ETV Bharat / international

ಟರ್ಕಿಯಲ್ಲಿ ಅವಶೇಷದಡಿಯಿಂದ ಕೇಳಿ ಬಂತು ದ್ವನಿ.. ತಾಯಿಯನ್ನು ರಕ್ಷಿಸಲು ಅಂಗಲಾಚಿದ ಮಗಳು!

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಸತ್ತವರ ಸಂಖ್ಯೆ ಮಂಗಳವಾರ 5,000 ದಾಟಿದೆ. ಸಾವಿರಾರು ಕಾರ್ಯಕರ್ತರು ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿರುವ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಶೀತ ಹವಾಮಾನವು ಶೋಧ ಕಾರ್ಯಾಚರಣೆಗಳಿಗೆ ತೀವ್ರ ಅಡಚಣೆಯಾಗಿದೆ.

Turkiye Syria earthquake latest update
ಟರ್ಕಿ, ಸಿರಿಯಾದಲ್ಲಿ ತೀವ್ರ ಭೂಕಂಪ
author img

By

Published : Feb 7, 2023, 7:23 PM IST

ಅದಾನ (ಟರ್ಕಿ): ಪೂರ್ವ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ನಿನ್ನೆ ಮತ್ತೆ ಮೂರು ಬಾರಿ ಪ್ರಬಲ ಭೂಕಂಪನಗಳು ಆಗಿದ್ದರೆ, ಇಂದು ಮತ್ತೆ ಭೂಮಿ ನಡುಗಿದೆ. ಅತ್ತ ಕಟ್ಟಡಗಳ ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಭೂಕಂಪದ ತೀವ್ರತೆ ಹಿನ್ನೆಲೆ 5,000ಕ್ಕೂ ಹೆಚ್ಚು ಜನರು ಸಾವಿನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆ ಆಗುತ್ತಲೇ ಇದೆ.

Turkiye Syria earthquake latest update
ಶೋಧ ಕಾರ್ಯಾಚರಣೆ ನಡೆಯಿತು

ಪ್ರಪಂಚದಾದ್ಯಂತ ದೇಶಗಳು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಜೊತೆಗೆ ಸಹಾಯ ಮಾಡಲು ತಂಡಗಳನ್ನು ಕಳುಹಿಸಿಕೊಟ್ಟಿವೆ. ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ 24,400ಕ್ಕೂ ಹೆಚ್ಚು ತುರ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಆದರೆ, ಸೋಮವಾರ ನಡೆದ ಭೂಕಂಪದಿಂದ ಟರ್ಕಿಯೊಂದರಲ್ಲೇ ಸುಮಾರು 6,000 ಕಟ್ಟಡಗಳು ನೆಲಸಮವಾಗಿವೆ.

ತಾಯಿಯನ್ನು ರಕ್ಷಿಸಲು ಅಂಗಲಾಚಿದ ಮಗಳು: ಬದುಕುಳಿದವರನ್ನು ರಕ್ಷಿಸುವ ಕಾರ್ಯಗಳಿಗೆ ಅತೀ ಕಡಿಮೆ ತಾಪಮಾನವು ಅಡ್ಡಿಯನ್ನುಂಟು ಮಾಡಿದೆ. ಹಟಾಯ್ ಪ್ರಾಂತ್ಯದ ರಾಜಧಾನಿ ಅಂಟಾಕ್ಯಾ ನಗರದಲ್ಲಿ ಕುಸಿದ ಕಟ್ಟಡದ ಅವಶೇಷಗಳ ಅಡಿ ತನ್ನ ತಾಯಿಯ ಧ್ವನಿಯನ್ನು ಕೇಳಿದೆ ಎಂದು ಪುತ್ರಿ ನುರ್ಗುಲ್ ಅಟಾಯ್ ತಿಳಿಸಿದ್ದಾರೆ. ಆದರೆ, ಯಾವುದೇ ರಕ್ಷಣಾ ಸಿಬ್ಬಂದಿ ಇಲ್ಲದ ಕಾರಣ, ರಕ್ಷಣಾ ಪ್ರಯತ್ನಗಳು ನಿಷ್ಪ್ರಯೋಜಕವಾದವು ಎನ್ನಲಾಗಿದೆ.

"ನಾವು ಕಾಂಕ್ರೀಟ್ ಚಪ್ಪಡಿಯನ್ನು ಎತ್ತಿದರೆ ಮಾತ್ರ ಅವರನ್ನು ತಲುಪಲು ಸಾಧ್ಯವಾಗುತ್ತದೆ" ಎಂದ ಅವರು, "ನನ್ನ ತಾಯಿಗೆ 70 ವರ್ಷ, ದೀರ್ಘ ಕಾಲದವರೆಗೆ ತಡೆದುಕೊಳ್ಳುವ ಶಕ್ತಿ ಇಲ್ಲ." ಎಂದು ಮಗಳು ಅಳಲು ತೋಡಿಕೊಂಡಿದ್ದಾರೆ.

