ETV Bharat / international

ಅಮೆರಿಕ: ನಯಾಗರಾ ಫಾಲ್ಸ್‌ ಸಮೀಪ ವಾಹನ ಸ್ಫೋಟ, ಇಬ್ಬರು ಸಾವು; ಉಗ್ರರ ಕೃತ್ಯ?

author img

By ANI

Published : Nov 23, 2023, 8:34 AM IST

Vehicle explosion at US-Canada border crossing: ಅಮೆರಿಕ ಮತ್ತು ಕೆನಡಾ ದೇಶಗಳ ನಡುವೆ ಇರುವ ಪ್ರಸಿದ್ಧ ನಯಾಗರಾ ಫಾಲ್ಸ್ ಸೇತುವೆಯ ಮೇಲೆ ಬುಧವಾರ ಕಾರೊಂದು ದಿಢೀರ್ ಸ್ಫೋಟಗೊಂಡಿದೆ.

US Canada border crossing  Two dead in vehicle explosion  Niagara Falls  ನಯಾಗರಾ ಫಾಲ್ಸ್‌ ಬಳಿ ವಾಹನ ಸ್ಪೋಟ  ಇಬ್ಬರು ಸಾವು  ಎಚ್ಚೆತ್ತ ಭದ್ರತಾ ಮಂಡಳಿ  ಅಮೆರಿಕ ಮತ್ತು ಕೆನಡಾವನ್ನು ಸಂಪರ್ಕಿಸುವ ನಯಾಗರಾ ಫಾಲ್ಸ್  ನಯಾಗರಾ ಫಾಲ್ಸ್ ಸೇತುವೆ  ರೈನ್‌ಬೋ ಸೇತುವೆಯ ಮೇಲೆ ಕಾರೊಂದು ಸ್ಫೋಟ  ಚಾಲಕ ಸೇರಿದಂತೆ ಇಬ್ಬರು ಮೃತ  ಅಲರ್ಟ್ ಮೋಡ್‌ನಲ್ಲಿ ಭದ್ರತಾ ಏಜೆನ್ಸಿ  ಗಾಯಾಳು ಡಿಸ್ಚಾರ್ಜ್  ಜನನಿಬಿಡ ಮಾರ್ಗಗಳು ಬಂದ್
ಇಬ್ಬರು ಸಾವು- ಎಚ್ಚೆತ್ತ ಭದ್ರತಾ ಮಂಡಳಿ

ನ್ಯೂಯಾರ್ಕ್​(ಅಮೆರಿಕ): ವಿಶ್ವಪ್ರಸಿದ್ಧ ನಯಾಗರಾ ಜಲಪಾತ ಬಳಿ ಇರುವ ಕೆನಡಾ ಮತ್ತು ಅಮೆರಿಕವನ್ನು ಸಂಪರ್ಕಿಸುವ ರೈನ್‌ಬೋ ಸೇತುವೆಯ ಮೇಲೆ ಕಾರೊಂದು ಸ್ಫೋಟಗೊಂಡು ಚಾಲಕ ಮತ್ತ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಮೆರಿಕದ ಭದ್ರತಾ ತಂಡಗಳು ಕಟ್ಟೆಚ್ಚರ ವಹಿಸಿವೆ. ಭಯೋತ್ಪಾದಕರ ದಾಳಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಘಟನೆಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ನ್ಯೂಯಾರ್ಕ್ ಮತ್ತು ದಕ್ಷಿಣ ಒಂಟಾರಿಯೊ ನಡುವಿನ ಇತರ ಮೂರು ಅಂತರರಾಷ್ಟ್ರೀಯ ಗಡಿ ಕಾರ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಅಧಿಕಾರಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಘಟನೆಯ ತನಿಖೆಗಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಿಯೋಜಿಸಲಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.

