ETV Bharat / international

ರಷ್ಯಾದ ಶೆಲ್​ ದಾಳಿಗೆ 23 ದಿನದ ಶಿಶು, 12 ವರ್ಷದ ಸಹೋದರ ಸೇರಿ 7 ಜನರ ಸಾವು: ಉಕ್ರೇನ್​ ಆರೋಪ - ರಷ್ಯಾದ ಶೆಲ್ ದಾಳಿ

ರಷ್ಯಾದ ಶೆಲ್​ ದಾಳಿಗೆ 23 ದಿನದ ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ ಆರೋಪ ಮಾಡಿದೆ.

Ukraine says 7 people died  7 people including newborn baby killed  killed in Russian shelling in Kherson  Ukraine Russia war  ರಷ್ಯಾದ ಶೆಲ್​ ದಾಳಿಗೆ 23 ದಿನದ ಶಿಶು  12 ವರ್ಷದ ಸಹೋದರ ಸೇರಿ 7 ಜನ ಸಾವು  ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ ಆರೋಪ  ರಷ್ಯಾದ ಶೆಲ್​ ದಾಳಿಗೆ 23 ದಿನದ ಮಗು  ರಷ್ಯಾ ವಿರುದ್ಧ ಉಕ್ರೇನ್​ ಮತ್ತೊಮ್ಮೆ ಗಂಭೀರ ಆರೋಪ  ಉಕ್ರೇನ್‌ನ ಖೆರ್ಸನ್ ಪ್ರದೇಶದ  ರಷ್ಯಾದ ಶೆಲ್ ದಾಳಿ  ಟೆಲಿಗ್ರಾಮ್‌ನಲ್ಲಿನ ಪೋಸ್ಟ್‌
ರಷ್ಯಾದ ಶೆಲ್​ ದಾಳಿಗೆ 23 ದಿನದ ಶಿಶು
author img

By

Published : Aug 14, 2023, 7:41 AM IST

ಕೀವ್, ಉಕ್ರೇನ್: ರಷ್ಯಾ ವಿರುದ್ಧ ಉಕ್ರೇನ್​ ಮತ್ತೊಮ್ಮೆ ಗಂಭೀರ ಆರೋಪ ಮಾಡಿದೆ. ಉಕ್ರೇನ್‌ನ ಖೆರ್ಸನ್ ಪ್ರದೇಶದಲ್ಲಿ ಭಾನುವಾರ ನಡೆದ ರಷ್ಯಾದ ಶೆಲ್ ದಾಳಿಗೆ ನವಜಾತ ಶಿಶು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ನಾಯಕರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ನಡೆದ ಶೆಲ್​ ದಾಳಿಯಲ್ಲಿ 23 ದಿನದ ಮಗು, ಆ ಮಗುವಿನ 12 ವರ್ಷದ ಸಹೋದರ ಮತ್ತು ಪೋಷಕರು ಸಾವನ್ನಪ್ಪಿದ್ದಾರೆ ಎಂದು ಖೆರ್ಸನ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.

ಟೆಲಿಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡ ಖೆರ್ಸನ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಪ್ರೊಕುಡಿನ್, ರಷ್ಯಾ ದಾಳಿಗೆ ಕುಟುಂಬವೊಂದು ಬಲಿಯಾಗಿದೆ. ಪುಟ್ಟ ಸೋಫಿಯಾಗೆ ಕೇವಲ 23 ದಿನಗಳು, ಆಕೆಯ ಸಹೋದರ ಆರ್ಟೆಮ್‌ಗೆ 12 ವರ್ಷ ಮತ್ತು ಇವರೊಂದಿಗೆ ತಂದೆ ಮತ್ತು ತಾಯಿ ಶೆಲ್​ ದಾಳಿಗೆ ತುತ್ತಾಗಿದ್ದಾರೆ. ಅಷ್ಟೇ ಅಲ್ಲ ಸ್ಟಾನಿಸ್ಲಾವ್ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಕ್ರಿಶ್ಚಿಯನ್ ಪಾದ್ರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಕ್ರಿಶ್ಚಿಯನ್ ಚರ್ಚ್​ನ ಪಾದ್ರಿ ಮೈಕೋಲಾ ಟಚಿಶ್ವಿಲಿ ಮತ್ತು ಅವರ ಸಹ ಗ್ರಾಮಸ್ಥರು ಶತ್ರುಗಳ ದಾಳಿಗೆ ಬಲಿಯಾಗಿದ್ದಾರೆ ಎಂದು ಒಲೆಕ್ಸಾಂಡರ್ ಪ್ರೊಕುಡಿನ್ ಮಾಹಿತಿ ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಖಾರ್ಕಿವ್‌ನ ಕುಪಿಯಾನ್ಸ್ಕ್ ಜಿಲ್ಲೆಯಿಂದ 36 ಮಕ್ಕಳು ಸೇರಿದಂತೆ 111 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಖಾರ್ಕಿವ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ. ಸ್ಥಳೀಯ ಅಧಿಕಾರಿಗಳು ಆಗಸ್ಟ್ 9 ರಂದು ಸ್ಥಳಾಂತರಿಸುವ ಆದೇಶವನ್ನು ನೀಡಿದ್ದರು. ಅಂದಿನಿಂದ 71 ಮಕ್ಕಳು ಸೇರಿದಂತೆ 204 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸಿನಿಹುಬೊವ್ ಮಾಹಿತಿ ನೀಡಿದ್ದಾರೆ.

ವರದಿಯ ಪ್ರಕಾರ, ಎಲ್ಲ ಸ್ಥಳಾಂತರಿಸಿದವರು ಅಗತ್ಯ ಸಹಾಯವನ್ನು ಪಡೆಯುತ್ತಿದ್ದಾರೆ. ಉಚಿತ ವಸತಿ, ಮಾನವೀಯ ನೆರವು, ವೈದ್ಯಕೀಯ ನೆರವು, IDP ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಸಹಾಯ ಮತ್ತು ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಂಬಂಧಿತ ಹಣಕಾಸಿನ ನೆರವು ಸೇರಿದಂತೆ ಅಗತ್ಯ ಸಹಾಯ ಪಡೆಯುತ್ತಿದ್ದಾರೆ ಎಂದು ಸಿನಿಹುಬೊವ್ ತಿಳಿಸಿದ್ದಾರೆ.

ಕಳೆದ ವಾರದಿಂದ ಖಾರ್ಕಿವ್ ಪ್ರದೇಶದ ಕುಪಿಯಾನ್ಸ್ಕ್ ಬಳಿ ರಷ್ಯಾದ ಶೆಲ್ ದಾಳಿ ತೀವ್ರಗೊಂಡಿದೆ. ರಷ್ಯಾ ಪಡೆಗಳು ನಗರವನ್ನು ಎರಡನೇ ಬಾರಿಗೆ ವಶಪಡಿಸಿಕೊಳ್ಳುವ ಪ್ರಯತ್ನಗಳನ್ನು ಮುಂದುವರಿಸಿವೆ. ಉಕ್ರೇನಿಯನ್ ಅಧಿಕಾರಿಗಳ ಪ್ರಕಾರ, 600 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 12 ಸಾವಿರ ಜನರು ನಗರವನ್ನು ತೊರೆಯಬೇಕಾಗಿದ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಪಶ್ಚಿಮ ಉಕ್ರೇನ್‌ನ ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶವನ್ನು ಗುರಿಯಾಗಿಸಿಕೊಂಡ ರಷ್ಯಾದ ಶೆಲ್​ ದಾಳಿ ನಡೆಸಿತ್ತು. ಈ ವೇಳೆ, 8 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದನು. ಬಾಲಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆತನನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗಲಿಲ್ಲ ಎಂದು ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಸ್ವಿಟ್ಲಾನಾ ಒನಿಶ್ಚುಕ್ ಹೇಳಿದ್ದಾರೆ.

ಓದಿ: Hawaii wildfire: ಶತಮಾನದ ಭೀಕರ ಕಾಡ್ಗಿಚ್ಚಿಗೆ ಹವಾಯಿ ದ್ವೀಪ ಭಸ್ಮ.. 89 ಮಂದಿ ಅಗ್ನಿಗಾಹುತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.