1500 ಕಟ್ಟಡಗಳು ನೆಲಸಮ: ನೈಋತ್ಯ ಭಾಗದಲ್ಲಿರುವ ಹಟೇ ಪ್ರಾಂತ್ಯವೇ ಭೂಕಂಪದ ಕೇಂದ್ರ ಬಿಂದು. ಈ ಭಾಗದಲ್ಲಿ 1,500 ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ''ಯಾವುದೇ ನೆರವು ಅಥವಾ ರಕ್ಷಣಾ ತಂಡಗಳು ಆಗಮಿಸದೇ ಇರುವುದರಿಂದ ಅವಶೇಷಗಳಡಿ ಸಂಬಂಧಿಕರು ಸಿಲುಕಿಕೊಂಡಿದ್ದಾರೆ'' ಎಂದು ಅನೇಕ ಜನರು ಗೋಳಾಡುತ್ತಿದ್ದಾರೆ.

ಕೆಳಗೆ ಸಿಲುಕಿಕೊಂಡಿರುವರನ್ನು ರಕ್ಷಿಸುವ ಕೆಲಸ ವೇಗವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸತ್ತವರ ಸಂಖ್ಯೆ ಈಗಿನ ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಊಹಿಸಲಾಗುತ್ತಿದೆ. ಸಾವಿನ ಸಂಖ್ಯೆ ಸುಮಾರು 20,000ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಬೀದಿಗೆ ಬಿದ್ದ ಜನರ ಬದುಕು: “ಮುಂದಿನ ದಿನಗಳಲ್ಲೂ ಭೂಕಂಪದಿಂದ ಕಟ್ಟಡಗಳ ಕುಸಿತದ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಆದ್ದರಿಂದ ಆರಂಭಿಕ ಸಂಖ್ಯೆಗಳಿಗೆ ಹೋಲಿಸಿದರೆ, ಎಂಟು ಪಟ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಮರಣ ಹೊಂದಿದ ಅಥವಾ ಗಾಯಗೊಂಡ ಜನರ ಸಂಖ್ಯೆಯು ಏರಿಕೆಯಾಗುತ್ತಲೇ ಸಾಗಿದೆ. ಆರಂಭಿಕ ವರದಿಗಳು ಆಧರಿಸಿದರೆ, ಮುಂದಿನ ವಾರದಲ್ಲಿ ಸಾಕಷ್ಟು ಹಾನಿ ಸಂಭವಿಸಲಿದೆ ಎಂದು ಯುರೋಪ್‌ನ ಡಬ್ಲ್ಯೂಎಚ್​ಓನ ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್ ಸ್ಮಾಲ್‌ವುಡ್ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಅವಶೇಷಗಳ ಅಡಿ ಸಿಲುಕಿದವರನ್ನು ಹೊರಗೆ ಕರೆದುಕೊಂಡು ಬರುತ್ತಿದ್ದಂತೆ, ನೆರೆದಿದ್ದ ಜನರಿಂದ ರಾತ್ರಿಯಿಡೀ ಹರ್ಷೋದ್ಘಾರಗಳು ಕೇಳಿಸಿತು. ಟರ್ಕಿಯ ಆಗ್ನೇಯ ಪ್ರಾಂತ್ಯದ ಕಹ್ರಮನ್‌ಮರಸ್‌ನಲ್ಲಿ ಸಂಭವಿಸಿದ ಭೂಕಂಪವು ಡಮಾಸ್ಕಸ್, ಬೈರುತ್‌ ಹಾಗೂ ಕೈರೋದ ನಿವಾಸಿಗಳನ್ನು ಬದುಕನ್ನು ಬೀದಿಗೆ ತಳ್ಳಿದೆ.