ನ್ಯೂಯಾರ್ಕ್‌ನ ಯುಎಸ್ ಸೆನೆಟ್ ಮೆಜಾರಿಟಿ ಲೀಡರ್ ಚಾರ್ಲ್ಸ್ ಶುಮರ್ ಮಾತನಾಡಿ, "ನಾನು ಎಫ್‌ಬಿಐಯಿಂದ ಮಾಹಿತಿ ಸ್ವೀಕರಿಸಿದ್ದೇನೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮೃತರ ಗುರುತು ಮತ್ತು ಉದ್ದೇಶದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಚಾಲಕನ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮೊದಲು ಅಪಘಾತ ಸಂಭವಿಸಿದೆ, ನಂತರ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ" ಎಂದು ಸಿಬಿಪಿ ಮೂಲಗಳು ತಿಳಿಸಿವೆ.

ಕಟ್ಟೆಚ್ಚರ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಥ್ಯಾಂಕ್ಸ್ಗಿವಿಂಗ್ ಎಂಬ ಕಾರ್ಯಕ್ರಮದ ಮುನ್ನಾದಿನ ಅಮೆರಿಕದಲ್ಲಿ ರಜೆ ಇರುವ ಕಾರಣದಿಂದಾಗಿ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿತ್ತು. ಇದರ ನಡುವೆ ಈ ಘಟನೆ ನಡೆದಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬಫೆಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಇನ್ನು, ಸ್ಫೋಟದಿಂದ ಗಾಯಗೊಂಡ ವ್ಯಕ್ತಿಗೆ ಸ್ಥಳೀಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಡಿಸ್ಚಾರ್ಜ್ ಮಾಡಲಾಗಿದೆ ಎಂದು ನಯಾಗರಾ ಫಾಲ್ಸ್ ಮೆಮೋರಿಯಲ್ ಮೆಡಿಕಲ್ ಸೆಂಟರ್ ಹೇಳಿದೆ.

ಹೆಚ್ಚು ಜನನಿಬಿಡ ರಸ್ತೆಗಳು ಬಂದ್​: ಪಶ್ಚಿಮ ನ್ಯೂಯಾರ್ಕ್ ಮತ್ತು ದಕ್ಷಿಣ ಒಂಟಾರಿಯೊ ನಡುವಿನ ನಯಾಗರಾ ನದಿಯುದ್ದಕ್ಕೂ ರೈನ್‌ಬೋ ಸೇತುವೆ ಮತ್ತು ಎಲ್ಲಾ ಮೂರು ಗಡಿ ಕ್ರಾಸಿಂಗ್​ಗಳಾದ ಪೀಸ್​ ಬ್ರಿಡ್ಜ್​, ಲೆವಿಸ್ಟನ್-ಕ್ವೀನ್ಸ್‌ಟನ್ ಬ್ರಿಡ್ಜ್​ ಮತ್ತು ವಿರ್ಲ್‌ಪೂಲ್ ಬ್ರಿಡ್ಜ್​ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ. ಇತರ ಅಂತರರಾಷ್ಟ್ರೀಯ ಕ್ರಾಸಿಂಗ್‌ಗಳು ಎಚ್ಚರಿಕೆಯ ಸ್ಥಿತಿಯಲ್ಲಿ ತೆರೆದಿವೆ. ನಯಾಗರಾ-ಫ್ರಾಂಟಿಯರ್ ಟ್ರಾನ್ಸಿಟ್ ಅಥಾರಿಟಿ ನಿರ್ವಹಿಸುವ ಪ್ರದೇಶದಲ್ಲಿನ ವಿಮಾನ ನಿಲ್ದಾಣಗಳು ಮತ್ತು ರೈಲ್ವೆಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಅಮೆರಿಕ: ಶಾಪಿಂಗ್ ಸೆಂಟರ್‌ನ ಪಾರ್ಕಿಂಗ್ ಸ್ಥಳದಲ್ಲಿ ವಿಮಾನ ಪತನ, ಪೈಲಟ್​ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.