ETV Bharat / international

ಇಸ್ರೇಲ್​ - ​ಹಮಾಸ್​ ಸಂಘರ್ಷ : ಗಾಜಾದಲ್ಲಿ ನೀರು, ಆಹಾರಕ್ಕಾಗಿ ಹಾಹಾಕಾರ, ವಿಶ್ವಸಂಸ್ಥೆ ಕಳವಳ - ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ ಮಾರ್ಟಿನ್​ ಗ್ರಿಫಿತ್ಸ್

UN on Israel-Hamas war; ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ ಹಮಾಸ್ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದೆ. ಗಾಜಾದಲ್ಲಿರುವ ನಿರಾಶ್ರಿತರು ಎರಡು ಅರೇಬಿಕ್​ ಬ್ರೆಡ್​ಗಳೊಂದಿಗೆ ದಿನ ಕಳೆಯುವಂತಾಗಿದೆ.

UN on Israel-Hamas war
ಇಸ್ರೇಲ್​ - ​ಹಮಾಸ್​ ಸಂಘರ್ಷ
author img

By ETV Bharat Karnataka Team

Published : Nov 4, 2023, 11:13 AM IST

ನ್ಯೂಯಾರ್ಕ್​(ಅಮೆರಿಕ) : ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್ ಹಮಾಸ್​ ಉಗ್ರರ ನಡುವೆ ಸಂಘರ್ಷ ಮುಂದುವರೆದಿದೆ. ಇಸ್ರೇಲ್​ ಗಾಜಾದ ಮೇಲೆ ತನ್ನ ಪ್ರಬಲ ದಾಳಿಯನ್ನು ಮುಂದುವರೆಸಿದೆ. ಇದರ ನಡುವೆ ಯುದ್ಧಪೀಡಿತ ಗಾಜಾದಲ್ಲಿ ಸಂತ್ರಸ್ತರು ಎದುರಿಸುತ್ತಿರುವ ಆಹಾರದ ಕೊರತೆ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಭಾರತ ಸೇರಿದಂತೆ ಅನೇಕ ದೇಶಗಳು ಗಾಜಾಪಟ್ಟಿಯಲ್ಲಿ ಯುದ್ಧದಿಂದ ನಿರಾಶ್ರಿತರಾಗಿರುವ ಜನರ ನೆರವಿಗೆ ಧಾವಿಸಿದೆ. ಇದರ ಜೊತೆಗೆ ವಿಶ್ವಸಂಸ್ಥೆಯು ನಿರಾಶ್ರಿತರ ನೆರವಿಗೆ ಧಾವಿಸಿದ್ದು, ನಾಗರಿಕರಿಗೆ ಬೇಕಾದ ಮಾನವೀಯ ನೆರವುಗಳನ್ನು ನೀಡುತ್ತಿದೆ. ಜೊತೆಗೆ ಅಗತ್ಯ ವಸ್ತುಗಳಾದ ಆಹಾರ, ಔಷಧಿಗಳನ್ನು ಪೂರೈಸುವ ಕೆಲಸವನ್ನು ಮಾಡುತ್ತಿದೆ. ಯುದ್ಧದಿಂದಾಗಿ ಗಾಜಾಪಟ್ಟಿಯಲ್ಲಿ ನಿರಾಶ್ರಿತರಾಗಿರುವ ಸರಾಸರಿ ಜನರು ವಿಶ್ವಸಂಸ್ಥೆ ಪೂರೈಸಿರುವ ಅರೇಬಿಕ್​ ಬ್ರೆಡ್​ನ್ನು ಅವಲಂಬಿಸಿದ್ದಾರೆ. ಗಾಜಾದ ಬೀದಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನೀರಿಗಾಗಿ ಗಾಜಾದ ಜನರು ಪರದಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಗಾಜಾದ ನಿರ್ದೇಶಕ ಥೋಮಸ್​ ವೈಟ್​​, ಕಳೆದ ವಾರ ಗಾಜಾದ ಉದ್ದಗಲವನ್ನು ಸಂಚರಿಸಿದ್ದೇನೆ. ಎಲ್ಲೆಡೆ ಸಾವು ಮತ್ತು ನೋವಿನ ದೃಶ್ಯಗಳು ಮಾತ್ರ ಕಾಣಸಿಗುತ್ತಿವೆ. ಯಾವ ಸ್ಥಳವೂ ಇಲ್ಲಿ ಸುರಕ್ಷಿತವಾಗಿಲ್ಲ. ಇಲ್ಲಿನ ನಾಗರೀಕರು ಜೀವ ಭಯದಿಂದ ತತ್ತರಿಸಿಹೋಗಿದ್ದಾರೆ. ವಿಶ್ವಸಂಸ್ಥೆಯ ಪ್ಯಾಲೆಸ್ಟೈನಿಯನ್​ ನಿರಾಶ್ರಿತರ ಸಂಸ್ಥೆಯು (UNRWA) ಗಾಜಾದಲ್ಲಿರುವ 89 ಬೇಕರಿಗಳಿಗೆ ನೆರವು ನೀಡುವ ಮೂಲಕ ಸುಮಾರು 1.7 ಮಿಲಿಯನ್​ ಜನರಿಗೆ ಆಹಾರ ಪೂರೈಸುವ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಸಭೆಯಲ್ಲಿ ಹೇಳಿದರು.