ಉತ್ತರ ಸಿರಿಯಾದಲ್ಲಿ ಆರೋಗ್ಯ ಸೇವೆ: ಸಿರಿಯಾದ ಮಿಷನ್ ಮುಖ್ಯಸ್ಥ ಸೆಬಾಸ್ಟಿಯನ್ ಗೇ ಮಾತನಾಡಿ, ಗಾಯಾಳುಗಳಿಗೆ ಉತ್ತರ ಸಿರಿಯಾದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ಹಗಲಿರುಳು ವೈದ್ಯಕೀಯ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಟರ್ಕಿಯ ಹಟೇ ಪ್ರಾಂತ್ಯದಲ್ಲಿ ಸಾವಿರಾರು ಜನರು ಕ್ರೀಡಾ ಕೇಂದ್ರಗಳಲ್ಲಿ ಅಥವಾ ಸಭಾಂಗಣಗಳಲ್ಲಿ ಆಶ್ರಯ ಪಡೆದಿದ್ದಾರೆ. ಟರ್ಕಿ - ಸಿರಿಯಾ ಗಡಿ ಪ್ರದೇಶದಲ್ಲಿ ನಿರಾಶ್ರಿತರಿಗಾಗಿ ಸೈನ್ಯದಿಂದ ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಹಟೇ ಪ್ರಾಂತ್ಯದಲ್ಲಿ ಆಸ್ಪತ್ರೆ ಸೇರಿದಂತೆ ರಕ್ಷಣಾ ಕಾರ್ಯಗಳು ತೀವ್ರಗತಿಯಲ್ಲಿ ನಡೆಯುತ್ತಿದೆ. ನಿರಾಶ್ರಿತರ ಸಹಾಯಕ್ಕಾಗಿ ಮಿಲಿಟರಿಯನ್ನು ನಿಯೋಜಿಸಲಾಗಿದೆ. ಅಂಕಾರಾ ಮೂಲದ ಎಂಟು ಮಿಲಿಟರಿ ಪಡೆಗಳು ಮತ್ತು ರಕ್ಷಣಾ ತಂಡಗಳನ್ನು ಸಹ ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿವ ಹುಲುಸಿ ಅಕರ್ ಹೇಳಿದರು.

ಟರ್ಕಿಯಲ್ಲಿ ಸಾವಿನ ಸಂಖ್ಯೆ 3,419ಕ್ಕೆ ಏರಿಕೆ: ಭೂಕಂಪದ ಕೇಂದ್ರದಿಂದ ಸುಮಾರು 33 ಕಿ.ಮೀ. ದೂರದಲ್ಲಿರುವ ಗಾಜಿಯಾಂಟೆಪ್‌ ಪ್ರದೇಶದಲ್ಲಿರುವ ಶಾಪಿಂಗ್ ಮಾಲ್‌ಗಳು, ಕ್ರೀಡಾಂಗಣಗಳು, ಮಸೀದಿಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಟರ್ಕಿಯಲ್ಲಿ ಒಟ್ಟು ಸಾವಿನ ಸಂಖ್ಯೆ 3,419 ಕ್ಕೆ ಏರಿಕೆಯಾಗಿದೆ. 20,534ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ಪ್ರಕಾರ, ಸಿರಿಯಾದ ಸರ್ಕಾರಿ ಸ್ವಾಮ್ಯದ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ 812 ಜನರಿಗೆ ಏರಿಕೆಯಾಗಿದೆ. ಸುಮಾರು 1,450 ಜನರು ಗಾಯಗೊಂಡಿದ್ದಾರೆ. ದೇಶದ ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯದಲ್ಲಿ ಕನಿಷ್ಠ 790 ಮಂದಿ ಸಾವನ್ನಪ್ಪಿದ್ದಾರೆ. 2,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ನೆರವು: ಇತ್ತೀಚಿನ ಪ್ರತಿಜ್ಞೆಯಲ್ಲಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು, ರಕ್ಷಣಾ ಕಾರ್ಯಾಚರಣೆಗೆ 60 ವ್ಯಕ್ತಿಗಳ ತಂಡ ಹಾಗೂ ವೈದ್ಯಕೀಯ ಸೌಲಭ್ಯ ಮತ್ತು 50 ಸೈನಿಕರನ್ನು ತ್ವರಿತವಾಗಿ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಪಾಕಿಸ್ತಾನದ ಸರ್ಕಾರವು ಮಂಗಳವಾರ ಮುಂಜಾನೆ ಪರಿಹಾರ ಸಾಮಗ್ರಿಗಳನ್ನು ಮತ್ತು 50 ಸದಸ್ಯರ ಹುಡುಕಾಟ ಮತ್ತು ರಕ್ಷಣಾ ತಂಡವನ್ನು ಸಾಗಿಸುವ ವಿಮಾನವನ್ನು ಕಳುಹಿಸಿದೆ. ಬುಧವಾರದಿಂದ ಸಿರಿಯಾ ಮತ್ತು ಟರ್ಕಿಗೆ ದೈನಂದಿನ ಸಹಾಯಕ್ಕಾಗಿ ವಿಮಾನಗಳು ಸಂಚರಿಸುತ್ತಿವೆ ಎಂದರು. ಶೋಧ ಕಾರ್ಯಕ್ಕೆ ಮತ್ತು ರಕ್ಷಣಾ ತಲಾ ಎರಡು ತಂಡಗಳನ್ನು ಕಳುಹಿಸುವುದಾಗಿ ಭಾರತ ತಿಳಿಸಿದೆ.

ಇದನ್ನೂ ಓದಿ: ಈ ದಶಕದ ಅತ್ಯಂತ ಭೀಕರ ಭೂಕಂಪ ಕಂಡ ಟರ್ಕಿ - ಸಿರಿಯಾ: ಇಷ್ಟೊಂದು ವಿನಾಶಕ್ಕೆ ಕಾರಣಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.