ETV Bharat / international

ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಸಚಿವ ಸ್ಥಾನಕ್ಕೆ ರಾಜೀನಾಮೆ; ಬ್ರಿಟನ್​ ಸರ್ಕಾರಕ್ಕೆ ಹಿನ್ನಡೆ

ಬ್ರಿಟನ್​ ಸರ್ಕಾರದ ಇಬ್ಬರು ಪ್ರಮುಖ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರಲ್ಲಿ ರಿಷಿ ಸುನಕ್‌ ಕೂಡಾ ಒಬ್ಬರು ಎನ್ನುವುದು ಗಮನಾರ್ಹ.

ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್, ಸಾಜಿದ್ ಜಾವಿದ್ ಸಚಿವ ಸ್ಥಾನಕ್ಕೆ ರಾಜೀನಾಮೆ

author img

By

Published : Jul 6, 2022, 6:44 AM IST

Updated : Jul 6, 2022, 7:10 AM IST

ಲಂಡನ್: ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್​ ಸರ್ಕಾರದ ಹಣಕಾಸು ಸಚಿವ ರಿಷಿ ಸುನಕ್​ ಮತ್ತು ಇನ್ನೋರ್ವ ಸಚಿವ (ಆರೋಗ್ಯ ಕಾರ್ಯದರ್ಶಿ) ಸಾಜಿದ್​ ಜಾವಿದ್ ತಮ್ಮ ಸ್ಥಾನ​ಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಭಾರಿ ಹಿನ್ನಡೆ ಉಂಟು ಮಾಡಿದೆ.

ಹಲವು ಹಗರಣಗಳು, ಕೊರೊನಾ ಸಂದರ್ಭದಲ್ಲಿ ನಿಯಮ ಮೀರಿ ಸಂತೋಷಕೂಟ ಸೇರಿದಂತೆ ಬೋರಿಸ್​ ಜಾನ್ಸನ್​ ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡು ಈ ಇಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

  • The public rightly expect government to be conducted properly, competently and seriously.

    I recognise this may be my last ministerial job, but I believe these standards are worth fighting for and that is why I am resigning.

    My letter to the Prime Minister below. pic.twitter.com/vZ1APB1ik1

    — Rishi Sunak (@RishiSunak) July 5, 2022 " class="align-text-top noRightClick twitterSection" data=" ">

"ಸಮರ್ಥ ಮತ್ತು ಗಂಭೀರ ಸರ್ಕಾರವನ್ನು ಜನರು ನಿರೀಕ್ಷಿಸಿದ್ದರು. ಆದರೆ, ಅದು ಜಾನ್ಸನ್​ ನಾಯಕತ್ವದಲ್ಲಿ ಕಂಡುಬರಲಿಲ್ಲ. ಹೀಗಾಗಿ ನಾನು ಸರ್ಕಾರದ ಭಾಗವಾಗಿ ಮುಂದುವರಿಯಲು ಬಯಸುವುದಿಲ್ಲ" ಎಂದು ರಿಷಿ ಸುನಕ್ ತಿಳಿಸಿದ್ದಾರೆ.

ಬೋರಿಸ್​ ಜಾನ್ಸನ್​ ಸರ್ಕಾರದಲ್ಲಿ ಹಲವು ಹಗರಣಗಳು ಕೇಳಿಬಂದಿವೆ. ಅಲ್ಲದೇ, ಕೊರೊನಾ ತುರ್ತು ಸಮಯದಲ್ಲಿ ಗಾಂಭೀರ್ಯತೆ ಕಾಪಾಡಬೇಕಾಗಿದ್ದ ಪ್ರಧಾನಿಯೇ ಪಾರ್ಟಿ ಏರ್ಪಡಿಸಿ ಜಲ್ಸಾ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮುಂದಿನ ಬ್ರಿಟನ್ ಪ್ರಧಾನಿ ಅಭ್ಯರ್ಥಿಯಾಗಿ ರಿಷಿ ಸುನಕ್​ ಹೆಸರು ಕೇಳಿಬರುತ್ತಿವೆ.

ಹೊಸ ಸಚಿವರ ನೇಮಕ: ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪ್ರಧಾನಿ ಜಾನ್ಸನ್​ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ರಿಷಿ ಸುನಕ್​ ಸ್ಥಾನಕ್ಕೆ ನದೀಮ್​ ಝಹಾವಿ, ಆರೋಗ್ಯ ಕಾರ್ಯದರ್ಶಿಯಾಗಿ ಸ್ಟೀವ್​ ಬಾರ್ಕ್ಲೇ ಅವರನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​ ಮೊರೆ ಹೋದ ಟ್ವಿಟರ್​

Last Updated : Jul 6, 2022, 7:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.