ಜನರು ಒಂದು ತುಂಡು ಬ್ರೆಡ್​ಗಾಗಿ ಪರದಾಡುತ್ತಿದ್ದಾರೆ. ಗಾಜಾದ ಬೀದಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮೂರು ನೀರಿನ ಪೂರೈಕೆ ಮೂಲಗಳಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಬಹುತೇಕ ನಾಗರೀಕರು ಲವಣಯುಕ್ತ ನೀರನ್ನು ಅವಲಂಬಿಸುವಂತಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ ಮಾರ್ಟಿನ್​ ಗ್ರಿಫಿತ್ಸ್​ ಅವರು, ಇಸ್ರೇಲ್​, ಈಜಿಪ್ಟ್​​, ಅಮೆರಿಕ ಮತ್ತು ವಿಶ್ವಸಂಸ್ಥೆಯ ನಡುವೆ ಗಾಜಾಗೆ ಇಂಧನ ಪೂರೈಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆಸ್ಪತ್ರೆಗಳು, ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಮತ್ತು ಆಹಾರ ಮತ್ತು ನೀರು ಪೂರೈಸಲು ಇಂಧನ ಅತ್ಯಗತ್ಯ. ಗಾಜಾಕ್ಕೆ ಇಂಧನ ಪೂರೈಸಲು ಅನುಮತಿಸಬೇಕು. ಇಂಧನಗಳ ಕೊರತೆಯಿಂದಾಗಿ ವಿವಿಧ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಹೇಳಿದ್ದಾರೆ.

ವೈಟ್​ ಮಾತನಾಡಿ, ಆರು ಲಕ್ಷಕ್ಕೂ ಅಧಿಕ ಜನರು ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಇವರಿಗೆ ವಿಶ್ವಸಂಸ್ಥೆಯ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಆದರೆ ಸಂಸ್ಥೆಯು ಉತ್ತರ ಗಾಜಾದಲ್ಲಿರುವ ನಿರಾಶ್ರಿತ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ. ಇಲ್ಲಿ ಇಸ್ರೇಲ್​ ತನ್ನ ವೈಮಾನಿಕ ದಾಳಿ ಮತ್ತು ಭೂದಾಳಿಯನ್ನು ಮುಂದುವರೆಸಿದೆ ಎಂದು ಹೇಳಿದರು. ಕಳೆದ ಅಕ್ಟೋಬರ್​ 7ರಿಂದ ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​​ ಹಮಾಸ್​ ಉಗ್ರರ ನಡುವೆ ಯುದ್ಧ ನಡೆಯುತ್ತಿದೆ.

ಸುಮಾರು 4000ಕ್ಕೂ ಅಧಿಕ ಜನರು ಇಲ್ಲಿನ ಶಾಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅವರು ಸರಿಯಾದ ಮೂಲಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಇಲ್ಲಿನ ಶಾಲಾ ಕೊಠಡಿಗಳಲ್ಲಿ ನಿದ್ರಿಸುತ್ತಿದ್ದು, ಪುರುಷರು ಕೊಠಡಿಯ ಹೊರಗಡೆ ಮಲಗುತ್ತಿದ್ದಾರೆ. ಈ ನಿರಾಶ್ರಿತ ಕ್ಯಾಂಪ್​ಗಳಲ್ಲಿ ಒಟ್ಟು 38 ಮಂದಿ ಸಾವನ್ನಪ್ಪಿದ್ದಾರೆ. ಮಾನವೀಯ ನೆರವುಗಳನ್ನು ನೀಡುತ್ತಿದ್ದ ಸಂಸ್ಥೆಯ(UNRWA) ಒಟ್ಟು 72 ಮಂದಿ ಸಾವನ್ನಪ್ಪಿದ್ದಾರೆ. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಒಟ್ಟು 9000 ಮಂದಿಯನ್ನು ಹತ್ಯೆಗೈಯಲಾಗಿದೆ.

ನಿರಾಶ್ರಿತರಿಗೆ ಮಾನವೀಯ ನೆರವು ನೀಡುವ ಉದ್ದೇಶದಿಂದ ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಜೊತೆಗೆ ಹಮಾಸ್​ ಉಗ್ರರು ಒತ್ತೆಯಾಳಾಗಿರಿಸಿರುವ ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ವಿಶ್ವಸಂಸ್ಥೆ ಒತ್ತಾಯಿಸಿದೆ.

ಇದನ್ನೂ ಓದಿ : ಇಸ್ರೇಲ್‌ಗೆ 14.3 ಶತಕೋಟಿ ಡಾಲರ್ ನೆರವು ನೀಡಲು ಮುಂದಾದ ಅಮೆರಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.