ಕೀವ್: ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧದಿಂದ ನಡೆದ ದಾಳಿಗಳಲ್ಲಿ ಅನೇಕ ಸ್ಮಾರಕ, ಕಟ್ಟಡಗಳು ಧರೆಗೆ ಉರುಳಿದೆ. ಇದೀಗ ಸಾಂಸ್ಕೃತಿಕ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆ ಉಂಟಾಗಿದೆ. ಈ ಕುರಿತು ಯುನೆಸ್ಕೋ ಕೂಡ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಯುನೆಸ್ಕೋ, ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಿಂದ ಉಕ್ರೇನ್ನ ರಾಜಧಾನಿ ಕೀವ್ ಮತ್ತು ಎಲ್ವಿವ್ ನಗರದಲ್ಲಿನ ಸಾಂಸ್ಕೃತಿಕ ಕಟ್ಟಡಗಳು ಅಪಾಯದಲ್ಲಿವೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಸಾಂಸ್ಕೃತಿಕ ಭಾಗವಾಗಿರುವ ಯುನೆಸ್ಕೋ ಪ್ರಕಾರ, ಕೀವ್ನಲ್ಲಿರುವ ಸೇಂಟ್ ಸೋಫಿಯಾ ಕ್ಯಾಥೆಡ್ರೆಲ್, ನಗರದ ಕೀವ್-ಪೆಚೆರ್ಸ್ಕ್ ಲಾವ್ರಾ ಮಠದ ಸ್ಥಳದ ಮಧ್ಯಕಾಲೀನ ಕಟ್ಟಡಗಳು ಮತ್ತು ಎಲ್ವಿವ್‌ನಲ್ಲಿರುವ ಐತಿಹಾಸಿಕ ಕೇಂದ್ರಗಳು ಅಪಾಯದಲ್ಲಿವೆ ಎಂದು ಬಿಬಿಸಿ ತಿಳಿಸಿದೆ.
ಈ ಸ್ಥಳಗಳು ಯುನೆಸ್ಕೋ ಪಾರಂಪರಿಕ ಕಟ್ಟಡವಾಗಿದ್ದು, ಯುದ್ಧದಿಂದ ಹಾನಿಯಾಗುವ ಭೀತಿ ಎದುರಿಸುತ್ತಿವೆ.
ಉಕ್ರೇನ್ನ ಪಾರಂಪರಿಕ ಕಟ್ಟಡಗಳು ಯುದ್ಧದಿಂದ ಅಪಾಯವನ್ನು ಎದುರಿಸುತ್ತಿರುವ ಹಿನ್ನೆಲೆ ಸಂಪೂರ್ಣ ಸುರಕ್ಷತೆಯ ಖಾತ್ರಿಯ ಗ್ಯಾರಂಟಿಯನ್ನು ನೀಡಲಾಗುವುದಿಲ್ಲ ಎಂದಿದೆ. ನೇರ ದಾಳಿಯ ಅಪಾಯವನ್ನು ಎದುರಿಸುತ್ತಿರುವ ಹಿನ್ನೆಲೆ ಈ ಎರಡು ನಗರದಲ್ಲಿ ಬಾಂಬ್ ದಾಳಿಯ ಬಳಿಕ ಈ ಪ್ರದೇಶಗಳು ದುರ್ಬಲವಾಗಿವೆ.
ಲಿವೈವಿ ಮಧ್ಯಕಾಲೀನ ಐತಿಹಾಸಿಕವಾಗಿ ಹಳೆಯ ನಗರವಾಗಿದ್ದು, ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ವಾಸ್ತುಶಿಲ್ಪ ಮತ್ತು ಆಡಳಿತಾತ್ಮಕ ನಿರ್ವಹಣ ಪ್ರದೇಶವಾಗಿದೆ. 13ರಿಂದ 10ನೇ ಶತಮಾನದವರೆಗೆ ಇದು ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವನ್ನು 1998ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.
ಸೇಂಟ್ ಸೋಫಿಯಾ ಕ್ಯಾಥೆಡ್ರಲ್ ಕಟ್ಟಡವನ್ನು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಟರ್ಕಿಯ ಹಗೈನ್ ಸೊಫಿಯಾ ವಿನ್ಯಾಸ ಮಾಡಿದ್ದರು, ಇದು ಕಾನ್ಸ್ಟಾಂಟಿನೋಪಲ್ನ ಭಾಗವಾಗಿತ್ತು. ಈ ಕಾಲಘಟ್ಟದಲ್ಲಿ ಅಳಿದು ಉಳಿದಿರುವ ಕಟ್ಟಡಗಳಲ್ಲಿ ಇದು ಒಂದಾಗಿದೆ.
ಕೀವ್-ಪೆಚೆರ್ಸ್ಕ್ ಲಾವ್ರಾ, ಕೀವ್‌ನ ಗುಹೆಗಳ ಮಠ ಎಂದು ಕರೆಯಲ್ಪಡುತ್ತದೆ. ಇದನ್ನೂ ಕ್ಯಾಥೆಡ್ರಲ್ ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ. ಮಧ್ಯಯುಗದಲ್ಲಿ ಪೂರ್ವ ಯುರೋಪಿನಲ್ಲಿ ವಾಸಿಸುತ್ತಿದ್ದ ರಷ್ಯಾದ ಅತ್ಯಂತ ಹಳೆಯ ಸನ್ಯಾಸಿಗಳ ಸಂಕೀರ್ಣವಾಗಿದ್ದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಉಕ್ರೇನ್ನ ಬಂದರು ನಗರವಾಗಿರುವ ಒಡೆಶಾ ಕೂಡ ಇತ್ತೀಚೆಗೆ ಅಪಾಯದ ಪಟ್ಟಿಯಲ್ಲಿ ಸೇರಿದೆ.
ಯುದ್ಧದಿಂದ ಉಕ್ರೇನ್ನ ಅನೇಕ ಚರ್ಚ್, ವಸ್ತು ಸಂಗ್ರಹಾಲಯ ಸೇರಿದಂತೆ ಸರಿಸುಮಾರು 150 ಸಾಂಸ್ಕೃತಿಕ ಕಟ್ಟಡಗಳ ಮೇಲೆ ದಾಳಿ ನಡೆದಿದ್ದು, ಕೆಲವು ಸಂಪೂರ್ಣ ನಾಶವಾದರೆ, ಕೆಲವು ಭಾಗಶಃ ಹಾನಿಯಾಗಿದೆ ಎಂದು ಯುನೆಸ್ಕೋ ಈ ಹಿಂದೆ ತಿಳಿಸಿತ್ತು. (ಐಎಎನ್ಎಸ್)
ಇದನ್ನೂ ಓದಿ: ಮುಂದಿನ ವಾರ ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