ಲಂಡನ್: ಲಂಡನ್ ಸಂಸತ್ ಭವನದ ಮುಂದೆ ಇರುವ ವಿಶ್ವಮಾನವ ಸಂದೇಶ ಸಾರಿದ ಸಮಾಜ ಸುಧಾರಕ, ಕ್ರಾಂತಿಯೋಗಿ ಬಸವೇಶ್ವರರ ಪ್ರತಿಮೆಗೆ ಕೇಂದ್ರದ ಐಟಿ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ರಾಜೀವ್ ಚಂದ್ರಶೇಖರ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಂಡನ್ನಲ್ಲಿ ಬಸವಣ್ಣನ ತತ್ವ ಹಾಗೂ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದಕ್ಕೆ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ಗೆ ಧನ್ಯವಾದ ತಿಳಿಸಿದರು.
ಲ್ಯಾಂಬೆತ್ ಮಾಜಿ ಮೇಯರ್ ಹಾಗೂ ಫೌಂಡೇಷನ್ನ ಅಧ್ಯಕ್ಷ ಡಾ.ನೀರಜ್ ಪಾಟೀಲ್ ಹಾಗೂ ಹಲವರು ಉಪಸ್ಥಿತರಿದ್ದರು. 2015, ನವೆಂಬರ್ 14 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್ನಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿದ್ದಾರೆ.
ಇದನ್ನೂ ಓದಿ: 'ಥ್ಯಾಂಕ್ ಯೂ ಡಾಕ್ಟರ್' ವೈದ್ಯರ ದಿನಾಚರಣೆಯಂದು ಜೀವರಕ್ಷಕರಿಗೊಂದು ಸೆಲ್ಯೂಟ್