ETV Bharat / international

ಇಸ್ರೇಲ್​ನಿಂದ ಇಂದು 2 ವಿಮಾನ ವ್ಯವಸ್ಥೆ: 230 ಭಾರತೀಯರನ್ನು ಹೊತ್ತು ಬರುತ್ತಿದೆ ಮೊದಲ ಫ್ಲೈಟ್​

ಹಮಾಸ್​ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್​ನಿಂದ ಭಾರತೀಯರನ್ನು ಕರೆತರುವ ಕಾರ್ಯ ಮುಂದುವರಿದಿದೆ. ಇಂದು ಎರಡು ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

author img

By ETV Bharat Karnataka Team

Published : Oct 14, 2023, 7:52 PM IST

ಇಸ್ರೇಲ್​ನಿಂದ ವಿಮಾನ ವ್ಯವಸ್ಥೆ
ಇಸ್ರೇಲ್​ನಿಂದ ವಿಮಾನ ವ್ಯವಸ್ಥೆ

ಜೆರುಸಲೇಂ: ಸಂಘರ್ಷ ಪೀಡಿತ ಇಸ್ರೇಲ್​ನಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ 'ಆಪರೇಷನ್ ಅಜಯ್​​' ಕಾರ್ಯಾಚರಣೆಯ ಭಾಗವಾಗಿ ಶನಿವಾರ ಇನ್ನೆರಡು ವಿಮಾನಗಳು ಟೆಲ್​ ಅವಿವ್​ನಿಂದ ಭಾರತಕ್ಕೆ ಹಾರಲಿವೆ. ನಿಗದಿತ ಸಮಯದಂತೆ ಈಗಾಗಲೇ ಶನಿವಾರ ಸಂಜೆ 5 ಗಂಟೆಗೆ ಒಂದು ವಿಮಾನ 230 ಜನರನ್ನು ಹೊತ್ತು ಇಸ್ರೇಲ್​ನಿಂದ ಹೊರಟಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್​ಗೆ ಸೇರಿದ ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ಭೀಕರ ದಾಳಿ ನಡೆಸಿದರು. ಬಾಂಬ್​, ರಾಕೆಟ್​ಗಳು ದೇಶದ ಮೇಲೆ ನಿರಂತರವಾಗಿ ಬೀಳುತ್ತಿರುವ ಕಾರಣ ಅಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಸ್ವದೇಶಕ್ಕೆ ಮರಳಲು ಬಯಸುತ್ತಿದ್ದು, ಅಂಥವರನ್ನು ಕರೆತರಲು ಭಾರತ ಸರ್ಕಾರ ಅಕ್ಟೋಬರ್ 12 ರಿಂದ 'ಆಪರೇಷನ್ ಅಜಯ್' ಕಾರ್ಯಾಚರಣೆ ಆರಂಭಿಸಿದೆ. ಈಗಾಗಲೇ ಎರಡು ವಿಮಾನಗಲ್ಲಿ 546 ಜನರು ಭಾರತಕ್ಕೆ ಬಂದಿಳಿದಿದ್ದಾರೆ.

ಶನಿವಾರ ಮೊದಲ ವಿಮಾನವು ಸಂಜೆ 5 ಗಂಟೆಗೆ 230 ಪ್ರಯಾಣಿಕರನ್ನು ಹೊತ್ತು ತಂದರೆ, ಎರಡನೇ ವಿಮಾನವು ಸ್ಥಳೀಯ ಸಮಯ ರಾತ್ರಿ 11:00 ಗಂಟೆಗೆ ನಿಗದಿಯಾಗಿದ್ದು, 330 ಪ್ರಯಾಣಿಕರನ್ನು ಹೊತ್ತು ತರಲಿದೆ.

ಇಸ್ರೇಲ್‌ನಲ್ಲಿರುವ ನಮ್ಮ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ. ದೇಶ ತೊರೆಯಲು ಬಯಸುವವರಿಗೆ ಅನುಕೂಲವಾಗುವಂತೆ ರಾಯಭಾರ ಕಚೇರಿಯು ಹಗಲಿರುಳು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಇತರ ಜನರು ಸೇರಿದಂತೆ ಎಲ್ಲರನ್ನು ರಕ್ಷಿಸಲಾಗುವುದು. ಕೆಲ ಭಾರತೀಯರು ರಾಯಭಾರಿ ಕಚೇರಿಯೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಯಭಾರ ಕಚೇರಿಯ ಅಧಿಕಾರಿ ಸಂಜೀವ್ ಸಿಂಗ್ಲಾ ತಿಳಿಸಿದರು.

