ETV Bharat / international

ಅಫ್ಘಾನಿಸ್ತಾನದ ಹೆರಾತ್​ ಮಸೀದಿಯಲ್ಲಿ ಭಾರಿ ಬಾಂಬ್​ ಸ್ಫೋಟ: 20ಕ್ಕೂ ಹೆಚ್ಚು ಮಂದಿ ಸಾವು - ಕಾಬೂಲ್‌ನಲ್ಲಿ ಹಲವಾರು ಸ್ಫೋಟ

ಈ ಭೀಕರ ಬಾಂಬ್​​ ಸ್ಫೋಟಕ್ಕೆ ಕಾರಣರಾದವರಿಗೆ ತಾಲಿಬಾನ್ ಸರ್ಕಾರ ಉಗ್ರ ಶಿಕ್ಷೆ ಕೊಡಲಿದೆ ಎಂದು ತಾಲಿಬಾನ್​ ವಕ್ತಾರ ಮುಜಾಹಿದ್ ಘೋಷಣೆ ಮಾಡಿದ್ದಾರೆ. ಅವರು ಯಾವುದೇ ಉಗ್ರಗಾಮಿ ಸಂಘಟನೆ ಹೆಸರು ಹೇಳಲಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪಿನ ವಿರುದ್ಧ ತಾಲಿಬಾನ್​ ಹೋರಾಡುತ್ತಿದೆ. ಈ ಬಗ್ಗೆಯೇ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.

Twenty killed in mosque blast in Afghanistan's Herat
ಅಫ್ಘಾನಿಸ್ತಾನದ ಹೆರಾತ್​ ಮಸೀದಿಯಲ್ಲಿ ಭಾರಿ ಬಾಂಬ್​ ಸ್ಫೋಟ
author img

By

Published : Sep 2, 2022, 10:25 PM IST

ಕಾಬೂಲ್, ಅಫ್ಘಾನಿಸ್ತಾನ: ಶುಕ್ರವಾರದ ಪ್ರಾರ್ಥನೆಯ ವೇಳೆ ವಾಯವ್ಯ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್​ ಸ್ಫೋಟ ಸಂಭವಿಸಿದೆ. ಈ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.

ಹೆರಾತ್ ನಗರದ ಗುಜರ್ಗಾ ಮಸೀದಿಯಲ್ಲಿ ಮಧ್ಯಾಹ್ನ 12:40ರ ಸುಮಾರಿಗೆ ಬಾಂಬ್ ದಾಳಿ ನಡೆದಿದೆ ಎಂದು ಖಮಾ ಪ್ರೆಸ್ ವರದಿ ಮಾಡಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಘಟನೆಯನ್ನು ಖಂಡಿಸಿದ್ದು, ಧರ್ಮ ಶತ್ರುಗಳು ನಡೆಸಿದ ಹೇಡಿತನದ ದಾಳಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಈ ಭೀಕರ ಬಾಂಬ್​​ ಸ್ಫೋಟಕ್ಕೆ ಕಾರಣರಾದವರನ್ನು ತಾಲಿಬಾನ್ ಸರ್ಕಾರ ಉಗ್ರವಾಗಿ ಶಿಕ್ಷೆ ಕೊಡಲಿದೆ ಎಂದು ತಾಲಿಬಾನ್​ ವಕ್ತಾರ ಮುಜಾಹಿದ್ ಘೋಷಣೆ ಮಾಡಿದ್ದಾರೆ. ಅವರು ಯಾವುದೇ ಉಗ್ರಗಾಮಿ ಸಂಘಟನೆ ಹೆಸರು ಹೇಳಲಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪಿನ ವಿರುದ್ಧ ತಾಲಿಬಾನ್​ ಹೋರಾಡುತ್ತಿದೆ. ಈ ಬಗ್ಗೆಯೇ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.

ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್, ಗುಜರ್ಗಾ ಮಸೀದಿಯಲ್ಲಿ ನಡೆದ ಸ್ಫೋಟವನ್ನು ಖಂಡಿಸಿದ್ದು, ಇದು ಮಾನವ ಮತ್ತು ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ರಾಜಧಾನಿ ಕಾಬೂಲ್‌ನಲ್ಲಿ ಹಲವಾರು ಸ್ಫೋಟಗಳು ವರದಿಯಾಗಿದ್ದು, ಹತ್ತಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಈ ಎಲ್ಲ ಸ್ಫೋಟಗಳ ಬೆನ್ನಲ್ಲೇ ಗುಜರ್ಗಾದಲ್ಲಿ ಭೀಕರ ಸ್ಫೋಟ ಸಂಭವಿಸಿದೆ.

ಇದನ್ನು ಓದಿ:ಅರ್ಜೆಂಟೀನಾ ಉಪಾಧ್ಯಕ್ಷೆ ಮೇಲೆ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.