿ ಸಹಕರಿಸುವಂತೆ ನಾವು ಭಾರತ ಸರ್ಕಾರದೊಂದಿಗೆ ಹಲವಾರು ಸಂದರ್ಭಗಳಲ್ಲಿ ತಿಳಿಸಿದ್ದೇವೆ ಎಂದು ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದುವರೆದು, ಭಾರತವು ಕೆನಡಾದೊಂದಿಗೆ ಸಹಕರಿಸಲು ಒಪ್ಪಿಕೊಂಡಿದೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಮಿಲ್ಲರ್​ ಈ ಪ್ರಶ್ನೆಗೆ ನವದೆಹಲಿ ಇದಕ್ಕೆಲ್ಲ ಉತ್ತರಿಸುತ್ತದೆ ಎಂದಿದ್ದಾರೆ. ಭಾರತ ಸರ್ಕಾರವನ್ನು ಅವರ ಪರವಾಗಿಯೇ ಮಾತನಾಡಲು ಬಿಡುತ್ತೇವೆ. ಮತ್ತು ನಾನು ಅಮೆರಿಕ ಸರ್ಕಾರದ ಪರವಾಗಿ ಮಾತನಾಡುತ್ತೇನೆ. ಹಾಗೆ ನಾವು ತನಿಖೆಗೆ ಭಾರತದ ಸಹಕಾರ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಮ್ಯಾಥ್ಯೂ ಮಿಲ್ಲರ್ ಹೇಳಿದರು. (ಪಿಟಿಐ)

ಇದನ್ನು ಓದಿ: ಸಿವಿಲ್ ವಂಚನೆ ಪ್ರಕರಣ: ಇದು ರಾಜಕೀಯ ಪ್ರೇರಿತ ಎಂದ ಟ್ರಂಪ್

ಇನ್ನು ಮೊನ್ನೆ ತಾನೇ, ವಿದೇಶಾಂಗ ಸಚಿವ ಎಸ್. ಜೈಶಂಕರ್ ವಾಷಿಂಗ್ಟ್​ನಲ್ಲಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆ ಬಳಿಕ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು." ಭಾರತ ಮತ್ತು ಕೆನಡಾ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಖಲಿಸ್ತಾನಿ ಪ್ರತ್ಯೇಕತಾವಾದಿ ಸಾವಿನ ಕುರಿತು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಅನುಮತಿ ನೀಡಬೇಕು. ಕೆನಡಾದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲು ಭಾರತ ಸಿದ್ಧವಾಗಿದೆ ಎಂದು ಆ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು.

ಕೆನಡಾದೊಂದಿಗಿನ ಪ್ರಸ್ತುತ ಉದ್ವಿಗ್ನತೆಯನ್ನು ಸ್ಟ್ಯಾಂಡ್‌ಆಫ್ ಎಂದು ಕರೆಯಲಾಗುವುದಿಲ್ಲ. ಅಲ್ಲಿ ವಿಜೃಂಭಿಸುತ್ತಿರುವ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಬಗ್ಗೆ ಕೆನಡಾ ಸರ್ಕಾರದ ಸಹನೆಯೇ ಕಾರಣ. ಈ ಬಾರಿ ಕೆನಡಾ ಇಂತಹ ಆರೋಪ ಮಾಡಿರುವುದರಿಂದ ನಾನು ಡೆಡ್‌ಲಾಕ್ ಎಂದು ಕರೆಯಬೇಕೇ ಅಥವಾ ಬೇಡವೇ ಎಂದು ನನಗೆ ತಿಳಿದಿಲ್ಲ. ಇದು ಭಾರತ ಸರ್ಕಾರದ ನೀತಿ ಅಲ್ಲ ಎಂದು ನಾವು ಅವರಿಗೆ ಹೇಳಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರವು ನಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಂಡರೆ ಅದನ್ನು ಪರಿಗಣಿಸಲು ಸಿದ್ಧರಿದ್ದೇವೆ. ಕೆನಡಾದಲ್ಲಿ ನಡೆಯುತ್ತಿರುವ ಸಮಸ್ಯೆಗೆ ಕೆನಡಾ ಸರ್ಕಾರದ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಸಹಿಷ್ಣುತೆಯೇ ಕಾರಣ ಎಂದಿದ್ದರು.

ಇದನ್ನೂ ಓದಿ: ಭಾರತ-ಕೆನಡಾ ಬಿಕ್ಕಟ್ಟಿನ ನಡುವೆ ಜಾಗತಿಕ ಬೆಳವಣಿಗೆ ಬಗ್ಗೆ ಚರ್ಚಿಸಿದ ಜೈಶಂಕರ್, ಬ್ಲಿಂಕೆನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.