ಇಮೇಲ್​ ಮೂಲಕ ಮಾಹಿತಿ: ಇಸ್ರೇಲ್​ನಲ್ಲಿನ ರಾಯಭಾರ ಕಚೇರಿಯು ವಿಮಾನ ವ್ಯವಸ್ಥೆಗಳ ಬಗ್ಗೆ ಭಾರತೀಯರಿಗೆ ಇಮೇಲ್ ಮೂಲಕ ಮಾಹಿತಿ ರವಾನಿಸುತ್ತಿದೆ. ಅದರಂತೆ ಇಂದಿನ ಎರಡು ವಿಶೇಷ ವಿಮಾನಗಳ ಬಗ್ಗೆ ನೋಂದಾಯಿತ ಭಾರತೀಯ ನಾಗರಿಕರಿಗೆ ಮಾಹಿತಿ ನೀಡಲಾಗಿದೆ. ನೋಂದಾಯಿತರನ್ನು ಕರೆತರಲಾಗುತ್ತಿದೆ. ಉಳಿದವರನ್ನು ಮುಂದಿನ ವಿಮಾನಗಳಿಗೆ ಕಾಯಲು ಸೂಚಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಜನರನ್ನು ಕರೆತರಲಾಗುತ್ತಿದೆ. ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಭಾರತಕ್ಕೆ ಬಂದಿಳಿದ ಎರಡು ತಂಡ: ಹಮಾಸ್​ ಉಗ್ರರ ಬಾಂಬ್​ ದಾಳಿಯಿಂದ ರಕ್ಷಣೆ ಬಯಸಿದ 211 ಜನರ ಮೊದಲ ತಂಡವನ್ನು ಇಸ್ರೇಲ್​ನ ವಿಮಾನ ನಿಲ್ದಾಣದಿಂದ ಅಕ್ಟೋಬರ್​ 12 ರಂದು ಕರೆತಂದರೆ, 235 ಜನರ ಎರಡನೇ ತಂಡವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಈಗ ಮೂರು ಮತ್ತು ನಾಲ್ಕನೇ ತಂಡವನ್ನು ಕರೆತರಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳು, ಐಟಿ ವೃತ್ತಿಪರರು ಮತ್ತು ವಜ್ರದ ವ್ಯಾಪಾರಿಗಳು ಸೇರಿದಂತೆ ಸುಮಾರು 18 ಸಾವಿರ ಭಾರತೀಯ ಪ್ರಜೆಗಳು ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ಇದೆ.

ಅಕ್ಟೋಬರ್ 7 ರಂದು ಶಸ್ತ್ರಸಜ್ಜಿತ ಹಮಾಸ್ ಉಗ್ರಗಾಮಿಗಳು ಭೂ, ವಾಯು ಮತ್ತು ಸಮುದ್ರದ ಮೂಲಕ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ ತನ್ನ ಸೇನಾಪಡೆಗಳಿಂದ ದಾಳಿ ನಡೆಸುತ್ತಿದೆ. ಯುದ್ಧದಿಂದಾಗಿ ಉಭಯ ರಾಷ್ಟ್ರಗಳಲ್ಲಿ 3500 ಕ್ಕೂ ಅಧಿಕ ಜನರು ಹತರಾಗಿದ್ದಾರೆ. ಇಸ್ರೇಲ್​ನಲ್ಲಿ 1,300 ಕ್ಕೂ ಹೆಚ್ಚು ಜನರು ಬಲಿಯಾಗಿದ್ದರೆ, ಗಾಜಾದಲ್ಲಿ ಕನಿಷ್ಠ 1,900 ಜನರನ್ನು ಇಸ್ರೇಲ್​ ಬಲಿ ಪಡೆದಿದೆ.

ಇದನ್ನೂ ಓದಿ: ಆಪರೇಷನ್ ಅಜಯ್: ಇಸ್ರೇಲ್​​​ನಿಂದ ದೆಹಲಿಗೆ ಬಂದಿಳಿದ​ 212 ಭಾರತೀಯರನ್ನು ಹೊತ್ತ ತಂದ ಮೊದಲ ವಿಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.