ETV Bharat / international

ಅಮೆರಿಕ ನಿರ್ಮಿತ ಉಕ್ರೇನ್​ ರಾಕೆಟ್​ ದಾಳಿಗೆ 63 ರಷ್ಯಾ ಸೈನಿಕರು ಹತ

author img

By

Published : Jan 3, 2023, 7:37 AM IST

ದಾರುಣ ಘಟನೆಗಳಿಗೆ ಸಾಕ್ಷಿಯಾಗಿರುವ ಉಕ್ರೇನ್​-ರಷ್ಯಾ ಯುದ್ಧ 11 ತಿಂಗಳಿಂದ ಸಾಗುತ್ತಲೇ ಇದೆ. ಉಭಯ ರಾಷ್ಟ್ರಗಳ ಸೈನಿಕರು, ನಾಗರಿಕರ ಪ್ರಾಣ ಹಾನಿ ನಿಂತಿಲ್ಲ. ನಿನ್ನೆ ನಡೆದ ದಾಳಿಯಲ್ಲೂ ರಷ್ಯಾದ ಹಲವು ಯೋಧರು ಅಸುನೀಗಿದ್ದಾರೆ.

ukrainian-rocket-strike-killed-russian-soldiers
ಉಕ್ರೇನ್​ ರಾಕೆಟ್​ ದಾಳಿಗೆ 63 ರಷ್ಯಾ ಸೈನಿಕರು ಹತ

ಮಾಸ್ಕೋ (ರಷ್ಯಾ): ಉಕ್ರೇನ್​ ಮತ್ತು ರಷ್ಯಾ ನಡುವಣ ಯುದ್ಧ ಒಂದು ವರ್ಷ ಸಮೀಪಿಸುತ್ತಿದೆ. ಇದು ಅಪಾರ ಪ್ರಮಾಣದ ಪ್ರಾಣ, ಆಸ್ತಿ ಹಾನಿ ಉಂಟು ಮಾಡಿದೆ. ಹೊಸ ವರ್ಷಾಚರಣೆಯ ಮಧ್ಯೆಯೂ ಉಕ್ರೇನ್​ ನಡೆಸಿದ ಬಾಂಬ್​ ದಾಳಿಯಲ್ಲಿ ರಷ್ಯಾದ 63 ಸೈನಿಕರು ಸಾವನ್ನಪ್ಪಿದ್ದಾರೆ. ಇದು 100ಕ್ಕೂ ಹೆಚ್ಚು ಎಂದು ಉಕ್ರೇನ್​ ಹೇಳಿಕೊಂಡಿದೆ.

'ಡೊನೆಟ್ಸ್ಕ್‌ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಒಂದು ಘಟಕವನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡುತ್ತಿದ್ದ ಹಂತದಲ್ಲಿ ಉಕ್ರೇನಿಯನ್ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್‌ನ 6 ರಾಕೆಟ್‌ಗಳಿಂದ ದಾಳಿ ಮಾಡಿವೆ. ಇದರಲ್ಲಿ ನಮ್ಮ 63 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ನಾಲ್ಕು ರಾಕೆಟ್​ಗಳನ್ನು ಹೊಡೆದುರುಳಿಸಲಾಗಿದೆ' ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

'ಪಡೆಗಳನ್ನೇ ಗುರಿಯಾಗಿಸಿಕೊಂಡು ಉಕ್ರೇನ್​ ಶಿಪಿಲೋವ್ಕಾ, ಲಿಮನ್, ಕ್ರೆಮೆನ್ನಾಯಾ, ಪ್ಲೋಶ್ಚಾಂಕಾ, ಚೆರ್ವೊನಾಯಾ ಡಿಬ್ರೊವಾ, ನಿಕೊಲಾಯೆವ್ಕಾ, ಸ್ಕೆಲ್ಕಿ ಪ್ರದೇಶಗಳ ಮೇಲೆ ನಿರಂತರ ರಾಕೆಟ್​ ದಾಳಿ ನಡೆಸಿತು. ಇದರಲ್ಲಿ ಡೊನೆಟ್ಸ್ಕ್​ ಪ್ರದೇಶದಲ್ಲಿ ಸೈನಿಕರು ಹತರಾಗಿದ್ದಾರೆ' ಎಂದು ರಷ್ಯಾದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ.

ಮತ್ತೊಂದೆಡೆ, ಬೆರಿಸ್ಲಾವ್ ನಗರದಲ್ಲಿ ನಡೆದ ಶೆಲ್​ ದಾಳಿಯಲ್ಲಿ ಐದು ಉಕ್ರೇನಿಗರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉಕ್ರೇನ್​ ತಿಳಿಸಿದೆ. ನಗರದ ಮಾರುಕಟ್ಟೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್​ ಆಡಳಿತ ಹೇಳಿದೆ.

ಯುದ್ಧ ನಿಲ್ಲಿಸಲು ಕೋರಿದ್ದ ಪೋಪ್: ಹೊಸ ವರ್ಷಕ್ಕೂ ಮೊದಲು ಶಾಂತಿ ಸಂದೇಶ ನೀಡಿದ್ದ ಪೋಪ್​ ಫ್ರಾನ್ಸಿಸ್​ ಯುದ್ಧ ನಿಲ್ಲಿಸಲು ಕೋರಿದ್ದರು. ರಷ್ಯಾ- ಉಕ್ರೇನ್​ ಯುದ್ಧವನ್ನು ಪೋಪ್​ ಫ್ರಾನ್ಸಿಸ್​​ ಅವರು ಬುದ್ಧಿಹೀನ ನಡೆ ಎಂದು ಟೀಕಿಸಿ, ತಿಕ್ಕಾಟವನ್ನು ಕೊನೆಗೊಳಿಸುವಂತೆ ಸಲಹೆ ನೀಡಿದ್ದರು.

ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ಸೆನ್ಸ್​ಲೆಸ್​(ಬುದ್ಧಿಹೀನ) ಆಗಿದೆ. ಲೆಕ್ಕವಿಲ್ಲದಷ್ಟು ಜೀವಗಳ ಬಲಿಪಡೆದ ಆಕ್ರಮಣವನ್ನು ಇಲ್ಲಿಗೆ ನಿಲ್ಲಿಸಬೇಕು. ಆಯುಧಗಳ ಸದ್ದು ಅಡಗಬೇಕು, ನೊಂದ ಹೃದಯಗಳಿಗೆ ಒಗ್ಗಟ್ಟಾಗಿ ನೆರವು ನೀಡುವ ಮನಸ್ಸನ್ನು ಭಗವಂತ ನೀಡಬೇಕು. ಕ್ರಿಸ್​ಮಸ್​ ಮನಸುಗಳನ್ನು ಬೆಳಗಲಿ ಎಂದು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್​ ಶಾಂತಿ ಸಂದೇಶ ಸಾರಿದ್ದರು.

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀಕರತೆ: 4 ತಿಂಗಳ ಬಳಿಕ ಬಿಡುಗಡೆಯಾದ ಯೋಧನ ಅಂದು, ಇಂದಿನ ಸ್ಥಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.